ಚಾಣಕ್ಯನ ನೀತಿ ಇಡೀ ಪ್ರಪಂಚಕ್ಕೆ ಹಲವಾರು ರೀತಿಯಾದಂತಹ ವಿಶಿಷ್ಟ ಹಾಗೂ ವಿಭಿನ್ನ ಮಾಹಿತಿಯನ್ನು ತಿಳಿಸಿ ಕೊಟ್ಟಿದೆ. ಅಲ್ಲದೆ ಜನರು ಈಗಿನ ಕಾಲದಲ್ಲೂ ಕೂಡ ಚಾಣಕ್ಯ ನೀತಿಯನ್ನು ಪಾಲಿಸುತ್ತಾ ತಮ್ಮ ಜೀವನವನ್ನು ನಡೆಸುತ್ತಿರುವ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣಮುಂದಿದೆ.
ಹೀಗೆ ಗಂಡಸರು ಯಾವ ಮೂರು ಕೆಲಸವನ್ನು ಮಾಡಲು ತಮ್ಮ ಜೀವನದಲ್ಲಿ ಎಂದಿಗೂ ನಾಚಿಕೆಪಟ್ಟುಕೊಳ್ಳಬಾರದು ಎಂಬುದನ್ನು ಚಾಣಕ್ಯನ ನೀತಿ ಗ್ರಂಥದಲ್ಲಿ ನಮೂದಿಸಿದ್ದಾರೆ. ಹಾಗಾದ್ರೆ ಯಾವ ಮೂರು ಕೆಲಸವನ್ನು ಮಾಡಲು ಗಂಡು ಮಕ್ಕಳು ಎಂದೂ ನಾಚಿಕೆಪಟ್ಟುಕೊಳ್ಳಬಾರದು ಎಂಬುದನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಫ್ರೆಂಡ್ಸ್ ಸಾಮಾನ್ಯವಾಗಿ ಗಂಡಸರು ಹೊರಗಡೆ ಎಲ್ಲಾದರೂ ಸ್ನೇಹಿತರ ಮನೆಗೆ ಅಥವಾ ಇನ್ನಿತರ ಸಂಬಂಧಿಕರ ಮನೆಗೆ ಹೋದರೆ ಅವರ ಮನೆಯಲ್ಲಿ ಊಟ ಮಾಡಲು ನಾಚಿಕೆ ಪಟ್ಟುಕೊಳ್ಳುತ್ತಾರೆ. ಆದರೆ ಇಂತಹ ತಪ್ಪು ಕೆಲಸವನ್ನು ಎಂದೂ ಮಾಡಬಾರದು ಬದಲಿಗೆ ಮನಃಸ್ಪೂರ್ತಿಯಾಗಿ ತಿಂದು ಬಡಿಸುವವರನ್ನು ಸಂತೃಪ್ತಿ ಪಡಿಸಬೇಕು.
ನಮ್ಮ ಹೊಟ್ಟೆಗೆ ಎಂದು ಮೋಸ ಮಾಡಿಕೊಳ್ಳಬಾರದು ಎಂಬ ಮಾತಿದೆ ಅದರಂತೆ ಅನ್ನವನ್ನು ಬೇಡ ಎಂದರೆ ಆ ದೇವರು ಮೆಚ್ಚುವುದಿಲ್ಲ. ಇನ್ನು ಎರಡನೆಯದಾಗಿ ಗುರುಗಳ ಬಳಿ ವಿದ್ಯೆಯನ್ನು ಕೇಳಿ ಪಡೆಯುವುದು, ಹೌದು ನಮಗೆ ಗೊತ್ತಿಲ್ಲದನ್ನು ತಿಳಿದುಕೊಳ್ಳಲು ನಾವು ಯಾವಾಗಲೂ ಆಸಕ್ತಿ ತೋರಿಸಬೇಕೇ ಹೊರತು ನಾಚಿಕೆಯನ್ನಲ್ಲ.
ಇನ್ನು ಮೂರನೆಯದಾಗಿ ನೀವು ನೀಡಿರುವಂತಹ ವಸ್ತುವನ್ನು ಅಥವಾ ಸಾಲವನ್ನು ಮರುಪಾವತಿ ಮಾಡುವಂತೆ ಕೇಳುವುದು. ಹೌದು ಇತ್ತೀಚಿನ ದಿನಗಳಲ್ಲಿ ಯಾರು ಸಾಲ ಪಡೆದಿರುತ್ತಾರೆ ಅವರು ಮತ್ತೆ ವಾಪಸ್ ನಾವು ಕೇಳುವವರೆಗೂ ಕೊಡುವುದಿಲ್ಲ.
ಇನ್ನು ನಾವೇನಾದರೂ ಈ ವಿಷಯದಲ್ಲಿ ಸಂಕೋಚ ಪಟ್ಟುಕೊಂಡು ಕೇಳಿದರೆ ಏನೆಂದುಕೊಳ್ಳುತ್ತಾರೋ ಎಂದು ಯೋಚಿಸುತ್ತ ನಮ್ಮ ಹಣವನ್ನು ಇತರರು ಮಜಾ ಮಾಡಲು ಬಿಡುವುದು ಸರಿಯಲ್ಲ. ಹೀಗಾಗಿ ನಮ್ಮ ವಸ್ತುವನ್ನು ಹಿಂಪಡೆಯಲು ಯಾವುದೇ ರೀತಿಯಾದಂತಹ ನಾಚಿಕೆಯನ್ನು ಗಂಡಸರು ಪಟ್ಟುಕೊಳ್ಳಬಾರದು.
ಇನ್ನು ನಾಲ್ಕನೆಯದಾಗಿ ಹೆಂಡತಿಯ ಬಳಿ ಪ್ರೀತಿಯನ್ನು ಕೇಳಿ ಪಡೆಯುವುದರಲ್ಲಿ ಯಾವುದೇ ಸಂಕೋಚ ಅಥವಾ ನಾಚಿಕೆ ಇರಬಾರದು. ಅಪ್ಪಿತಪ್ಪಿ ಗಂಡ-ಹೆಂಡತಿಯ ಸಂಬಂಧದ ಮಧ್ಯೆ ನಾಚಿಕೆ ಎನ್ನುವುದು ಮೂಡಿದರೆ ಮೂರನೆಯವರ ಪ್ರವೇಶ ನಿಮ್ಮ ಬಾಳಿನಲ್ಲಿ ಆಗುವುದು ಖಂಡಿತ.ಹೀಗಾಗಿ ಯಾವುದೇ ಕಾರಣಕ್ಕೂ ಈ ಮೇಲ್ಕಂಡ ವಿಷಯಗಳಲ್ಲಿ ನಾಚಿಕೆಪಟ್ಟುಕೊಳ್ಳಬಾರದು ಎಂಬುದನ್ನು ಚಾಣಕ್ಯನ ನೀತಿ ದಂತದಲ್ಲಿ ತಿಳಿಸಿದ್ದಾನೆ.