ಸುಳ್ಳು ಹೇಳದಿರುವವರ ಸಂಖ್ಯೆ ತುಂಬಾ ಕಡಿಮೆ.. ಯಾಕೆಂದರೆ ನಾವೆಲ್ಲಾ ಒಂದಲ್ಲ ಒಂದು ಸಂದರ್ಭದಲ್ಲಿ ಸುಳ್ಳನ್ನು ಹೇಳಿಯೇ ಇರುತ್ತೇವೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವರಿಗೆ ರಾಶಿಗೆ ಅನುಗುಣವಾಗಿ ಸುಳ್ಳು ಹೇಳುವ ಗುಣ ಬಂದಿರುತ್ತದೆ ಎನ್ನಲಾಗುತ್ತೆ.
ಜನರ ನಡೆ-ನುಡಿ ಅವರ ರಾಶಿ ಮೇಲೆ ಕೂಡ ಅವಲಂಬಿತವಾಗಿರುತ್ತದೆ. ಕೆಲವರು ಸೌಜನ್ಯದಿಂದ ವರ್ತಿಸಿದರೆ, ಕೆಲವರು ಅಸಭ್ಯವಾಗಿ ವರ್ತಿಸುತ್ತಾರೆ. ಕೆಲವರು ಉದಾರ ಸ್ವಭಾವವನ್ನು ಹೊಂದಿದ್ದರೆ, ಕೆಲವರು ಯಾವಾಗಲೂ ಕೋಪವನ್ನು ತೋರಿಸುತ್ತಾರೆ. ಅದೇ ರೀತಿಯಲ್ಲಿ, ಸದಾ ಸುಳ್ಳು ಹೇಳುವ ಪ್ರತಿಭೆಯನ್ನು ಹೊಂದಿರುವ ಕೆಲವು ರಾಶಿಚಕ್ರ ಚಿಹ್ನೆಗಳು ಇವೆ. ಈ ರಾಶಿಯವರು ಭಯವಿಲ್ಲದೆ ಜನರ ಮುಖದ ಮೇಲೆ ಸುಳ್ಳು ಹೇಳುತ್ತಾರೆ. ಅಪರಿಚಿತರಾಗಿರಲಿ ಅಥವಾ ಅವರ ಹತ್ತಿರದ ವ್ಯಕ್ತಿಯಾಗಿರಲಿ, ಯಾರಾದರೂ ಸರಿಯೇ ಇವರು ಸತ್ಯತೆ ಮತ್ತು ಪ್ರಾಮಾಣಿಕತೆಯ ನೀತಿಯ ಮಾರ್ಗವನ್ನು ಅನುಸರಿಸುವುದಿಲ್ಲ.
ವಾಸ್ತವವಾಗಿ, ಈ ರಾಶಿಯ ಜನರು ತಮ್ಮ ಕೆಲಸವನ್ನು ಮಾಡಿಸಿಕೊಳ್ಳಲು ಸುಳ್ಳು ಹೇಳುತ್ತಾರೆ. ಇದಲ್ಲದೆ, ಈ ಜನರು ಕೆಲವು ಸಂದರ್ಭಗಳಿಂದ ತಪ್ಪಿಸಿಕೊಳ್ಳಲು ಮತ್ತು ತಮ್ಮ ಪರವಾಗಿ ಸನ್ನಿವೇಶಗಳನ್ನು ಓರೆಯಾಗಿಸಲು ಸುಳ್ಳು ಹೇಳುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ. ಆಸಕ್ತಿದಾಯಕ ವಿಷಯವೆಂದರೆ ತಮ್ಮ ಸುಳ್ಳುಗಳಿಂದಲೇ ಯಾರನ್ನಾದರೂ ಮೋಡಿ ಮಾಡುವ ಸಾಮಾರ್ಥ್ಯ ಹೊಂದಿರುತ್ತಾರೆ. ಹಾಗಾದರೆ ಬನ್ನಿ ಹೆಚ್ಚು ಸುಳ್ಳು ಹೇಳುವ ರಾಶಿಗಳಾವುವು ಎಂಬುದನ್ನು ನೋಡೋಣ.
