ಬರಿ ಎರಡು ವಸ್ತುವಿನಿಂದ ದೇವರ ಪೂಜಾ ಸಾಮಗ್ರಿಗಳನ್ನು ನಿಮಿಷದಲ್ಲಿ ಕ್ಲೀನ್ ಮಾಡಬಹುದು. ಇದನ್ನು ಹಚ್ಚಿ ಬರಿ ನೀರಿನಿಂದ ತೊಳೆದರೆ ಸಾಕು ಉಜ್ಜುವುದು ಬೇಡ ಅಷ್ಟು ಚೆನ್ನಾಗಿ ಕ್ಲೀನ್ ಮಾಡಬಹುದು.10 ರೂಪಾಯಿ ಕೂಡ ಖರ್ಚು ಆಗುವುದಿಲ್ಲ ಅಂತಹ ಸೂಪರ್ ಟಿಪ್ಸ್ ಇದು.
ಈ ರೀತಿಯ ದೇವರ ಪೂಜಾ ಸಾಮಗ್ರಿಗಳನ್ನು ಕ್ಲೀನ್ ಮಾಡಬಹುದು.ತುಂಬಾ ಸುಲಭವಾಗಿ ಮನೆಯಲ್ಲಿ ಪಿತಾಂಭರಿ ಪೌಡರ್ ಅನ್ನು ಮಾಡಬಹುದು. ಕೆಲವೇ ಸಮಯದಲ್ಲಿ ತಾಮ್ರದ ಪಾತ್ರೆಗಳು ಫಳ ಫಳ ಹೊಳೆಯುತ್ತದೆ.ತುಂಬಾ ಸುಲಭವಾಗಿ ತಯಾರು ಮಾಡಿಕೊಳ್ಳಬಹುದು.ಇಟ್ಟಿಗೆ ಪುಡಿಯನ್ನು ಮಾಡಿ ಒಂದು ತಟ್ಟೆಯಲ್ಲಿ ಇಟ್ಟುಕೊಳ್ಳಿ.ನಂತರ ಇದನ್ನು ಶೋದಿಸಿ ಕೊಳ್ಳಬೇಕು.ಈ ಪಿತಾಂಭರಿ ಪೌಡರ್ ಅನ್ನು ಹಬ್ಬಕ್ಕೆ ಮತ್ತು ವರ್ಷಕ್ಕೆ ಆಗುವಷ್ಟು ಮಾಡಿ ಇಟ್ಟುಕೊಳ್ಳಬಹುದು. ಇಟ್ಟಿಗೆಯನ್ನು ಸ್ವಲ್ಪ ಪುಡಿ ಮಾಡಿ ಮಿಕ್ಸಿಯಲ್ಲಿ ಕೂಡ ಹಾಕಿಕೊಳ್ಳಬಹುದು.
ಇನ್ನು ಇಟ್ಟಿಗೆ ಪೌಡರ್ ಗೆ ನಿಂಬೆ ಹಣ್ಣಿನ ರಸವನ್ನು ಹಾಕಿಕೊಳ್ಳಬೇಕು.ನಂತರ ಚೆನ್ನಾಗಿ ಮಿಕ್ಸ್ ಮಾಡಿ ಮತ್ತು ಒಂದು ಚಮಚ ಉಪ್ಪನ್ನು, ಒಂದು ಚಮಚ ಸೋಪಿನ ಪುಡಿ,1 ಚಮಚ ಸೋಡಾ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಬಳಸಿದರೆ ತಾಮ್ರ ಹಿತ್ತಾಳೆ ಪಾತ್ರೆ ಹೊಳೆಯುವಂತೆ ಆಗುತ್ತದೆ.ಈ ಪುಡಿಯನ್ನು ತಯಾರಿಸಿ ಎರಡು ವರ್ಷ ಬೇಕಾದರೂ ಬಳಸಬಹುದು.ಮೊದಲು ಇದನ್ನು ಬಳಸಿ ನೋಡಿ ನಂತರ ಫಲಿತಾಂಶ ನಿಮಗೆ ಕಂಡು ಬರುತ್ತದೆ.