ಇತ್ತೀಚಿನ ದಿನಗಳಲ್ಲಿ ಬಾಲ್ಡ್‌ನೆಸ್ ಒಂದು ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಯುವಕರು ಕೂಡಾ ಕೂದಲುದುರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದಿನವೂ ಬೇಸರ, ಮಾನಸಿಕ ಒತ್ತಡ, ಅನಿಯಮಿತ ಆಹಾರ ಪದ್ಧತಿಯಿಂದ ನಿಮ್ಮ ಕೂದಲು ಉದುರಿ ಬೊಕ್ಕ ತಲೆಯುಂಟಾಗಬಹುದು. ಕೂದಲು ಉದುರುವಿಕೆಗೆ ಕಾರಣಗಳು ಅನೇಕ. ಆ ಕಾರಣಗಳನ್ನು ತಿಳಿದುಕೊಂಡರೆ ಬೊಕ್ಕ ತಲೆಯ ಸಮಸ್ಯೆಯಿಂದ ಪಾರಾಗಬಹುದು.
ಕಲುಷಿತ ಹೊಗೆ. ಸೂರ್ಯನ ಕಿರಣಗಳು ನೇರವಾಗಿ ತಲೆ ಮೇಲೆ ಬೀಳುವುದು. ನಿದ್ರಾಹೀನತೆ, ಮಾನಸಿಕ ಒತ್ತಡ. ಜಾಸ್ತಿ ಕಣ್ಣೀರು ಹಾಕುವುದರಿಂದ ಅಥವಾ ಕಣ್ಣೀರನ್ನು ತಡೆದುಕೊಳ್ಳುವುದರಿಂದ. ಜಾಸ್ತಿ ಉಪ್ಪು , ಮಸಾಲೆ ವಸ್ತುಗಳ ಸೇವನೆ. ವಂಶಪಾರಂಪರ್ಯವಾಗಿಯೂ ಬೊಕ್ಕ ತಲೆ ಬರುವ ಸಾಧ್ಯತೆ ಇದೆ.
ಹಗಲು ನಿದ್ದೆ ಮಾಡುವುದನ್ನು ತಪ್ಪಿಸಿ. ನೀವು ರಾತ್ರಿ ಕೆಲಸಕ್ಕೆ ಹೋಗುವವರಾದರೆ ಪರ್ವಾಗಿಲ್ಲ, ಅನಿವಾರ್ಯವಾಗಿ ಹಗಲು ನಿದ್ದೆ ಮಾಡಲೇಬೇಕು. ಯೋಗದ ಮೂಲಕ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಆಲ್ಕೋಹಾಲ್ ಮತ್ತು ತಂಬಾಕು ವಸ್ತುಗಳಿಂದ ದೂರ ಇರಿ. ಹೆಚ್ಚು ಖಾರ, ಉಪ್ಪು ಇರುವ ಪದಾರ್ಥಗಳನ್ನು ಸೇವಿಸಬಾರದು. ಸಮತೋಲಿತ ಆಹಾರ ಕ್ರಮವನ್ನು ಪಾಲಿಸಿ. ಸರಿಯಾದ ಕೂದಲು ನಿರ್ವಹಣೆಯ ಟೆಕ್ನಿಕ್ಸ್‌ನ್ನು ಬಳಸಿ. ತುಂಬಾ ಬಿಸಿಯಾದ ನೀರಿನಲ್ಲಿ ಕೂದಲನ್ನು ತೊಳೆಯಬೇಡಿ. ಕೊಠಡಿಯ ಉಷ್ಣತೆಗೆ ಅನುಗುಣವಾದ ಬಿಸಿ ನೀರನ್ನು ತಲೆ ಸ್ನಾನಕ್ಕೆ ಬಳಸಿ. ತಲೆ ಕೂದಲಿಗೆ ಶುದ್ಧ ಕೊಬ್ಬರಿ ಎಣ್ಣೆಯನ್ನು ಬಳಸಿ. ಬೊಕ್ಕ ತಲೆಸಮಸ್ಯೆಗೆ ಸರಳ ಮನೆಮದ್ದುಗಳು
ಈರುಳ್ಳಿ ರಸ
ಒಂದು ದೊಡ್ಡ ಈರುಳ್ಳಿಯನ್ನು ಕೊಚ್ಚಿ ಜ್ಯೂಸರ್ ನಲ್ಲಿ ಚೆನ್ನಾಗಿ ಕಡೆದು ಹಿಂಡಿ ರಸ ಸಂಗ್ರಹಿಸಿ. ಒಂದು ಹತ್ತಿಯುಂಡೆ ಯನ್ನು ಈ ರಸದಲ್ಲಿ ಅದ್ದಿ ತಲೆಯ ಚರ್ಮದ ಭಾಗಕ್ಕೆ ತಾಕುವಂತೆ ಹಚ್ಚಿಕೊಳ್ಳಿ. ಸುಮಾರು ಒಂದು ಘಂಟೆ ಹಾಗೇ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ವಾರಕ್ಕೊಂದು ಬಾರಿ ಅನುಸರಿಸಿ.
