ಡಿಸೆಂಬರ್ 17ಕ್ಕೆ ಧನುರ್ಮಾಸ ಪ್ರಾರಂಭವಾಗಿದೆ ಮತ್ತು ಜನವರಿ 15ಕ್ಕೆ ಧನುರ್ಮಾಸ ಮುಕ್ತಾಯವಾಗುತ್ತದೆ. ಮದುವೆ ಆಗದೆ ಇರುವ ಹೆಣ್ಣು ಮಕ್ಕಳು ಧನುರ್ಮಾಸ ಪೂಜೆಯನ್ನು ಶುರು ಮಾಡಿರುತ್ತಾರೆ. ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಮಾಡುವುದು ಅತ್ಯಂತ ಶ್ರೇಷ್ಠವಾದದ್ದು. ಅಂದರೆ ಬೆಳಗ್ಗೆ 4:00 ಗಂಟೆಯಿಂದ 6:00 ಗಂಟೆ ಒಳಗೆ ಧನುರ್ಮಾಸ ಪೂಜೆಯನ್ನು ಮಾಡಿರಬೇಕು. ಈ ಧನುರ್ಮಾಸ ಪೂಜೆ ಮಾಡುವಾಗ ಹಲವಾರು ನಿಯಮಗಳನ್ನು ಪಾಲನೆ ಮಾಡಿ ಪೂಜೆಯನ್ನು ಮಾಡಬೇಕು. ಪೂಜೆ ಮಾಡುವಾಗ ಕೆಲವೊಂದು ತಪ್ಪುಗಳನ್ನು ಮಾಡಬಾರದು.
ಧನುರ್ಮಾಸ ಪೂಜೆ ಮಾಡುವಾಗ ಪ್ರತಿದಿನ ತಲೆ ಸ್ನಾನ ಮಾಡಿ ಪೂಜೆಯನ್ನು ಮಾಡಬೇಕು.ಹಾಗಾಗುತ್ತೆ ನಿಮ್ಮ ಅರೋಗ್ಯಕ್ಕೆ ತಕ್ಕಂತೆ ನೀವು ಎಟಿ ದಿನ ಪೂಜೆಯನ್ನು ಮಾಡುತ್ತೀರಾ ಅನ್ನೋದು ಮೊದಲು ತಿಳಿದುಕೊಳ್ಳಿ. ಅದರೆ ಬರೀ ಕೈ ಕಾಲು ಮುಖ ತೊಳೆದುಕೊಂಡು ಮತ್ತು ಮೈ ಸ್ನಾನ ಮಾಡಿ ಧನುರ್ಮಾಸ ಪೂಜೆಯನ್ನು ಮಾಡಬಾರದು. ತುಂಬಾನೇ ಮಡಿಯಿಂದ ಪೂಜೆಯನ್ನು ಮಾಡಬೇಕು.
ಧನುರ್ಮಾಸ ಪೂಜೆ ಮಾಡುವಾಗ ಬೆಳಗ್ಗೆ ಎದ್ದು ತಲೆ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ಪೂಜೆಯನ್ನು ಮಾಡಬೇಕು. ಯಾವುದೇ ಕಾರಣಕ್ಕು ತೊಳೆಯದೆ ಇರುವ ಬಟ್ಟೆಯನ್ನು ಧರಿಸಬಾರದು.ಹರಿದಿರುವ ಬಟ್ಟೆ ಮತ್ತು ಕಪ್ಪು ಬಣ್ಣದ ಬಟ್ಟೆಯನ್ನು ಸಹ ಯಾವುದೇ ಕಾರಣಕ್ಕೂ ಧರಿಸಬೇಡಿ.
ದೇವಸ್ಥಾನದಲ್ಲಿ ಇರುವ ಅಶ್ವತ್ ಮರ ಮತ್ತು ನಾಗರಕಲ್ಲಿಗೂ ಸಹ ಪೂಜೆಯನ್ನು ಸಲ್ಲಿಸಿ ಹಾಗು ನವಗ್ರಹ ಸುತ್ತ ಪ್ರದಕ್ಷಿಣೆ ಅನ್ನು ಹಾಕಿರಿ.
ಧನುರ್ಮಾಸ ಪೂಜೆ ಮಾಡುವುದಕ್ಕೆ ಹೋಗುವಾಗ ಕಾಲಿಗೆ ಚಪ್ಪಲಿ ಹಾಕಿಕೊಂಡು ಹೋಗಬಾರದು.
ಇನ್ನು ಧನುರ್ಮಾಸದಲ್ಲಿ ಯಾವುದೇ ಕಾರಣಕ್ಕೂ ಮಾಂಸಹರವನ್ನು ಸೇವನೆ ಮಾಡಬಾರದು. ಧನುರ್ಮಾಸ ಪೂಜೆ ಮಾಡುವಾಗ ಬ್ರಹ್ಮಚಾರ್ಯವನ್ನು ಪಾಲನೆ ಮಾಡಬೇಕು.
https://youtu.be/53a0fNAb3VU?si=DhpJ0t6f6l7pZxr5