ಸಾಮಾನ್ಯವಾಗಿ ಎಲ್ಲರಿಗೂ ತೆಂಗಿನಕಾಯಿ ಬಗ್ಗೆ ,ತೆಂಗಿನ ಹಾಲಿನ ಬಗ್ಗೆ ,ತೆಂಗಿನ ಗಿಡದ ಔಷಧೀಯ ಗುಣಗಳ ಬಗ್ಗೆ ಗೊತ್ತು ಆದರೆ ತೆಂಗಿನಕಾಯಿಯ ಚಿಪ್ಪಿನ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ ಹಾಗಾಗಿ ಇಂದಿನ ನಮ್ಮ ಲೇಖನದಲ್ಲಿ ತೆಂಗಿನ ಚಿಪ್ಪಿನ ಕೆಲವು ಆರೋಗ್ಯದ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ..
ಅನೇಕರಿಗೆ ಕಾಲಿನಲ್ಲಿ ಆಣಿಯ ಸಮಸ್ಯೆ ಉಂಟಾಗುತ್ತದೆ. ಮೀನು ಕಣ್ಣಿನ ಸಮಸ್ಯೆ ಎಂದು ಕೂಡ ಈ ಸಮಸ್ಯೆಯನ್ನು ಕರೆಯಲಾಗುತ್ತದೆ.ನಡೆಯಬೇಕಾದರೆ ಹೆಚ್ಚು ನೋವು ಕಾಣಿಕೊಳ್ಳುತ್ತದೆ.ಇನ್ನು ಇಂತಹ ಕಾಲಿನ ಆಣಿ ಯನ್ನು ಕಡಿಮೆ ಮಾಡಿಕೊಳ್ಳಲು 1 ಸರಳ ಪರಿಹಾರವೆಂದರೆ ತೆಂಗಿನ ಚಿಪ್ಪು.ಕಾಲಿನಲ್ಲಿ ಆಗುವ ಆಣಿಯ ಸಮಸ್ಯೆಗೆ ತೆಂಗಿನ ಚಿಪ್ಪಿನಲ್ಲಿ ದೊರೆಯುವ ಎಣ್ಣೆಯಲ್ಲಿ ಸುಡುವ ಗುಣ ಇರುವುದರಿಂದ ಇದು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು.ಇನ್ನು ತೆಂಗಿನ ಚಿಪ್ಪಿಗೆ ಬೆಂಕಿ ಹಾಕಿ ಕಡೆಗೆ ಅದರೊಳಗೆ ಎಣ್ಣೆ ಮಿಕ್ಕುತ್ತದೆ.ಆ ಎಣ್ಣೆಯನ್ನು ಪಾದಕ್ಕೆ ಆಣಿ ಇರುವ ಜಾಗ ಕೆ ಹಚ್ಚಿ ಇದರಿಂದ ಆ ಆಣಿ ಸುಟ್ಟು ಕರಗುತ್ತದೆ.
ಇನ್ನು ಬೇರೆ ಚರ್ಮದ ಮೇಲೆ ಹಾಕುವುದರಿಂದ ಸ್ವಲ್ಪ ಉರಿ ಕಾಣಿಸಿಕೊಂಡು ಸುಟ್ಟಂತೆ ಆಗಬಹುದು.ತೆಂಗಿನ ಚಿಪ್ಪಿನ ಎಣ್ಣೆ ತಯಾರಿಸಿ ಆ ಎಣ್ಣೆಯನ್ನು ಗಜಕರಣಕ್ಕೆ ಬಳಸುವುದರಿಂದ ಅದು ಕ್ರಮೇಣವಾಗಿ ಕಡಿಮೆಯಾಗುತ್ತದೆ.
ಧನ್ಯವಾದಗಳು.