ಕೊಬ್ಬರಿ ಎಣ್ಣೆ ಮತ್ತು ಹಾಲು
ಕೊಬ್ಬರಿ ಎಣ್ಣೆ ಆಂಟಿ ಆಕ್ಸಿಡೆಂಟುಗಳಿಂದ ಸಮೃದ್ದವಾಗಿದ್ದು ತಲೆಯ ಚರ್ಮವನ್ನು ರಕ್ಷಿಸುತ್ತದೆ ಹಾಗೂ ತಲೆಗೂದಲನ್ನು ತುಂಡಾಗುವುದರಿಂದ ತಡೆಯುತ್ತದೆ.
ಅಗತ್ಯ ಇರುವ ಸಾಮಗ್ರಿಗಳು
- 1 ದೊಡ್ಡ ಚಮಚ ತೆಂಗಿನ ಹಾಲು
- 1 ದೊಡ್ಡ ಚಮಚ ಕೊಬ್ಬರಿ ಎಣ್ಣೆ
ಒಂದು ಬೋಗುಣಿಯಲ್ಲಿ ಎರಡನ್ನೂ ಹಾಕಿ ಮಿಶ್ರಣ ಮಾಡಿ. ಬಳಿಕ ತಲೆಯ ಚರ್ಮಕ್ಕೆ ತಾಕುವಂತೆ ಹಚ್ಚಿ ಹತ್ತು ನಿಮಿಷ ಒಣಗಲು ಬಿಡಿ.ಬಳಿಕ ನಿಮ್ಮ ನಿತ್ಯದ ಶಾಂಪೂ ಬಳಸಿ ಸ್ನಾನ ಮಾಡಿ ಕಂಡೀಶನರ್ ನಿಂದ ತೊಳೆದುಕೊಳ್ಳಿ. ಬಳಿಕ ತಾನಾಗಿಯೇ
ಕೂದಲು ಒಣಗಲು ಬಿಡಿ
ಉತ್ತಮ ಪರಿಣಾಮಕ್ಕಾಗಿ ವಾರಕ್ಕೆರಡು ಬಾರಿ ಅನುಸರಿ,ಒಂದು ಕಪ್ ಆಲಿವ್ ತೈಲಕ್ಕೆ ಒಂದು ಚಮಚ ದಾಲ್ಚಿನಿ ಹುಡಿ ಹಾಕಿಕೊಂಡು ಬಳಿಕ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದು ಮೆತ್ತಗಿನ ಪೇಸ್ಟ್ ಆದ ಬಳಿಕ ನೀವು ಇದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ ಮತ್ತು ಅರ್ಧ ಗಂಟೆ ಕಾಲ ಹಾಗೆ ಬಿಡಿ. ಈ ಪೇಸ್ಟ್ ನ್ನು ನಿಯಮಿತವಾಗಿ ಹಚ್ಚಿಕೊಂಡರೆ ಅದರಿಂದ ಬೋಳು ತಲೆ ಸಮಸ್ಯೆಗೆ ಪರಿಹಾರ ಸಿಗುವುದು
ನೆಲ್ಲಿಕಾಯಿ ಹುಡಿಯನ್ನು8 ಲಿಂಬೆ ರಸದ ಜತೆಗೆ ಮಿಶ್ರಣ ಮಾಡಿಕೊಳ್ಳಿ ಮತ್ತು ಇದನ್ನು ಕೂದಲಿಗೆ ಹಚ್ಚಿಕೊಳ್ಳಿ. ಶಾವರ್ ಕ್ಯಾಪ್ ಧರಿಸಿ, ಇದು ಒಣಗದಂತೆ ನೋಡಿಕೊಳ್ಳಿ ಮತ್ತು ಸಾಮಾನ್ಯದಂತೆ ತಲೆ ತೊಳೆಯಿರಿ. ನೀವು ನೆಲ್ಲಿಕಾಯಿ ಎಣ್ಣೆಯನ್ನು ಕೂದಲು ಉದುರುವಿಕೆ ತಡೆಯಲು ಬಳಸಬಹುದು.
