Ridge Gourd Benefits :ಋತುವಿಗೆ ಅನುಗುಣವಾಗಿ ತರಕಾರಿಗಳು ಸಿಗುವುದು ಮಾತ್ರವಲ್ಲದೆ ಅದನ್ನು ಬಳಸಿದರೆ ದೇಹಕ್ಕೆ ಬೇಕಾಗುವಂತಹ ಪೋಷಕಾಂಶಗಳು ಲಭ್ಯ ಆಗುವುದು. ಹವಾ ಗುಣಕ್ಕೆ ಅನುಗುಣವಾಗಿ ಕೆಲವೊಂದು ತರಕಾರಿಗಳು ಆಯಾ ಪ್ರದೇಶದಲ್ಲಿ ಮಾತ್ರ ಬೆಳೆಯುವುದು.ಭಾರತದಲ್ಲಿ ಹೆಚ್ಚಾಗಿ ಬೆಳೆಯುವ ಹಾಗೂ ಬಳಸುವ ಹೀರೆಕಾಯಿಯನ್ನು ಹಲವಾರು ರೀತಿಯಲ್ಲಿ ಬಳಸುತ್ತಾರೆ. ಇದನ್ನು ಆಹಾರದಲ್ಲಿ ಬಳಸುವುದರಿಂದ ತುಂಬಾನೇ ರುಚಿಕರವಾಗಿರುತ್ತದೆ. ಇದರಲ್ಲಿ ಇರುವ ಹಲವಾರು ರೀತಿಯ ಪೋಷಕಾಂಶಗಳು ದೇಹದ ಪ್ರತಿರೋಧಕ ಶಕ್ತಿಯನ್ನು ವೃದ್ಧಿಸುವುದು ಮತ್ತು ದೇಹವನ್ನು ಅನಾರೋಗ್ಯದಿಂದ ಕಾಪಾಡುವುದು. ಹೀರೆಕಾಯಿಯಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಸಿಗುತ್ತದೆ.
1, ನಾರಿನಾಂಶ ನೀರಿನಾಂಶ ವಿಟಮಿನ್ ಸಿ ವಿಟಮಿನ್ ಎ ಕಬ್ಬಿಣಾಂಶ ಮೆಗ್ನೀಶಿಯಂ ಮತ್ತು ವಿಟಮಿನ್ ಬಿ6 ಇದೆ. ಇದರಲ್ಲಿ ಕ್ಯಾಲೋರಿ ಕೊಲೆಸ್ಟ್ರಾಲ್ ತುಂಬಾನೇ ಕಡಿಮೆ ಇದೆ. ಇದು ಚಯಾಪಚಯವನ್ನು ಉತ್ತಮಪಡಿಸಿ ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರಗೆ ಹಾಕುವುದು.
2, ಹೀರೆಕಾಯಿ ಸೇವನೆ ಮಾಡುವುದರಿಂದ ಕಣ್ಣಿನ ಆರೋಗ್ಯ ಚೆನ್ನಾಗಿರುತ್ತದೆ. ಆಂಟಿ ಆಕ್ಸಿಡೆಂಟ್ ಸಮೃದ್ಧವಾಗಿರುವುದರಿಂದ ಕಣ್ಣಿಗೆ ಹಾನಿ ಉಂಟುಮಾಡುವಂತಹ ಫ್ರೀ ರಾಡಿಕಲ್ಸ್ ಅನ್ನು ದೂರ ಮಾಡುವುದು.3, ಹಿರೇಕಾಯಿಯಲ್ಲಿ ಕಬ್ಬಿಣ ಅಂಶ ಹೆಚ್ಚಾಗಿರುವುದರಿಂದ ರಕ್ತಹೀನತೆ ಸಮಸ್ಯೆ ಕಡಿಮೆಯಾಗುತ್ತದೆ.4, ಹೀರೆಕಾಯಿ ಸೇವನೆ ಮಾಡುವುದರಿಂದ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ಅಷ್ಟೇ ಅಲ್ಲದೆ ದೇಹದ ತೂಕವನ್ನು ಕಾಪಾಡಿಕೊಳ್ಳಲು ತುಂಬಾ ಸಹಾಯ ಮಾಡುತ್ತದೆ.
5, ಹೀರೆಕಾಯಿಯಲ್ಲಿ ಉತ್ತಮ ಪ್ರಮಾಣದ ನೀರಿನ ಅಂಶ ಇರುವುದರಿಂದ ಇದು ಆಹಾರದ ನಾರಿನಾಂಶವನ್ನು ಕೂಡ ಹೊಂದಿದೆ.ಇದರಿಂದ ಹೀರೆಕಾಯಿಯನ್ನು ಸೇವನೆ ಮಾಡಿದರೆ ಆಗ ದೇಹಕ್ಕೆ ನೀರಿನಂಶ ಮತ್ತು ನಾರಿನಂಶ ಸಿಗುವುದು.6, ಹೀರೆಕಾಯಿ ಜ್ಯೂಸ್ ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ. ಇನ್ನು ರಕ್ತದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. Ridge Gourd Benefits