ಪ್ರತಿಯೊಬ್ಬರು ಮೊಟ್ಟೆ ಸಿಪ್ಪೆಯನ್ನು ಕಸಕ್ಕೆ ಎಸೆಯುತ್ತಾರೆ. ಅದರೆ ಮೊಟ್ಟೆ ಸಿಪ್ಪೆ ಬಹಳ ಉಪಯೋಗಕ್ಕೆ ಬರುತ್ತದೆ. ಇದನ್ನು ನಾನಾ ರೀತಿಯಲ್ಲಿ ಬಳಸಿಕೊಳ್ಳಬಹುದು. ಮೊದಲು ಮೊಟ್ಟೆ ಸಿಪ್ಪೆಯನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಈ ರೀತಿ ಮಾಡಿದರೆ ಮಿಕ್ಸಿ ಜಾರ್ ಕೂಡ ಶಾರ್ಪ್ ಆಗುತ್ತದೆ. ಈ ರೀತಿ ಮೊಟ್ಟೆ ಸಿಪ್ಪೆಯನ್ನು ಅವಾಗ್ ಅವಾಗ ಮಿಕ್ಸಿ ಜಾರಿಗೆ ಹಾಕಿದರೆ ಬ್ಲೇಡ್ ಕೂಡ ಶಾರ್ಪ್ ಆಗುತ್ತದೆ.
ಇನ್ನು ಈ ಪುಡಿಯನ್ನು ಪಾತ್ರೆ ತೊಳೆಯುವುದಕ್ಕೆ ಬಳಸಬಹುದು. ಪಾತ್ರೆ ತೊಳೆಯುವ ಕೆಲಸ ಕೂಡ ಸುಲಭವಾಗಿ ಆಗುತ್ತದೆ. ಏನಾದರು ಜಿಡ್ಡು ಇದ್ದರೆ ಈ ರೀತಿ ಮೊಟ್ಟೆ ಸಿಪ್ಪೆಯಿಂದ ಕ್ಲೀನ್ ಮಾಡಬಹುದು ಮತ್ತು ಪಾತ್ರೆ ಕೂಡ ಒಳ್ಳೆ ಶೈನ್ ಬರುತ್ತದೆ. ಈ ರೀತಿ ತಳ ಇಡಿದಿರುವ ಪಾತ್ರೆಯನ್ನು ಮೊಟ್ಟೆ ಸಿಪ್ಪೆಯಿಂದ ಕ್ಲೀನ್ ಮಾಡಬಹುದು. ಇದೆ ರೀತಿ ಗ್ಲಾಸ್ ಐಟಂ ಅನ್ನು ಕೂಡ ಮೊಟ್ಟೆ ಸಿಪ್ಪೆ ಕ್ಲೀನ್ ಮಾಡಬಹುದು.
ಇದೆ ರೀತಿ ಮೊಟ್ಟೆ ಸಿಪ್ಪೆ ಪುಡಿಯನ್ನು ಟಾಯ್ಲೆಟ್ ಗೆ ಹಾಕಿ ಮತ್ತು ಸ್ವಲ್ಪ ಹಾರ್ಪಿಕ್ ಹಾಕಿ ಉಜ್ಜಿದರೆ ಟಾಯ್ಲೆಟ್ ಸಹ ಚೆನ್ನಾಗಿ ಕ್ಲೀನ್ ಆಗುತ್ತದೆ. ಎಲ್ಲಾರು ಬೇಡ ಎಂದು ಕಸಕ್ಕೆ ಎಸೆಯುತ್ತಾರೆ ಅದರೆ ಅದು ಎಷ್ಟೆಲ್ಲಾ ಉಪಯೋಗಕ್ಕೆ ಬರುತ್ತದೆ ಗೊತ್ತಾ. ಇದನ್ನು ಊಹಿಸುವುದಕ್ಕೂ ಸಾಧ್ಯ ಇಲ್ಲಾ.