ಕಣ್ಣ ರೆಪ್ಪೆಯು ಬಡಿದುಕೊಳ್ಳುತ್ತಿದೆ ಏನಾದರೂ ದುರಂತ ನಡೆಯಬಹುದು ಅಥವಾ ಒಳ್ಳೆಯದು ಆಗಬಹುದು ಎನ್ನುವ ಮಾತನ್ನು ಕೆಲವರು ಹೇಳುವುದನ್ನು ನಾವು ಕೇಳಿದ್ದೇವೆ. ಆದರೆ ಇದು ಕೇವಲ ಮೂಢನಂಬಿಕೆಗಳು ಎಂದು ಹೇಳುವವರು ಇದ್ದಾರೆ. ಹಿಂದೂ ಧರ್ಮದಲ್ಲಿ ಪ್ರತಿಯೊಂದು ದೇಹದ ಆಗುಹೋಗುಗಳಿಗೂ ತನ್ನದೇ ಆಗಿರುವಂತಹ ಕಾರಣಗಳು ಇವೆ. ನಮ್ಮ ದೈನಂದಿನ ಚಟುವಟಿಕೆಗಳು ಕೂಡ ಇದರಲ್ಲಿ ಸೇರಿಕೊಂಡಿದೆ. ಕೆಲವೊಮ್ಮೆ ನಮ್ಮ ಕಣ್ಣು ತುಂಬಾ ಬಡಿಯುತ್ತಲಿರುತ್ತದೆ.
ಇದು ನಮ್ಮ ಜೀವನದಲ್ಲಿ ಸಂಭವಿಸಬಹುದಾದ ಕೆಲವೊಂದು ಘಟನೆಗಳ ಬಗ್ಗೆ ಪ್ರಕೃತಿಯು ನೀಡುವಂತಹ ಸೂಚನೆಯಾಗಿದೆ ಎಂದು ಹೇಳಲಾಗುತ್ತದೆ. ಏನಾದರೂ ಶುಭ ಅಥವಾ ಅಶುಭ ನಡೆಯುವುದರ ಸಂಕೇತ ಇದಾಗಿದೆ ಎಂದು ಹೇಳಲಾಗುತ್ತದೆ. ಆದರೆ ಕೆಲವೊಂದು ಸಂದರ್ಭದಲ್ಲಿ ಇದು ಕೇವಲ ಒಣ ಕಣ್ಣುಗಳು, ನಿಶ್ಯಕ್ತಿ, ಖನಿಜಾಂಶಗಳ ಕೊರತೆ ಅಥವಾ ಒತ್ತಡದಿಂದ ಆಗಿರಬಹುದು. ನಿಮ್ಮ ಕಣ್ಣು ಬಡಿದುಕೊಳ್ಳಲು ಈ ಯಾವುದು ಕಾರಣಗಳು ಅಲ್ಲದೆ ಇದ್ದರೆ ಆಗ ಇದು ಕೆಲವೊಂದು ಅತೀಂದ್ರೀಯ ಶಕ್ತಿಗಳು ಎಂದು ಹೇಳಬಹುದು. ಕಣ್ಣು ಬಡಿದುಕೊಳ್ಳಲು ಕಾರಣಗಳು ಏನು ಎಂದು ತಿಳಿಯಿರಿ.
ಬಲದ ಕಣ್ಣು ಬಡಿದರೆ…
ಪುರುಷರು ಹಾಗೂ ಮಹಿಳೆಯರಲ್ಲಿ ಬಲದ ಕಣ್ಣು ಬಡಿಯುತ್ತಿದ್ದರೆ ಆಗ ಅದಕ್ಕೆ ವಿಭಿನ್ನವಾಗಿರುವ ಕಾರಣಗಳು ಇವೆ. ಪುರುಷರಲ್ಲಿ ಬಲದ ಕಣ್ಣು ಬಡಿಯುತ್ತಿದ್ದರೆ ಆಗ ಇದು ಶುಭವೆಂದು ಹೇಳಲಾಗುತ್ತದೆ. ಅದೇ ಮಹಿಳೆಯ ಬಲದ ಕಣ್ಣು ಬಡಿಯುತ್ತಿದ್ದರೆ ಆಗ ಇದನ್ನು ಅಶುಭವೆಂದು ಹೇಳಲಾಗುತ್ತದೆ. ಪುರುಷರ ಬಲದ ಕಣ್ಣು ಬಡಿಯುತ್ತಿದ್ದರೆ ಆಗ ಅವರಿಗೆ ವೃತ್ತಿಯಲ್ಲಿ ಪ್ರಗತಿ ಉಂಟಾಗುವುದು. ಅದೇ ಮಹಿಳೆಯರಿಗೆ ಬಲದ ಕಣ್ಣು ಬಡಿಯುತ್ತಿದ್ದರೆ ಆಗ ಅವರು ಮಾಡುವಂತಹ ಪ್ರತಿಯೊಂದು ಕೆಲಸದಲ್ಲೂ ಸಮಸ್ಯೆಯು ಬರುವುದು.
