ಮನೆಯಲ್ಲಿ ದೀಪ ಹಚ್ಚುವಾಗ ಬರುವ ಸಂಕೇತಗಳ ಅರ್ಥವನ್ನು ತಿಳಿದುಕೊಳ್ಳಿ!

ಮನೆಯಲ್ಲಿ ಪ್ರತಿದಿನ ದೀಪವನ್ನು ಪ್ರತಿಯೊಬ್ಬರೂ ಹಚ್ಚುತ್ತಾರೆ. ಯಾವುದೇ ಖುಷಿ ವಿಚಾರ ಕೇಳಿ ಬಂದರು ದೀಪ ಹಚ್ಚುತ್ತಾರೆ.ದೇವರ ದೀಪದ ಬೆಳಕಿನಲ್ಲಿ ದೇವರನ್ನು ನೋಡುವುದರಿಂದ ಬೇಗನೆ ಸಂಕಲ್ಪ ಈಡೇರುತ್ತದೆ ಹಾಗೂ ತುಂಬಾ ಶ್ರೇಷ್ಠ ಕೂಡ.ನೀವು ಯಾವುದೇ ಕ್ಷೇತ್ರಕ್ಕೆ ಹೋದರು ಗರ್ಭ ಗುಡಿಯಲ್ಲಿ ಲೈಟ್ ಕಾಣಿಸುವುದಿಲ್ಲ.ದೀಪದ ಬೆಳಕಿನಲ್ಲಿ ದೇವರನ್ನು ನೋಡಬೇಕಾಗುತ್ತದೆ.ಅದಕ್ಕಾಗಿ ದೀಪಕ್ಕೆ ತುಂಬಾನೇ ಮಹತ್ವವನ್ನು ಕೊಡುತ್ತೇವೆ.ದೀಪ ಹಚ್ಚಿದಾಗ ಇದ್ದಕ್ಕಿದಂತೆ ದೀಪ ಹಾರಿಹೋದರೆ ಮತ್ತು ದೀಪದ ಬತ್ತಿ ಸುಟ್ಟು ಹೋದರೆ ಮನಸ್ಸಿನಲ್ಲಿ ಭಯ ಹುಟ್ಟುವುದು ಸಹಜ.ಹಾಗಾಗಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಡುತ್ತೇನೆ.

ದೇವರ ಹತ್ತಿರ ಸಂಕಲ್ಪ ಕೇಳುವ ಸಮಯದಲ್ಲಿ ಒಂದು ದೀಪ ಬತ್ತಿ ಸಮೇತ ಸುಟ್ಟು ಹೋಗುತ್ತದೆ ಮತ್ತು ಇನ್ನೊಂದು ನಿಧಾನವಾಗಿ ಉರಿಯುತ್ತದೆ. ಇದು 50% ಶುಭ ಮತ್ತು ಅಶುಭ ಸೂಚನೆಗಳನ್ನು ನೀಡುತ್ತಾದೆ.ಪ್ರತಿದಿನ ದೇವರಿಗೆ ದೀಪ ಹಚ್ಚುವುದು ಒಳ್ಳೆಯದಾಗಲಿ ಎನ್ನುವ ಕಾರಣಕ್ಕೆ.ಅದರೆ ದೇವರು ಯಾವತ್ತು ಕೆಟ್ಟು ಮಾಡುವುದಕ್ಕೆ ಸಾಧ್ಯವಿಲ್ಲ.ಅದರೆ ಮುಂದೆ ಆಗುವುದರ ಬಗ್ಗೆ ಸೂಚನೆಯನ್ನು ದೇವರು ಕೊಡುತ್ತದೆ.ನೀವು ಕೇಳಿಕೊಂಡ ಸಂಕಲ್ಪ ನಿದಾನಕ್ಕೆ ಆಗುತ್ತದೆ ಎನ್ನುವ ಸೂಚನೆಗಳನ್ನು ಸಹ ದೇವರು ದೀಪದ ಮೂಲಕ ಕೊಡುತ್ತದೆ.

ದೀಪದಲ್ಲಿ ಬತ್ತಿ ಸುಟ್ಟರೆ ಅದು ಕೇಡುಕು ಆಗುತ್ತದೆ ಎನ್ನುವ ಅರ್ಥವನ್ನು ಕೊಡುತ್ತದೆ.ಈ ಸಮಯದಲ್ಲಿ ತಕ್ಷಣವೇ ದೀಪವನ್ನು ಬದಲಿಸಿ.ಹೊಸ ಎಣ್ಣೆ ಮತ್ತು ಬತ್ತಿ ಹಾಕಿ ದೀಪವನ್ನು ಹಚ್ಚಿ ದೇವರ ಹತ್ತಿರ ಮತ್ತೆ ಕೇಳಿಕೊಳ್ಳಿ.ನೀವು ಬೇಡಿಕೊಳ್ಳುವ ದೇವರ ಹತ್ತಿರ ಕೇಳಿಕೊಳ್ಳಿ ಎಲ್ಲಾ ಸರಿ ಹೋಗುತ್ತೆ. ಸ್ವಲ್ಪ ಮಟ್ಟಿಗೆ ಕೆಡುಕು ಆಗಬಹುದು ಪೂರ್ತಿಯಾಗಿ ಕೆಡುಕು ಆಗುವುದಕ್ಕೆ ಸಾಧ್ಯವಿಲ್ಲ.ದೀಪ ಹಚ್ಚಿದ ನಂತರ ಅಮ್ಮನವರ ದೇವಸ್ಥಾನಕ್ಕೆ ಹೋಗಿ ಕುಂಕುಮ ಅರ್ಚನೆ ಮಾಡಿಸಿಕೊಂಡು ಬನ್ನಿ.

