Banana eating :Those who have this disease should not eat banana even after dinner!:ಬೇಸಿಗೆ ಇರಲಿ ಅಥವಾ ಮಳೆಗಾಲ, ಚಳಿಗಾಲವೇ ಇರಲಿ, ವರ್ಷಪೂರ್ತಿ ಅಗ್ಗದಲ್ಲಿ ಸಿಗುವಂತಹ ಹಣ್ಣೆಂದರೆ ಅದು ಬಾಳೆಹಣ್ಣು.ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ಪೌಷ್ಟಿಕ ಸತ್ವಗಳನ್ನು ಒಳ ಗೊಂಡಿರುವ ಈ ಬಾಳೆ ಹಣ್ಣನ್ನು ಹೆಚ್ಚಿನವರು ಇಷ್ಟಪಟ್ಟು ತಿನ್ನುತ್ತಾರೆ. ವೈದ್ಯರೂ ಕೂಡ ತಮ್ಮ ರೋಗಿಗಳಿಗೆ, ಊಟದ ಬಳಿಕ ಒಂದೊಂದು ಬಾಳೆಹಣ್ಣನ್ನು ತಿನ್ನುವಂತೆ ಸೂಚಿಸುತ್ತಾರೆ. ಯಾಕೆಂದರೆ ನಾರಿನಾಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದರಿಂದ, ಜೀರ್ಣಕ್ರಿಯೆ ಪ್ರಕ್ರಿಯೆಯು ಸರಾಗವಾಗಿ ನಡೆಯುತ್ತದೆ, ಜೊತೆಗೆ ಒಂದು ವೇಳೆ ಅಧಿಕ ರಕ್ತದೊತ್ತಡದಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ, ಅಂತಹವರು ಕೂಡ ದಿನಕ್ಕೆ ಒಂದು ಬಾಳೆಹಣ್ಣು ತಿನ್ನುವ ಅಭ್ಯಾಸ ಮಾಡಿಕೊಂಡರೆ, ಆರೋಗ್ಯಕಾರಿ ಜೀವನ ನಡೆಸಬಹುದಾಗಿದೆ. ಒಟ್ಟಾರೆಯಾಗಿ ಹೇಳಬೇಕು ಎಂದರೆ ಮಿತವಾಗಿ ಬಾಳೆಹಣ್ಣು ಸೇವನೆಯಿಂದ ದೇಹಕ್ಕೆ ಯಾವುದೇ ತೊಂದರೆ ಇರುವುದಿಲ್ಲ.
ಆದರೆ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಿಗೆ ಕಾಡುವ, ಒಂದೇ ಪ್ರಶ್ನೆ ಏನೆಂದರೆ, ಸಿಹಿ ಅಂಶ ಹೆಚ್ಚಿರುವ ಈ ಹಣ್ಣನ್ನು ಸಕ್ಕರೆ ಕಾಯಿಲೆ ಇರುವವರು ಸೇವನೆ ಮಾಡಬಹುದಾ? ಅಥವಾ ಇದನ್ನು ಸೇವನೆ ಮಾಡಿದರೆ, ರಕ್ತದಲ್ಲಿ ಸಕ್ಕರೆಮಟ್ಟ ಹೆಚ್ಚಾಗುತ್ತದೆಯೇ? ಎನ್ನುವ ಹಲವು ಗೊಂದಲಗಳು, ಹೆಚ್ಚಿನವರಿಗೆ ಇದೆ. ಬನ್ನಿ ಇಂದಿನ ಲೇಖನದಲ್ಲಿ ಇದರ ಬಗ್ಗೆ ಇರುವ ಸತ್ಯಾಂಶದ ