ಮೂಲಂಗಿಯ ಅನೇಕ ಆರೋಗ್ಯ ಪ್ರಯೋಜನಗಳ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತಿದೆ. ಇದರಲ್ಲಿ ಅಪಾರ ಪ್ರಮಾಣದ ಕಬ್ಬಿಣಾಂಶದ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಗುಣ ಕಂಡುಬರುತ್ತದೆ.ಮೂಲಂಗಿ ಸೊಪ್ಪು ಕೂಡ ಅರೋಗ್ಯಕ್ಕೆ ತುಂಬಾ ಒಳ್ಳೆಯದು.ದೇಹಕ್ಕೆ ಬೇಕಾಗಿರುವ ಕ್ಯಾಲ್ಸಿಯಂ ಹಾಗೂ ಪಾಸ್ಪರಸ್, ನಾರಿನಂಶವನ್ನು ಒದಗಿಸುತ್ತದೆ. ನಿಮ್ಮ ಗ್ಯಾಸ್ಟಿಕ್ ಸಮಸ್ಯೆಯನ್ನು ಕಡಿಮೆ ಮಾಡಿ ಮಲಬದ್ಧತೆಯಾ ಸಮಸ್ಯೆಯನ್ನು ಹೋಗಲಾಡಿಸುವ ಗುಣವನ್ನು ಇದು ಹೊಂದಿದೆ.
ಜನರಲ್ಲಿ ಮೂಲವ್ಯಾದಿ ಮತ್ತು ಫೈಲ್ಸ ಎನ್ನುವುದು ಸಾಮಾನ್ಯವಾಗಿದೆ.ಏಕೆಂದರೆ ಮೂಲಂಗಿ ಎಲೆಗಳಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳ ಪ್ರಮಾಣ ತುಂಬಾ ಹೆಚ್ಚಾಗಿದೆ.ನೈಸರ್ಗಿಕವಾದ ರೀತಿಯಲ್ಲಿ ಉರಿಯುತವನ್ನು ಕಡಿಮೆ ಮಾಡುತ್ತದೆ.ನರ ಮಂಡಲದಲ್ಲಿ ಕಂಡು ಬರುವ ಸಮಸ್ಸೆಯನ್ನು ಇದು ಪರಿಹಾರ ಮಾಡುತ್ತದೆ.ಇದರಿಂದ ಸರಾಗವಾದ ರಕ್ತ ಸಂಚಾರ ಆಗುವಂತೆ ಉಂಟುಮಾಡುತ್ತದೆ.ನೀರಿನಲ್ಲಿ ಒಣಗಿದ ಮೂಲಂಗಿ ಎಲೆಯ ಪುಡಿಯನ್ನು ಮಿಶ್ರಣ ಮಾಡಿ ನಿಮ್ಮ ವೈದ್ಯರು ಹೇಳಿದ ಹಾಗೆ ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಅತ್ಯುತ್ತಮ ಪರಿಹಾರಗಳನ್ನು ಪೈಲ್ಸ್ ವಿಚಾರದಲ್ಲಿ ಕಂಡುಕೊಳ್ಳಬಹುದು.
ಇನ್ನು ಜಾಂಡಿಸ್ ಅಥವಾ ಕಾಮಾಲೆ ಸಮಸ್ಸೆ ಇದ್ದಾರೆ ಮೂತ್ರ ವಿಸರ್ಜನೆ ಮಾಡುವಾಗ ಮೂತ್ರದ ಬಣ್ಣ ಕೂಡ ಹಳದಿ ಬಣ್ಣಕ್ಕೆ ತಿರಿಗಿರುತ್ತದೆ.ಅದರೆ ಈ ಸಮಸ್ಸೆಯನ್ನು ಸುಲಭವಾಗಿ ನೀವು ಮೂಲಂಗಿ ಎಲೆಗಳಿಂದ ನಿಯಂತ್ರಣ ಮಾಡಿಕೊಳ್ಳಬಹುದು. ವಿಟಮಿನ್-ಸಿ ಅಂಶ ಹೆಚ್ಚಾಗಿರುವ ಮೂಲಂಗಿ ಎಲೆಗಳು ತಮ್ಮ ಪ್ರಭಾವದಿಂದ ನಿಮ್ಮ ಜಾಂಡಿಸ್ ಸಮಸ್ಸೆಯನ್ನು ದೂರ ಮಾಡಬಲ್ಲದು.
ಸಾಧ್ಯವಾದರೆ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಮೂಲಂಗಿ ಎಲೆಯ ರಸ ಸ್ವಲ್ಪ ಪ್ರಮಾಣದಲ್ಲಿ ಸೇವನೆ ಮಾಡುತ್ತ ಬನ್ನಿ. ಇನ್ನು ಮೂಲಂಗಿ ಎಲೆಗಳಲ್ಲಿ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡುವ ಗುಣವಿದೆ. ಮೂಲಂಗಿ ಎಲೆಯ ರಸ ಕುಡಿದು ಸಕ್ಕರೆ ಕಾಯಿಲೆಯನ್ನು ನಿಯಂತ್ರಣಕ್ಕೆ ತರಬಹುದು.ಇನ್ನು ಬಾಯಿಯ ವಸಡಿನಲ್ಲಿ ಕಂಡು ಬರುವ ರಕ್ತ ಸ್ರವವನ್ನು ಇದು ನಿವಾರಣೆ ಮಾಡುತ್ತದೆ.