ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣವೆ ಬಿಸಿ ಬಿಸಿ ಟೀ ಬೇಕು. ಅದರಲ್ಲೂ ಟೀ ಚೆನ್ನಾಗಿ ಇದ್ದರೆ ಟೀ ಅನ್ನು ತುಂಬಾ ಇಷ್ಟ ಪಟ್ಟು ಕುಡಿಯುತ್ತಾರೆ. ಇನ್ನು ಕೆಲವರಿಗೆ ಸಂಜೆ ಸಮಯದಲ್ಲಿ ಟೀ ಕುಡಿಲಿಲ್ಲ ಎಂದರೆ ಆಗೋದೇ ಇಲ್ಲಾ. ಇನ್ನು ಶುಂಠಿ ಏಲಕ್ಕಿ ಹಾಕಿರುವ ಟೀ ಯಾರಿಗೆ ಇಷ್ಟ ಇರೋದಿಲ್ಲ ಹೇಳಿ. ಈ ರೀತಿ ಮಾಡಿದರೆ ಟೀ ರುಚಿ ಕೂಡ ಹೆಚ್ಚಾಗುತ್ತದೆ ಹಾಗೆ ಪ್ರತಿ ದಿನ ನಿಮಗೆ ಶುಂಠಿ ಏಲಕ್ಕಿ ಜಜ್ಜುವ ಕೆಲಸ ಇರೋದಿಲ್ಲ. ನಿಮಿಷದಲ್ಲೇ ನೀವು ಟೀ ತಯಾರಿಸಿಕೊಂಡು ಕುಡಿಯಬಹುದು.
ಮೊದಲು ಹಸಿ ಶುಂಠಿ ಅನ್ನು ಚೆನ್ನಾಗಿ ನೀರಲ್ಲಿ ಹಾಕಿ ತೊಳೆಯಿರಿ ಮತ್ತು ಶುಂಠಿ ಮೇಲೇ ಇರುವ ಸಿಪ್ಪೆಯನ್ನು ತೊಳೆಯಿರಿ. ನಂತರ ಇದನ್ನು ಮಿಕ್ಸಿ ಜಾರಿಗೆ ಹಾಕಿ ಮತ್ತು ಇದಕ್ಕೆ 8 ಏಲಕ್ಕಿ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಮೊದಲು ನೀರು ಮತ್ತು ಹಾಲನ್ನು ಕುದಿಸಬೇಕು. ನಂತರ ಅದಕ್ಕೆ ಟೀ ಪುಡಿ ಹಾಕಬೇಕು ಕುದಿಸಿ ತಯಾರಿಸಿದ ಶುಂಠಿ ಪೇಸ್ಟ್ ಹಾಕಿ ಟೀ ಕುದಿಸಿ ಕುಡಿದರೆ ಟೀ ತುಂಬಾ ರುಚಿ ಆಗಿರುತ್ತದೆ ಹಾಗು ಅರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಒಂದು ಸಾರಿ ಟೀ ಮಾಡಿ ಕುಡಿದು ನೋಡಿ.