ಎಡದ ಕಣ್ಣು ಬಡಿಯುತ್ತಿದ್ದರೆ…
ಸಾಮಾನ್ಯವಾಗಿ ಎಡದ ಕಣ್ಣು ಬಡಿಯುತ್ತಲಿದ್ದರೆ ಇದು ಪುರುಷರಿಗೆ ತುಂಬಾ ಅಶುಭವೆಂದು ಹೇಳಲಾಗುತ್ತದೆ ಮತ್ತು ಇದು ಮಹಿಳೆಯರಿಗೆ ತುಂಬಾ ಶುಭ ಎಂದು ಪರಿಗಣಿಸಲಾಗಿದೆ. ಕಣ್ಣ ರೆಪ್ಪೆಯು ಬಡಿಯುತ್ತಲಿದ್ದರೆ ಆಗ ಮಹಿಳೆಯರಿಗೆ ಏನೋ ಶುಭ ಸುದ್ದಿ ಬರಲಿದೆ ಎಂದು ಅರ್ಥೈಸಿಕೊಳ್ಳಬೇಕು.
ನಿಖರ ಜಾಗ ಮತ್ತು ಒಳ್ಳೆಯ ಸೂಚಕಗಳು
ಕಣ್ಣಿನ ಮೇಲಿನ ರೆಪ್ಪೆಯು ಬಡಿಯುತ್ತಲಿದ್ದರೆ ಆಗ ಇದನ್ನು ಒಂದು ಉತ್ತಮ ಶೂಚಕವೆಂದು ತಿಳಿಯಲಾಗುತ್ತದೆ. ಕಣ್ಣಿನ ಕೆಳಗಿನ ರೆಪ್ಪೆಯ ಒಳಗಿನ ಭಾಗದಲ್ಲಿರುವ ಕಣ್ಣಿನ ರೆಪ್ಪೆಯು ಅಂದರೆ ಮೂಗಿನ ಸಮೀಪವಾಗಿರುಂತಹ ಭಾಗವು ಬಡಿಯುತ್ತಿದ್ದರೆ ಆಗ ಇದು ಶುಭ ಎಂದು ಹೇಳಲಾಗುತ್ತದೆ. ಇದು ಯಾವುದೋ ಒಳ್ಳೆಯ ಸುದ್ದಿ ಬರುವ ಸಂಕೇತವೆಂದು ನಂಬಲಾಗಿದೆ.
ನಿಖರ ಜಾಗ ಮತ್ತು ಒಳ್ಳೆಯ ಸೂಚಕಗಳು
ಕಣ್ಣಿನ ಮೇಲಿನ ಭಾಗದ ರೆಪ್ಪೆಯಲ್ಲಿ ಹೊರಗಿನ ಭಾಗ(ಕಿವಿಗೆ ಹತ್ತಿರವಾಗಿರುವುದು) ಬಡಿದುಕೊಳ್ಳುತ್ತಲಿದ್ದರೆ ಆಗ ಇದನ್ನು ತುಂಬಾ ಅಶುಭವೆಂದು ಹೇಳಲಾಗುತ್ತದೆ. ಬಲದ ಕಣ್ಣಿನ ಕೆಳಭಾಗದ ರೆಪ್ಪೆಯು ಮೂಗಿಗೆ ಹತ್ತಿರವಾಗಿ ಇರುವಂತಹ ಭಾಗವು ಬಡಿದುಕೊಳ್ಳುತ್ತಿದ್ದರೆ ಆಗ ಕೂಡ ಇದೇ ಸೂಚಕವಾಗಿರುವುದು.
ಅಶುಭವಾಗಿ ಕಣ್ಣು ಬಡಿದುಕೊಳ್ಳುವುದನ್ನು ನಿಲ್ಲಿಸಲು ಏನು ಮಾಡಬೇಕು?
ಕಣ್ಣು ಬಡಿಯುವುದನ್ನು ನಿಲ್ಲಿಸಲು ಮತ್ತು ಅಶುಭವು ಬೆಳೆಯದಂತೆ ಮತ್ತು ಬಲಿಷ್ಠವಾಗದಂತೆ ತಡೆಯಲು ನೀವು ಮಾಡಬೇಕಾದ ಕೆಲಸವೆಂದು ಸಣ್ಣ ಹತ್ತಿ ಉಂಡೆಯನ್ನು ತೆಗೆದುಕೊಂಡು ಅಥವಾ ಒಂದು ತುಂಡು ಪೇಪರ್ ತೆಗೆದುಕೊಂಡು ಅದನ್ನು ಬಡಿಯುತ್ತಿರುವ ಜಾಗಕ್ಕೆ ಇಟ್ಟುಬಿಡಿ.