ಮಿಥುನ–ಮಿಥುನ ರಾಶಿಯವರು ಬಹಳ ಬುದ್ಧಿವಂತರು. ಬುಧನು ಮಿಥುನ ರಾಶಿಯನ್ನು ಆಳುತ್ತಾನೆ. ಅವನ ಚಿಹ್ನೆಯಂತೆಯೇ, ಈ ಜನರೂ ಸಹ ಎರಡು ಮುಖಗಳನ್ನ ಹೊಂದಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಿಥುನ ರಾಶಿಯ ವ್ಯಕ್ತಿಗಳು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಬಾಯಲ್ಲಿ ಮುತ್ತುಗಳು ಉದುರಿದಂತೆ ಇವರಿಗೆ ಸುಳ್ಳುಗಳು ಉದುರುತ್ತವೆ. ಪ್ರತಿ ವಿಷಯದಲ್ಲಿಯೂ ಇವರು ನೋಡುವ ನೋಟ, ಮಾಡುವ ಚಿಂತನೆ ಬೇರೆಯೇ ಆಗಿರುತ್ತದೆ. ಹಲವಾರು ಬಾರಿ ಬೇರೆಯವರಿಗೆ ಸುಳ್ಳು ಎನ್ನಿಸಿದ ವಿಷಯಗಳು ಇವರ ದೃಷ್ಟಿಯಲ್ಲಿ ಸತ್ಯವಾಗಿರುತ್ತದೆ. ಮತ್ತು ಅವರು ಅದನ್ನೇ ಸಾಧಿಸುತ್ತಾರೆ ಕೂಡ. ಇದು ಕೆಲವರಿಗೆ ಬೇಸರ ತರಿಸುವುದೂ ಉಂಟು. ಆದರೆ, ತಮ್ಮ ಜಾಯಮಾನವನ್ನು ಇವರು ಬಿಡುವವರಲ್ಲ. ಕೊನೇ ತನಕ ಸುಳ್ಳನ್ನೇ ಸತ್ಯ ಎಂದು ನಂಬಿಸಲು ಇವರು ಹೋರಾಡುತ್ತಾರೆ.
ಮತ್ತೊಂದೆಡೆ ತಮ್ಮ ವರ್ಚಸ್ಸನ್ನು ಕಾಪಾಡಿಕೊಳ್ಳಲು ಸುಳ್ಳು ಹೇಳುತ್ತಾರೆ. ಇದರ ಜೊತೆಗೆ ತಮ್ಮ ಸುಳ್ಳುಗಳಿಂದ ಯಾರಿಗೂ ನೋವುಂಟು ಮಾಡದಂತೆ ನೋಡಿಕೊಳ್ಳುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಮಿಥುನ ರಾಶಿಯ ಜನರು ಸನ್ನಿವೇಶಗಳು ಮತ್ತು ಸಂದರ್ಭಗಳಿಗೆ ಹೊಂದಿಕೊಳ್ಳಲು ಸುಳ್ಳು ಹೇಳುತ್ತಾರೆ. ಪ್ರಾಮಾಣಿಕವಾಗಿ ಹೇಳುವುದಾದರೆ, ಹೆಚ್ಚು ಸುಳ್ಳು ಹೇಳುವ ರಾಶಿಚಕ್ರದವರಲ್ಲಿ ಮಿಥುನ ರಾಶಿಯ ವ್ಯಕ್ತಿಗಳು ಅಗ್ರಸ್ಥಾನದಲ್ಲಿರುತ್ತಾರೆ.
ತುಲಾ—ಮಿಥುನ ರಾಶಿಯವರು ಎರಡು ಮುಖದ ಸುಳ್ಳುಗಾರರಾಗಿದ್ದರೆ, ತುಲಾ ರಾಶಿಯವರು ಸುಳ್ಳು ಹೇಳುವುದರಲ್ಲಿ ರಾಜರಾಗಿರುತ್ತಾರೆ. ಬರೀ ಸುಳ್ಳು ಹೇಳುವುದು ಮಾತ್ರವಲ್ಲ ತಮ್ಮ ಸುಳ್ಳಗಳನ್ನೇ ಸತ್ಯವೆಂದು ಬಲವಾಗಿ ಪ್ರದರ್ಶಿಸುತ್ತಾರೆ. ತುಲಾ ರಾಶಿಯವರು ಶುಕ್ರ ಗ್ರಹದ ಗುಣಗಳನ್ನು ಹೊಂದಿದ್ದು, ಅದು ಅವರನ್ನು ಸಮಯಕ್ಕೆ ತಕ್ಕಂತೆ ಸುಳ್ಳಿನ ಕಥೆ ಕಟ್ಟುವವರನ್ನಾಗಿಸುತ್ತದೆ. ಹೀಗಾಗಿ, ಈ ವ್ಯಕ್ತಿಗಳು ಸುಳ್ಳಿನ ಕಥೆಗಳನ್ನು ಕಟ್ಟುವುದರಲ್ಲಿ ನಿಸ್ಸೀಮರು.
