ಈಗಿನ ಅವಸರದ ಜೀವನಶೈಲಿಯಿಂದ ಮುಖದ ಕಾಳಜಿಯನ್ನು ಮಾಡುವುದು ಕಡಿಮೆಯಾಗಿದೆ ಹಾಗೂ ಅನೇಕ ಕೆಮಿಕಲ್ ಯುಕ್ತ ಕ್ರೀಮ್ ಗಳನ್ನು ಬಳಸುವುದು ಹೆಚ್ಚಾಗಿದೆಹೀಗಾಗಿ ಮುಖದಲ್ಲಿ ಕಪ್ಪು ಕಲೆ,ಬಂಗು, ಪಿಂಪಲ್, ಮಾರ್ಕ್, ಸುಕ್ಕು ಮತ್ತು ಇನ್ನಿತರ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ.ಇನ್ನೂ ಇಂತಹ ತೊಂದರೆಗಳನ್ನು ನಿವಾರಿಸಲು ಮನೆಯಲ್ಲಿಯೇ ನೈಸರ್ಗಿಕವಾಗಿ ತಯಾರು ಮಾಡಿಕೊಳ್ಳಬಹುದಾದ ಕೆಲವು ಮನೆಮದ್ದುಗಳನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.
ಈ ಮನೆಮದ್ದನ್ನು ಪುರುಷರು ಮತ್ತು ಮಹಿಳೆಯರು ಹಾಗೂ 13 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಬಳಕೆ ಮಾಡಬಹುದಾಗಿದೆ.
ಈ ಮನೆಮದ್ದನ್ನು ಸಾಮಾನ್ಯ ಚರ್ಮ ಹೊಂದಿದವರು, ಒಣ ಚರ್ಮವನ್ನು ಹೊಂದಿದವರು, ಎಣ್ಣೆ ಚರ್ಮವನ್ನು ಹೊಂದಿದವರು ಸಹ ಬಳಕೆ ಮಾಡಬಹುದಾಗಿದೆ.ಇನ್ನೂ ಆ ಪರಿಣಾಮಕಾರಿ ಮನೆಮದ್ದು ಯಾವುದೆಂದು ನೋಡುವುದಾದರೆ ಅದೇ ಟೊಮೆಟೊ ಹಣ್ಣು.
ಟೊಮೆಟೊ ಹಣ್ಣನ್ನು ಸ್ನಾನ ಕ್ಕೆ ಹೋಗುವ ಮುನ್ನ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದಲ್ಲಿರುವ ಧೂಳು, ಕೊಳೆ, ಎಣ್ಣೆಯ ಅಂಶ, ಸತ್ತ ಚರ್ಮವನ್ನು ತೆಗೆದು ಹಾಕಿ ಹೊಸ ಚರ್ಮದ ಬೆಳವಣಿಗೆಗೆ ಸಹಾಯ ಮಾಡುತ್ತದೆ.ಟೊಮೆಟೊದಲ್ಲಿರುವ ಪೊಟ್ಯಾಶಿಯಂ ಮತ್ತು ವಿಟಮಿನ್ ಸಿ ಅಂಶವು ಚರ್ಮ ಕಾಂತಿಯುತವಾಗುವಂತೆ ಮಾಡುತ್ತದೆ.ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗಳು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.ಕಪ್ಪು ಕಲೆಗಳು ನಿವಾರಣೆಯಾಗುತ್ತವೆ.ಕಪ್ಪಗಿರುವವರು ಇದನ್ನು ನಿಯಮಿತವಾಗಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ , ಬಳಕೆ ಮಾಡುವುದರಿಂದ ಕ್ರಮೇಣ ಮುಖವು ಬೆಳ್ಳಗೆ ಆಗುತ್ತದೆ ಹಾಗೂ ಕಾಂತಿಯುತವಾಗುತ್ತದೆ.ಇನ್ನೂ ಟೊಮೆಟೊವನ್ನು ಸಾಮಾನ್ಯ ಚರ್ಮ ಹೊಂದಿದವರು ಮತ್ತು ಒಣ ಚರ್ಮ ಹೊಂದಿದವರು ಹೇಗೆ ಬಳಸಬೇಕು ಎಂಬುದನ್ನು ತಿಳಿಯೋಣ ಬನ್ನಿ.
