ಮನೆಯಲ್ಲೇ ಸಿಗುವ ವಸ್ತುಗಳನ್ನು ಉಪಯೋಗಿಸಿಕೊಂಡು ಈ ರೀತಿಯಾಗಿ ಧೂಪವನ್ನು ಸುಲಭವಾಗಿ ಹಾಕಬಹುದು ಎಂದು ತಿಳಿಸಿಕೊಡುತ್ತೇನೆ. ಇನ್ನು ಸಾಂಬ್ರಾಣಿ ಧೂಪವನ್ನು ಪ್ರತಿದಿನ ಬೇಕಾದರೂ ಹಾಕಬಹುದು. ಇನ್ನು ವಾರಕ್ಕೆ ಮತ್ತು ತಿಂಗಳಿಗೆ ಒಂದು ಸಲ ಹಾಕಿದರೆ ತುಂಬಾ ಒಳ್ಳೆಯದು. ಏಕೆಂದರೆ ಸಾಂಬ್ರಾಣಿ ಧೂಪವನ್ನು ಮನೆಯಲ್ಲಿ ಹಾಕುವುದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ಕಡಿಮೆ ಆಗುತ್ತದೆ. ಮನೆಯಲ್ಲಿ ಪಾಸಿಟಿವ್ ಎನರ್ಜಿ ಶುರು ಆಗುತ್ತದೆ. ಒಂದು ಸರಿ ಸಾಂಬ್ರಾಣಿ ಧೂಪ ಹಾಕಿ ನೋಡಿದರೆ ನಿಮಗೆ ತಿಳಿಯುತ್ತದೆ.
ಇನ್ನು ಸಾಂಬ್ರಾಣಿ ಧೂಪ ಹಾಕುವುದರಿಂದ ಸೊಳ್ಳೆ ಕಾಟ ಕ್ರೀಮಿ ಕಿಟಗಳ ಕಾಟ ಇರುವುದಿಲ್ಲ. ಇನ್ನು ಎಲ್ಲಾ ಮನೆಯಲ್ಲಿ ಧೂಪ ಹಾಕುವುದಕ್ಕೆ ಇದ್ದಿಲು ಇರುವುದಿಲ್ಲ. ಚಿಪ್ಪಾನ್ನು ಕಲೆಕ್ಟ್ ಮಾಡಿ ಇಟ್ಟುಕೊಂಡು ಧೂಪ ಹಾಕುವಾಗ ಬಳಸಬಹುದು. ಒಂದು ಚಿಪ್ಪು ತೆಗೆದುಕೊಂಡು ಗ್ಯಾಸ್ ಮೇಲೆ ಇಟ್ಟು ಚೆನ್ನಾಗಿ ಕಾಯಿಸಬೇಕು. ಇನ್ನು ಧೂಪವನ್ನು ಶುಕ್ರವಾರ ಮಂಗಳವಾರದ ದಿನ ಹಾಕಬಹುದು. ಇನ್ನು ತಿಂಗಳಿಗೆ ಹಾಕುವುದಾದರೆ ದಯವಿಟ್ಟು ಅಮಾವಾಸ್ಯೆಗೆ ಹಾಕಿ.
ಚಿಪ್ಪು ಉರಿದು ಕೆಂಡ ಆದಾಗ ಅದರ ಮೇಲೆ ಸಾಂಬ್ರಾಣಿಯನ್ನು ಹಾಕಿದರೆ ತುಂಬಾ ಒಳ್ಳೆಯದು. ಇನ್ನು ಸೊಳ್ಳೆ ಕಾಟ ಇರುವವರು ಇದಕ್ಕೆ ಬೆಳ್ಳುಳ್ಳಿ ಸಿಪ್ಪೆ ಹಾಗು ಬೇವಿನ ಎಲೆಯನ್ನು ಹಾಕಬಹುದು. ಈ ರೀತಿ ವಾರಕ್ಕೆ ಒಮ್ಮೆ ಹಾಕಿದರೂ ಸಹ ತುಂಬಾ ಒಳ್ಳೆಯದು.