Reduce Body Heat ಶರೀರದಲ್ಲಿ ಇರುವ ಉಷ್ಣತೆಯನ್ನು ಸರಿಮಾಡಿಕೊಳ್ಳುವುದಕ್ಕೆ ಒಂದು ಅದ್ಬುತವಾದ ಮನೆಮದ್ದನ್ನು ತಿಳಿಸಿಕೊಡುತ್ತೇವೇ. ಕೆಟ್ಟ ಆಹಾರವನ್ನು ತಿನ್ನುವುದು ಮತ್ತು ಫಾಸ್ಟ್ ಫುಡ್ ಜಂಕ್ ಫುಡ್ ಅನ್ನು ತಿನ್ನುವುದು, ಮಾಂಸಹರವನ್ನು ತಿನ್ನುವುದು, ಬಿಡಿ ಸಿಗರೇಟ್ ಮತ್ತು ನೀರನ್ನು ಸರಿಯಾಗಿ ಕುಡಿಯದೆ ಇರುವುದು, ಹೆಚ್ಚು ಹಣ್ಣು ತರಕಾರಿ ಸೇವನೆ ಮಾಡದೇ ಇರುವುದು, ಕರಿದ ಹಾಗು ಒಣ ಪದಾರ್ಥ ಸೇವನೆಯಿಂದ ಹಾಗು ಮಾನಸಿಕ ಒತ್ತಡದಿಂದ ಶರೀರದಲ್ಲಿ ಉಷ್ಣ ಜಾಸ್ತಿ ಆಗುತ್ತದೆ. ದೇಹದಲ್ಲಿ ಉಷ್ಣ ಜಾಸ್ತಿಯಾದರೆ ಹಲವಾರು ಅರೋಗ್ಯ ಸಮಸ್ಸೆಗಳು ಕಂಡು ಬರುತ್ತದೆ. ಇನ್ನು ಪಿತ್ತ ಇರುವವರಿಗೆ ಆಯಸ್ಸು ತುಂಬಾ ಕಡಿಮೆ.
ದೇಹದ ಉಷ್ಣತೆ ಕಡಿಮೆ ಮಾಡುವುದಕ್ಕೆ ಹೆಚ್ಚು ಹಣ್ಣು ತರಕಾರಿ ಸೇವನೆ ಮಾಡಬೇಕು. ಕರ್ಬುಜ ಕಲ್ಲಂಗಡಿ ದಾಳಿಂಬೆ ದ್ರಾಕ್ಷಿ ಸೋರೆಕಾಯಿ ಜ್ಯೂಸ್, ಬೆಟ್ಟದ ನೆಲ್ಲಿಕಾಯಿ ಜ್ಯೂಸ್, ಬೂದುಕುಂಬಳಕಾಯಿ ಜ್ಯೂಸ್ ಅನ್ನು ಸೇವನೆ ಮಾಡಬೇಕು. ಮಜ್ಜಿಗೆ ಎಳೆನೀರನ್ನು ಹೆಚ್ಚಾಗಿ ಸೇವನೆ ಮಾಡಬೇಕು.
ಮನೆಮದ್ದು : ಗೊಗ್ಸುರ ಅಥವಾ ನೆಗ್ಗಿಲ ಮುಳ್ಳನ್ನು ಬೇರು ಸಮೇತ ಕಿತ್ತು ಜಜ್ಜಿ ರಸ ತೆಗೆಯಬೇಕು. ಇದನ್ನು ನಾಟಿ ಹಸುವಿನ ಹಾಲಿಗೆ ಸೇರಿಸಬೇಕು ಮತ್ತು ಇದಕ್ಕೆ ಸಕ್ಕರೆ ಬೇರೆಸಬೇಕು. ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 6:00 ಗಂಟೆಗೆ ಸೇವನೆ ಮಾಡಬೇಕು. ಈ ರೀತಿ ಮಾಡುವುದರಿಂದ ಶರೀರದಲ್ಲಿ ಎಲ್ಲಾ ಉರಿ ಮತ್ತು ಉಷ್ಣತೆ ಕಡಿಮೆ ಆಗುತ್ತದೆ.