ಮಲಬದ್ಧತೆಗೆ ಮನೆಮದ್ದು !ಕುಳಿತ ತಕ್ಷಣ ಮಲ ಹೊರಗೆ

Home Remedy for Constipation:ಮಲಬದ್ಧತೆ ಸಮಸ್ಯೆಯಿಂದ ಹಲವಾರು ಜನರು ನರಳುತ್ತಿದ್ದಾರೆ. ಕರುಳು ಶುದ್ಧವಾದರೆ ಲವಲವಿಕೆಯಿಂದ ಇರುವುದು ಸಾಧ್ಯ.ಅಗಸೆ ಬೀಜ, ಏಳ್ಳು ಮತ್ತು ಮೆಂತೆ ಕಾಳು ಸೇರಿಸಿ ಪುಡಿ ಮಾಡಿ ಖಂಡಿತ ಸಹಾಯ ಆಗುತ್ತದೆ.ಒಂದು ಕೆಜಿ ಏಳ್ಳು, ಅಗಸೆ, ಮೆಂತೆ ತೆಗೆದುಕೊಂಡು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು.ನಂತರ ಮೂರನ್ನು ಪುಡಿ ಮಾಡಿ ಮಿಕ್ಸ್ ಮಾಡಿ ರಿಫ್ರೆಜರೇಟರ್ ನಲ್ಲಿ ಇಡಬೇಕು.ನಂತರ ಸಂಜೆ ಸಮಯದಲ್ಲಿ 3 ಗ್ಲಾಸ್ ನೀರಿಗೆ 3 ಚಮಚ ಪುಡಿ ಹಾಕಿ ಮಿಕ್ಸ್ ಮಾಡಿ ಕುಡಿಯಿರಿ. ಇದನ್ನು ಕುಡಿದರೆ ಕರುಳು ಶುದ್ಧಿಯಾಗುತ್ತದೆ ಮತ್ತು ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಚರ್ಮಕ್ಕೆ ಬಹಳ ಒಳ್ಳೆಯದು.

ಮೊಸರು ತಿಂದರೆ ದಪ್ಪ ಆಗುತ್ತಿರ ಎಂದು ಹಲವಾರು ಜನರು ಹೇಳುತ್ತಾರೆ. ಗಟ್ಟಿಮೊಸರು ಒಳ್ಳೆಯ ಫ್ಯಾಟ್ ಹೊಂದಿದೆ. ಇದು ಚರ್ಮದ ಆರೋಗ್ಯಕ್ಕೆ ಒಳ್ಳೆಯದು ಮತ್ತು ಇದರಿಂದ ಮಲಬದ್ಧತೆ ಸಮಸ್ಯೆ ಆಗುವುದಿಲ್ಲ. ಇದರಿಂದ ಕ್ಯಾಲ್ಸಿಯಂ ಸಿಗುತ್ತದೆ ಹಾಗೂ ಲವಲವಿಕೆಯಿಂದ ಇರಬಹುದು.ಬೆಳಗ್ಗೆ ಮತ್ತು ಮದ್ಯಾಹ್ನ 2 ಕಪ್ ಮೊಸರು ಸೇವಿಸುವುದು ಒಳ್ಳೆಯದು ಮತ್ತು ಅಸ್ತಮಾ ಸಮಸ್ಸೆ ಇರುವವರು ಮೊಸರು ಅವಾಯ್ಡ್ ಮಾಡಬೇಕು.

ಇನ್ನು ಸಬ್ಜೆ ಸೀಡ್ಸ್ ಪಾನಕ ಮಾಡಿ ಕುಡಿಬಹುದು.ರಾತ್ರಿ ನೆನಸಿಟ್ಟು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಮೋಶನ್ ಕ್ಲಿಯರ್ ಆಗುವುದಕ್ಕೆ ತುಂಬಾ ಅನುಕೂಲ.ಇನ್ನು ಎರಡು ಚಮಚ ಶುದ್ಧ ಕೊಬ್ಬರಿ ಎಣ್ಣೆಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ತುಂಬಾ ಒಳ್ಳೆಯದು. ಇದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ ಕೂದಲಿಗೆ ಒಳ್ಳೆಯದು ಚರ್ಮಕ್ಕೆ ಒಳ್ಳೆಯದು, ಹೃದಯಕ್ಕೆ ಒಳ್ಳೆಯದು ಮತ್ತು ಕರುಳು ಶುದ್ಧ ಆಗಲು ಸಹಾಯ ಮಾಡುತ್ತದೆ.

ಇನ್ನು ಪೇರಳೆ ಹಣ್ಣಿನಲ್ಲಿ ನೀರಿನಲ್ಲಿ ಕರಗುವ ನಾರಿನ ಅಂಶ ಜಾಸ್ತಿ ಇದೆ. ಇದು ಬೇಡದೇ ಇರುವ ಆಹಾರವನ್ನು ಮಲದ ರೀತಿಯಲ್ಲಿ ಹೊರಹೋಗುವುದಕ್ಕೆ ಸಹಾಯ ಮಾಡುತ್ತದೆ. ಈ ಎಲ್ಲ ವಸ್ತುಗಳನ್ನು ಬಳಸಿ ಕರುಳನ್ನು ಶುದ್ಧಿಯನ್ನು ಮಾಡಿಕೊಂಡು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಿಕೊಳ್ಳಿ.

Related Post

Leave a Comment