1 ಚಿಕ್ಕ ಪ್ಲೇಟಿಗೆ1 ಸ್ಪೂನ್ ಜೇನುತುಪ್ಪ , 1 ಸ್ಪೂನ್ ಕೊಬ್ಬರಿ ಎಣ್ಣೆ ಹಾಕಿ ಇವೆರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ.ಈಗ 1 ಟೊಮೆಟೊ ಹಣ್ಣನ್ನು ತೆಗೆದುಕೊಂಡು ಅರ್ಧಕ್ಕೆ ಕತ್ತರಿಸಿ ಅದರ 1 ತುಂಡನ್ನು ರೆಡಿ ಮಾಡಿಟ್ಟುಕೊಂಡಿರುವ ಮಿಶ್ರಣದಲ್ಲಿ ಅದ್ದಿ ಅದನ್ನು ಮುಖಕ್ಕೆ ದುಂಡಾಕಾರವಾಗಿ ಮೊಸಾಕ್ ಮಾಡಿಕೊಳ್ಳುತ್ತಾ ಹಚ್ಚಿಕೊಳ್ಳಿ.ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.ಮೊದಲಿಗೆ ಮುಖವನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆದುಕೊಂಡು ನಂತರ ಮುಖಕ್ಕೆ ಹಚ್ಚಿ.
ಈ ರೀತಿ ಪ್ರತಿದಿನ 5 ನಿಮಿಷ ಮಸಾಜ್ ಮಾಡಿಕೊಳ್ಳಿ.
ಮುಖದಲ್ಲಿರುವ ಕೊಳೆ ಹೋಗಲು 1 ಚಿಕ್ಕ ಪ್ಲೇಟ್ ಗೆ 1 ಸ್ಪೂನ್ ಅಕ್ಕಿ ಹಿಟ್ಟನ್ನು ಹಾಕಿ ಕೊಂಡು ಅದರೊಳಗೆ ಟೊಮೆಟೊ ತುಂಡನ್ನು ಅದ್ದಿ ಮುಖಕ್ಕೆ ದುಂಡಾಕಾರವಾಗಿ ಮಸಾಜ್ ಸ್ಕ್ರಬ್ ಮಾಡಿಕೊಳ್ಳಿ.ಇದು ಎಣ್ಣೆ ಅಂಶ ಇರುವ ಚರ್ಮ ದವರಿಗೆ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಎಣ್ಣೆ ಚರ್ಮ ಹೊಂದಿದವರು ಅಲೋವೆರಾ ಜೆಲ್ಲನ್ನು ಟೊಮೆಟೊ ಹಣ್ಣಿನ ತುಂಡನ್ನು ಆಲೋವೆರಾ ಮಿಶ್ರಣಕ್ಕೆ ಅದ್ದಿ ಮುಖಕ್ಕೆ ದುಂಡಾಕಾರವಾಗಿ ಮಸಾಜ್ ಮಾಡಿಕೊಳ್ಳಿ.ಇದರಿಂದ ನಿಮ್ಮ ಮುಖದ ಚರ್ಮದಲ್ಲಿರುವ ಎಣ್ಣೆಯ ಅಂಶ ಕಡಿಮೆಯಾಗುತ್ತದೆ ಹಾಗೂ ಸಾಧಾರಣ ಚರ್ಮಕ್ಕೆ ತಿರುಗುತ್ತದೆನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.ಇನ್ನೂ ಟೊಮೆಟೊ ಹಣ್ಣಿನ ಜೊತೆಗೆ ಹಾಲು ,ಜೇನುತುಪ್ಪ ,ಆಲೂಗಡ್ಡೆಯ ರಸ,ಸಕ್ಕರೆ ಪುಡಿ ,ಅರಿಶಿನ ಪುಡಿ ಯನ್ನು ಬಳಸಿ ಸಹ ಸ್ಕ್ರಬ್ಬರ್ ಮಾಡಿಕೊಳ್ಳಬಹುದಾಗಿದೆ.
ಧನ್ಯವಾದಗಳು.