ತುಲಾ ರಾಶಿಯವರು ಅನೇಕ ಕಾರಣಗಳಿಗಾಗಿ ಸುಳ್ಳನ್ನು ಹೇಳುತ್ತಾರೆ. ಅವರು ಕಷ್ಟದಲ್ಲಿದ್ದಾಗ, ತಮ್ಮ ಸ್ಥಾನಮಾನ ಕಡಿಮೆಯಾಗಿದೆ ಎಂದು ಭಾವಿಸಿದಾಗ, ಮತ್ತು ಪರಿಸ್ಥಿತಿಯನ್ನು ಗೆಲ್ಲಲು ಬಯಸಿದಾಗ, ಹೀಗೆ ನಾನಾ ಸಂದರ್ಭದಲ್ಲಿ ಸುಳ್ಳು ಹೇಳುತ್ತಲೇ ಇರುತ್ತಾರೆ. ಇವರ ವಿಶೇಷತೆ ಎಂದರೆ ಇವರಿಗೆ ಯಾವುದರ ಮೇಲೆ ಸಂಶಯವಿದೆಯೋ ಆ ಬಗ್ಗೆ ಸತ್ಯವನ್ನು ತಿಳಿದುಕೊಳ್ಳುವ ಕುತೂಹಲದಿಂದ ಸುಳ್ಳಿನ ಮೊರೆ ಹೋಗುತ್ತಾರೆ. ಕೆಲವು ಬಾರಿ ಸತ್ಯವನ್ನು ಹೇಳಲು ಆಗದೆ ಸುಳ್ಳನ್ನು ಹೇಳಿಕೊಂಡುಬಿಡುತ್ತಾರೆ. ಬಳಿಕ ಆ ಸುಳ್ಳುಗಳ ಸಂಕೋಲೆಯಲ್ಲಿ ಸಿಲುಕಿಕೊಂಡು ಹೊರಬರಲಾರದೆ ಒದ್ದಾಡುತ್ತಾರೆ. ಹೀಗಾಗಿ ಈ ರಾಶಿಯವರಿಗೆ ಸುಳ್ಳು ಹೇಳುವುದು ಅತಿ ಸುಲಭವಾಗಿರುತ್ತದೆ.
ಕಟಕ–ಈ ರಾಶಿಯ ವ್ಯಕ್ತಿಗಳು ಸಮಯ ಸಾಧಕರು. ತಮಗೆ ಸಮಸ್ಯೆ ಆಗಲಿದೆ ಎಂದು ಗೊತ್ತಾದಾಗ ಅವರು ವಿಷಯಗಳನ್ನು ಬಹಳ ವೇಗವಾಗಿ ತಿರುಗಿಸುತ್ತಾರೆ ಮತ್ತು ಸುಳ್ಳನ್ನು ಅವರ ಎಡಗೈಗೂ ಆಟದಂತೆ ಹೇಳಿಬಿಡುತ್ತಾರೆ. ಜ್ಯೋತಿಷ್ಯದಲ್ಲಿ ಈ ಚಂದ್ರನ ಒಡೆತನದ ಮಿಥುನ ರಾಶಿಚಕ್ರದ ಜನರು ಸುಳ್ಳು ಹೇಳುವ ಸುಳ್ಳುಗಳನ್ನು ಬೇರೆಯವರು ಕಂಡುಹಿಡಿಯಲಾಗುವುದಿಲ್ಲ. ಇವರು ಹೇಳುವ ಸುಳ್ಳನ್ನು ತುಂಬಾ ಸುಲಭವಾಗಿ ಬೇರೆಯವರು ನಂಬುತ್ತಾರೆ. ನಂಬುವಂತೆ ಅಷ್ಟು ಚೆನ್ನಾಗಿ ಸುಳ್ಳಿನ ಕಥೆಗಳನ್ನು ಕಟ್ಟುತ್ತಾರೆ.
ಕಟಕ ರಾಶಿಯ ಪುರುಷರು ಮತ್ತು ಮಹಿಳೆಯರು ತಮ್ಮ ಮಾತುಗಳಿಂದ ಯಾರನ್ನಾದರೂ ಮೆಚ್ಚಿಸಲು ಅಥವಾ ಪ್ರಚೋದಿಸಲು ಹೆಚ್ಚಾಗಿ ಸುಳ್ಳನ್ನು ಹೇಳುತ್ತಾರೆ. ತಮ್ಮ ಸುಳ್ಳು ಪ್ರತಿಭೆಯನ್ನು ಇತರರ ಮನರಂಜನೆಗಾಗಿ ಬಳಸಿಕೊಳ್ಳುತ್ತಾರೆ.ಕಟಕ ರಾಶಿಯ ವ್ಯಕ್ತಿಗಳು ಪರಾನುಭೂತಿ ಮತ್ತು ಭಾವನಾಜೀವಿಗಳಾಗಿರುವುದರಿಂದ ಅವರ ಸುಳ್ಳುಗಳಿಂದ ಯಾರನ್ನೂ ನೋಯಿಸುವುದಿಲ್ಲ.