ಕೊಬ್ಬರಿ ಎಣ್ಣೆ ಕೂದಲ ಆರೈಕೆಗೆ ಅತ್ಯುತ್ತಮ ಎಂದು ಅನುಭವದಿಂದ ನಮ್ಮ ಹಿರಿಯರು ಹೇಳುತ್ತಾ ಬಂದಿದ್ದಾರೆ. ಇದರಲ್ಲಿರುವ ಕೊಬ್ಬಿನ ಆಮ್ಲಗಳು ಕೂದಲ ಬುಡದಿಂದ ಚರ್ಮದಾಳಕ್ಕೆ ಇಳಿದು ಪೋಷಣೆ ನೀಡುವ ಮೂಲಕ ಪ್ರೋಟೀನ್ ನಷ್ಟವಾಗುವಿಕೆಯನ್ನು ತಪ್ಪಿಸುತ್ತವೆ. ಅಲ್ಲದೇ ಕೊಬ್ಬರಿ ಎಣ್ಣೆಯನ್ನು ಸ್ನಾನಕ್ಕೂ ಮೊದಲು ಹಾಗೂ ಸ್ನಾನದ ಬಳಿಕವೂ ಹಚ್ಚಿಕೊಳ್ಳಬಹುದು. ಒಂದು ವೇಳೆ ನಿಮ್ಮ ಕೂದಲು ತೈಲಯುಕ್ತವಾಗಿದ್ದರೆ ರಾತ್ರಿ ಮಲಗುವ ಮುನ್ನ ಕೊಬ್ಬರಿ ಎಣ್ಣೆ ಹಚ್ಚಿ ರಾತ್ರಿಯಿಡೀ ಬಿಡಿ. ಎಣ್ಣೆ ಹಚ್ಚಿಕೊಂಡ ಬಳಿಕ ನಯವಾಗಿ ಮಸಾಜ್ ಮಾಡಿ. ಒಂದು ವೇಳೆ ನಿಮ್ಮದು ಒಣ ಕೂದಲಾಗಿದ್ದರೆ ಕೂದಲನ್ನು ಹೆಚ್ಚಿ ಹೆಚ್ಚು ಹೊತ್ತು ಬಿಡಿ. ಕೂದಲ ಬೆಳವಣಿಗೆಗೆ ಕೊಬ್ಬರಿ ಎಣ್ಣೆ ಪೂರಕ ಎಂಬ ಮಾಹಿತಿಯನ್ನು ಸಂಶೋಧನೆಗಳು ದೃಢಪಡಿಸಬೇಕಷ್ಟೇ, ಆದರೆ ನಮ್ಮ ಹಿರಿಯರು ತಮ್ಮ ಅನುಭವದಿಂದ ಇದು ನಿಜ ಎಂದೇ ಹೇಳುತ್ತಾರೆ.
ಸೀಬೆ ಎಲೆಗಳು ವಿಟಮಿನ್ ಮತ್ತು ಅಗತ್ಯ ಪೋಷಕಾಂಶಗಳೊಂದಿಗೆ ಸಮೃದ್ದವಾಗಿರುವ ಸೀಬೆ ಎಲೆಗಳು ನಿಮ್ಮ ಕೂದಲಿನ ಬುಡಕ್ಕೆ ಹೆಚ್ಚಿನ ಪೋಷಣೆ ಒದಗಿಸುತ್ತದೆ ಮತ್ತು ಅವುಗಳನ್ನು ಬಲಪಡಿಸುತ್ತವೆ
ತಯಾರಿಸುವ ವಿಧಾನ:ಇದರ ಲೇಪವನ್ನು ತಯಾರಿಸಲು ಕೆಲವು ಪೇರಲ ಎಲೆಗಳನ್ನು ಪುಡಿಮಾಡಿ. ಅದನ್ನು ಬಟ್ಟಲಿಗೆ ಹಾಕಿ.. ಇದಕ್ಕೆ ಸ್ವಲ್ಪ ಈರುಳ್ಳಿ ರಸವನ್ನು ಸೇರಿಸಿ ಮತ್ತು ಸರಿಯಾಗಿ ಮಿಶ್ರಣವಾಗುವವರೆಗೆ ಬೆರೆಸಿ. ಇದನ್ನು ನಿಮ್ಮ ನೆತ್ತಿಯ ಮೇಲೆ ಹಚ್ಚಿ ಸುಮಾರು 15 ನಿಮಿಷಗಳ ಕಾಲ ಹಾಗೇ ಬಿಡಿ. ನಿಮ್ಮ ನಿತ್ಯದ ಶಾಂಪೂ ಮತ್ತು ಕಂಡಿಷನರ್‌ನಿಂದ ತೊಳೆದುಕೊಳ್ಳಿ.