ವಾಸ್ತುಶಾಸ್ತ್ರದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.ವಾಸ್ತುಶಾಸ್ತ್ರದ ಮಹತ್ವವಾದ ವಿಚಾರವೇನೆಂದರೆ ವಾಸ್ತುಶಾಸ್ತ್ರವು ನಮ್ಮ ಮನೆಯಲ್ಲಿ ಇರುವಂತಹ ತುಂಬಾ ಚಿಕ್ಕ ವಸ್ತುಗಳಿಂದ ಹಿಡಿದು ದೊಡ್ಡದಾಗಿರುವ ವಸ್ತುಗಳ ಮೇಲೆ ಪ್ರಭಾವವನ್ನು ಬೀರುತ್ತವೆ ಈ ಕಾರಣದಿಂದ ನೀವು ಜೀವನದಲ್ಲಿ ತುಂಬಾ ಚೆನ್ನಾಗಿ ಬಾಳಬೇಕು ಎಂದು ಆಸೆ ಪಟ್ಟಿದ್ದರೆ ನೀವು ವಾಸ್ತುಶಾಸ್ತ್ರ ಗಳ ಬಗ್ಗೆ ನಿಗಾ ಇಡಬೇಕು ಮನೆಯನ್ನ ಶೃಂಗರಿಸಲು ಅನೇಕ ರೀತಿಯ ವಿಗ್ರಹಗಳನ್ನು ಇಟ್ಟುಕೊಳ್ಳುತ್ತಾರೆ ಆದರೆ ಅದರ ಅಪಾಯಗಳು ಮತ್ತು ವಾಸ್ತು ದೋಷಗಳ ಬಗ್ಗೆ ಅವರಿಗೆ ತಿಳಿದಿರುವುದಿಲ್ಲ
ಇನ್ನೊಬ್ಬರ ಮನೆಯಲ್ಲಿ ನೋಡಿ ನೀವು ಮನೆಗೆ ಮೂರ್ತಿಗಳನ್ನು ತರುವುದಕ್ಕೆ ಇಷ್ಟಪಟ್ಟಿರುತ್ತಾರೆ ಅಂದರೆ ಕೆಲವು ಮೂರ್ತಿಗಳಾದ ಆಮೆ ಯಾಗಿರಬಹುದು ಅಥವಾ ಆನೆ ಮತ್ತು ಹಸುವಿನ ಗೋಮಾತೆಯ ಮೂರ್ತಿ ಇರಬಹುದು ಈ ತರಹದ ಮೂರ್ತಿಗಳನ್ನು ನೀವು ಮನೆಗೆ ತಂದರೆ ಅದನ್ನು ಸರಿಯಾದ ದಿಕ್ಕುಗಳಲ್ಲಿ ಇಟ್ಟರೆ ಮಾತ್ರ ನಿಮಗೆ ಒಳಿತಾಗುವುದು ಈ ಕೆಳಗಿನ ಮಾಹಿತಿ ನೋಡಿ.
ನೀವು ಮೂರ್ತಿಗಳನ್ನ ತಪ್ಪಾದ ದಿಕ್ಕಿನಲ್ಲಿ ಇಡುವುದರಿಂದ ವಾಸ್ತು ದೋಷಗಳು ಬರುತ್ತವೆ ನೀವು ಈ ವಿಚಾರವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಬೇರೆಯವರನ್ನು ನೋಡಿ ನಿಮ್ಮ ಮನೆಗೆ ಯಾವುದೇ ಮೂರ್ತಿಗಳನ್ನು ಖರೀದಿಸಬೇಡಿ ಆಮೆಯನ್ನು ಪವಿತ್ರ ಗ್ರಂಥದಲ್ಲಿ ತುಂಬಾನೇ ಶ್ರೇಷ್ಟ ಎಂದು ತಿಳಿಯಲಾಗಿದೆ ಆಮೆ ಅನ್ನ ಪೀತಾಂಬರವಾಗಲಿ ಇತ್ತಾಳೆ ಆಗಲಿ ಗಾಜಿನಿಂದ ಆಗಲಿ ತಯಾರು ಮಾಡಿರುತ್ತಾರೆ ಆಮೆಯನ್ನು ಮನೆಯಲ್ಲಿ ಇಡುವುದು ಶುಭ ಎಂದು ಹೇಳುತ್ತಾರೆ.
ಆಮೆಯನ್ನು ನೀವು ಯಾವಾಗಲೂ ನೀರಿನ ಕೆಳಗಡೆ ಇಡಬೇಕು ಆಮೆಯನ್ನು ನೀವು ದೇವರ ಮನೆಯಲ್ಲಿ ಇಟ್ಟರೆ ಅದರ ಕೆಳಗಡೆ ಒಂದು ಪ್ಲೇಟ್ಅನ್ನು ಹಾಕಿ ಅದರಲ್ಲಿ ನೀರನ್ನು ತುಂಬಿರಬೇಕು ಯಾವುದೇ ಕಾರಣಕ್ಕೂ ಆಮೆಯನ್ನು ನೀರಿಲ್ಲದೆ ಇಡಬಾರದು ಅದರಲ್ಲಿ ಯಾವಾಗಲೂ ನೀರು ಕಡಿಮೆಯಾದಾಗ ನೀರನ್ನ ಹಾಕುತ್ತಿರಬೇಕು ಇದರಿಂದಾಗಿ ಸಕಾರಾತ್ಮಕ ಶಕ್ತಿಗಳು ಮನೆಯಲ್ಲಿ ಬಂದು ನಕರಾತ್ಮಕ ಶಕ್ತಿಯನ್ನು ಹೊರಹಾಕುತ್ತವೆ.