ಮಾರ್ಚ್ 25ನೇ ತಾರೀಕು ಸೋಮವಾರ ಹುಣ್ಣಿಮೆ ಇದೆ. ಭಾನುವಾರ ಅಥವಾ ಸೋಮವಾರ ದಿನ ಈ ವಸ್ತುಗಳನ್ನು ತೆಗೆದುಕೊಂಡು ಬಂದು ಪೂಜೆ ಮಾಡಿ ಬಳಸಬೇಕು.
1, ಚಿಕ್ಕ ಬಿದಿರಿನ ಸಸ್ಯ ಅಥವಾ ಮನಿ ಪ್ಲಾಂಟ್ ಅನ್ನು ಹುಣ್ಣಿಮೆ ದಿನ ತೆಗೆದುಕೊಂಡು ಬರಬಹುದು ಮತ್ತು ತುಳಸಿ ಗಿಡ ಅನ್ನು ಸಹ ತೆಗೆದುಕೊಂಡು ಬನ್ನಿ. ಇನ್ನು ಭಾನುವಾರ ಸೋಮವಾರ ವಾಸ್ತು ಗಿಡಗಳನ್ನು ಮನೆಗೆ ತರುವುದು ತುಂಬಾ ಒಳ್ಳೆಯದು.
2, ಬೆಳ್ಳಿ ಕಾಯಿನ್ ಅನ್ನು ಸಹ ಹುಣ್ಣಿಮೆ ದಿನ ತೆಗೆದುಕೊಂಡು ಬರಬಹುದು. ಹುಣ್ಣಿಮೆ ದಿನ ಚಿನ್ನ ಬೆಳ್ಳಿ ತೆಗೆದುಕೊಂಡರೆ ತುಂಬಾ ಒಳ್ಳೆಯದು.
3, ಅರಿಶಿನದ ಕೊಂಬು ಅನ್ನು ಮನೆಗೆ ತೆಗೆದುಕೊಂಡು ಬರುವುದು ತುಂಬಾ ಒಳ್ಳೆಯದು ಹಾಗು ಗಂಧದ ಚಕ್ಕೆ ಇಲ್ಲವಾದರೂ ಕೂಡ ತೆಗೆದುಕೊಂಡು ಬರಬಹುದು.
4, ಲಕ್ಷ್ಮಿಗೆ ಪ್ರಿಯವಾದ ವಸ್ತು ಯಾರ ಮನೆಯಲ್ಲಿ ಇಲ್ಲವೋ ಅಂತವರು ಶ್ರೀಫಲ, ತಾವರೆ ಬೀಜ, ಗೋಮಾತಿ ಚಕ್ರ,ಕವಡೆ ಗಳನ್ನು ತೆಗೆದುಕೊಂಡು ಬರಬಹುದು. ಇವುಗಳನ್ನು ತೆಗೆದುಕೊಂಡು ಬಂದು ಕೆಂಪು ಬಟ್ಟೆಯಲ್ಲಿ ಕಟ್ಟಿ ಬಿರುವಿನಲ್ಲಿ ಇಡಬಹುದು. ಇದೆಲ್ಲಾ ಸಿಕ್ಕಿಲ್ಲವಾದರೆ 11 ಬಿಳಿ ಕವಡೆ ತೆಗೆದುಕೊಂಡು ಬಂದು ಪೂಜೆ ಮಾಡಿ ಮನೆಯಲ್ಲಿ ಇಟ್ಟುಕೊಳ್ಳಬಹುದು ಅಥವಾ ಕೆಲಸ ಮಾಡುವ ಜಾಗದಲ್ಲಿ ಇಟ್ಟುಕೊಂಡರು ಸಹ ತುಂಬಾ ಒಳ್ಳೆಯದು.
5, ಪೂಜೆ ಗೆ ತೆಗೆದುಕೊಂಡು ಬರುವ ತೆಂಗಿನಕಾಯಿಯನ್ನು ಪೂರ್ಣ ಫಲ ಎಂದು ಕರೆಯುತ್ತೇವೆ ಹಾಗೆ ಹುಣ್ಣಿಮೇ ದಿನ ತೆಂಗಿನಕಾಯಿ ತೆಗೆದುಕೊಂಡು ಬಂದರು ಸಹ ಒಳ್ಳೆಯ ಫಲವನ್ನು ಕೊಡುತ್ತದೆ.
6, ವಾಸ್ತು ದೋಷ ಇದ್ದರೆ ಆಮೇಗಳನ್ನು ಮನೆಗೆ ತೆಗೆದುಕೊಂಡು ಬರಬಹುದು. ಇದರಿಂದ ನಿಮ್ಮ ಮನೆಯ ವಾಸ್ತು ದೋಷ ನಿವಾರಣೆ ಆಗುತ್ತದೆ.
7, ಇನ್ನು ನವಿಲುಗರಿಯನ್ನು ತೆಗೆದುಕೊಂಡು ಬನ್ನಿ ಎರಡು ನವಿಲುಗರಿ ಬೆಡ್ ರೂಮ್ ನಲ್ಲಿ ಇಡಬೇಕು ಮತ್ತು ಎರಡು ನವಿಲುಗರಿ ಹಾಲ್ ನಲ್ಲಿ ಇಡಬೇಕು ಮತ್ತು ಎರಡು ನವಿಲುಗರಿಯನ್ನು ದೇವರ ಮನೆಯಲ್ಲಿ ಇಡಬೇಕು.
8, ಇನ್ನು ಕೃಷ್ಣನಿಗೆ ಪ್ರಿಯವಾದ ಯಾವುದಾದರು ವಸ್ತುಗಳನ್ನು ದೇವರ ಮನೆಯಲ್ಲಿ ಇಡಬೇಕು.ಕಡಿಮೆ ದುಡ್ಡಿಗೆ ಏನು ಸಿಗುತ್ತದೆಯೋ ಆ ವಸ್ತುಗಳನ್ನು ಹುಣ್ಣಿಮೇ ದಿನ ಮನೆಗೆ ತೆಗೆದುಕೊಂಡು ಬಂದರೆ ತುಂಬಾ ಒಳ್ಳೆಯದು.
9, ಇನ್ನು ಹುಣಸೆ ಚಿಗುರು ಸಿಕ್ಕರೆ ಯಾವುದೇ ಕಾರಣಕ್ಕೂ ಬಿಡಬೇಡಿ.ಏಕೆಂದರೆ ಇದರಿಂದ ಹಣದ ಅರಿವು ಹೆಚ್ಚಾಗುತ್ತದೆ. ಹುಣಸೆ ಚಿಗುರು ಹುಣ್ಣಿಮೆ ದಿನ ಸಿಕ್ಕರೆ ತೆಗೆದುಕೊಂಡು ಬಂದು ಪೂಜೆ ಮಾಡಿ. ನಂತರ ಇದನ್ನು ಕ್ಯಾಶ್ ಬಾಕ್ಸ್ ನಲ್ಲಿ ಎತ್ತಿಟ್ಟುಕೊಳ್ಳಿ.