ಒಂದು ವೇಳೆ ದೀಪದ ಬತ್ತಿ ಸುಟ್ಟು ಹೋದ ಮೇಲೆ ತುಂಬಾನೇ ಕೆಡುಕು ಆಗುತ್ತಿದೆ ಎಂದರೆ ಈಶ್ವರ ದೇವಸ್ಥಾನದಲ್ಲಿ ರುದ್ರಭಿಷೇಕ ಪಂಚಾಮೃತಭಿಷೇಕ ಮಾಡಿಸಿದರೆ ಖಂಡಿತ ನಿಮ್ಮ ಸಮಸ್ಸೆ ಬಗೆಹರಿಯುತ್ತದೆ. ಇನ್ನು ತಿಂಗಳಿಗೆ ಪ್ರದೋಷ ಪೂಜೆ ಮಾಡುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.ಇನ್ನು ಗಾಳಿಯಿಂದ ಮತ್ತು ಮಕ್ಕಳಿಂದ ದೀಪ ಹಾರಿ ಹೋಗುವ ಸಾಧ್ಯತೆ ಇದೆ.

ಒಂದು ವೇಳೆ ಎಲ್ಲಾ ಶಾಂತಿಯಾಗಿ ಇದ್ದು ದೀಪ ಹಾರಿದರೆ ಈ ಸಮಯದಲ್ಲಿ ಕೆಡುಕು ಆಗುವ ಸಾಧ್ಯತೆ ಇರುತ್ತದೆ.ಕೆಲವೊಮ್ಮೆ ಎಣ್ಣೆಯ ಕಾರಣದಿಂದ ಬತ್ತಿ ಸುಟ್ಟೋಗುವ ಸಾಧ್ಯತೆ ಇದೆ.ಒಂದು ವೇಳೆ ನಿಮ್ಮ ದೀಪದ ಬತ್ತಿ ಸುಟ್ಟು ಹೋಗಿ ಅಥವಾ ನಂದಿದಾಗ ಈ ಸಮಯದಲ್ಲಿ ನಿಮ್ಮ ಜೀವನದಲ್ಲಿ ಏನಾದರು ಕೇಡುಕು ಆಗುತ್ತಿದ್ದಾರೆ ಇದು ಅಶುಭ ಸೂಚನೆ ಎಂದು ಪರಿಗಣಿಸಬಹುದು.ಆದಷ್ಟು ಶುದ್ಧವಾಗಿ ಇರುವ ಎಣ್ಣೆಯನ್ನು ದೀಪಕ್ಕೆ ಉಪಯೋಗ ಮಾಡುವುದು ಒಳ್ಳೆಯದು.ಒಂದು ವೇಳೆ ಬದಲಿಸಿದ ಮೇಲು ತೊಂದರೆ ಅದರೆ ಕೆಟ್ಟ ಸೂಚನೆ ಎಂದು ತಿಳಿದುಕೊಳ್ಳಿ.ಆದಷ್ಟು ನಂಬಿಕೆ ಶ್ರೇದ್ದೆ ಭಕ್ತಿಯಿಂದ ಪೂಜೆ ಮಾಡಿದರೆ ಪರಿಹಾರ ಸಿಗುತ್ತದೆ.

ಇನ್ನು ದೀಪಕ್ಕೆ ಪ್ರತಿದಿನ ಬತ್ತಿಯನ್ನು ಬದಲಿಸಬೇಕು. ಸೋಮವಾರ ಮತ್ತು ಶುಕ್ರವಾರ ದೀಪವನ್ನು ಶುದ್ಧ ಮಾಡಿಕೊಳ್ಳಬೇಕು.ಆದಷ್ಟು ಪ್ರತಿದಿನ ಬತ್ತಿಯನ್ನು ಬದಲಾಯಿಸುವುದನ್ನು ಮರೆಯಬೇಡಿ.ಇನ್ನು ದೀಪವನ್ನು ಜೋರಾಗಿ ಉರಿಸುವುದರಿಂದ ಬತ್ತಿ ಸುಟ್ಟೋಗುವ ಸಾಧ್ಯತೆ ಕೂಡ ಇರುತ್ತದೆ.ದಿನನಿತ್ಯ ಎರಡು ಪುಟ್ಟ ದೀಪ ಮತ್ತು ಒಂದು ಕಾಮಾಕ್ಷಿ ದೀಪವನ್ನು ಹಚ್ಚಬಹುದು.ದೀಪದ ಬೆಳಕಿನಲ್ಲಿ ದೇವರನ್ನು ನೋಡಿದರೆ ನಿಮಗೆ ತುಂಬಾನೇ ಮನಸ್ಸಿಗೆ ಶಾಂತಿ ಸಿಗುತ್ತದೆ ಮತ್ತು ವ್ಯತ್ಯಾಸ ಕುಡ್ಸು ನಿಮಗೆ ತಿಳಿಯುತ್ತದೆ.

Related Post

Leave a Comment