ವೃಶ್ಚಿಕ—ವೃಶ್ಚಿಕ ರಾಶಿಯ ವ್ಯಕ್ತಿಗಳಿಗೆ ಸುಳ್ಳೇ ಪ್ರಿಯವಾದ ಸಂಗಾತಿ. ಈ ರಾಶಿಯ ವ್ಯಕ್ತಿಗಳಿಗೆ ಸತ್ಯವನ್ನು ಒಪ್ಪಿಕೊಳ್ಳುವುದು, ಕೇಳುವುದೆಂದರೆ ಆಗುವುದೇ ಇಲ್ಲ. ಇದರ ಬಗ್ಗೆ ಹಿಂಜರಿಕೆ ಹೊಂದಿರುತ್ತಾರೆ. ಹೀಗಾಗಿ ಇವರ ಎದುರಿನಲ್ಲಿ ಯಾರೇ ಇದ್ದರೂ ಸುಳ್ಳಿನಲ್ಲಿಯೇ ಮನೆ ಕಟ್ಟುತ್ತಾರೆ. ಒಂದು ವೇಳೆ ಸತ್ಯ ಬಾಯಿಬಿಟ್ಟರೆ ಜನರ ಎದುರು ಅವಮಾನ ಅನುಭವಿಸಬೇಕಾದೀತೆಂಬ ಆತಂಕದಿಂದಲೇ ಇವರು ಸುಳ್ಳಿನ ಮೊರೆ ಹೋಗುತ್ತಾರೆ.
ಇವರು ಸುಳ್ಳು ಹೇಳಬೇಕಾದಾಗ ಸುಲಭವಾಗಿ ತಮ್ಮ ಕೆಲಸವನ್ನು ಮಾಡಿಕೊಳ್ಳುತ್ತಾರೆ ಎಂದು ನಂಬಲಾಗಿದೆ. ತಮಗೆ ಯಾವುದೇ ಸಮಸ್ಯೆ ಎದುರಾದಾಗ ಅವರು ಸುಲಭವಾಗಿ ಒಂದು ಸಮಾಲೋಚನೆಯನ್ನು ಪ್ರಸ್ತುತಪಡಿಸುತ್ತಾರೆ. ಈ ರಾಶಿಯ ಜನರು ವ್ಯವಹಾರದಲ್ಲಿ ಬಹಳ ಮುಂದಿರುತ್ತಾರೆ ಮತ್ತು ಅವರ ವ್ಯವಹಾರವನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಹೊಸ ಅವಕಾಶಗಳನ್ನು ಪಡೆಯಲು ಅವರು ಸುಳ್ಳನ್ನು ಆಶ್ರಯಿಸುತ್ತಾರೆ ಎಂದು ನಂಬಲಾಗಿದೆ. ಇವರು ಹೇಳುವ ಸುಳ್ಳು ಸತ್ಯದಂತೆಹಯೇ ಇರುತ್ತದೆ. ಬೇರೆಯವರು ಇವರ ಮಾತನ್ನು ಸುಳ್ಳು ಅಂತ ಪರಿಗಣಿಸಲು ಆಗುವುದಿಲ್ಲ. ಅಷ್ಟು ಸುಲಭವಾಗಿ ಇವರು ತಮ್ಮ ಕೆಲಸಗಳನ್ನು ಮುಗಿಸಿಕೊಳ್ಳುತ್ತಾರೆ.
ಈ ಜನರು ಬೇರೆಯವರ ಗಮನವನ್ನು ಸೆಳೆಯಲು ಸತ್ಯವನ್ನು ವಿರೂಪಗೊಳಿಸುತ್ತಾರೆ. ಅಲ್ಲದೆ, ಯಾವುದೇ ಪರಿಸ್ಥಿತಿಗೂ ತಮಗೆ ಬೇಕಾದ ರೀತಿ ಸುಳ್ಳಿನ ಮಸಾಲೆ ಸೇರಿಸಿ ಸೈ ಎನಿಸಿಕೊಂಡುಬಿಡುತ್ತಾರೆ.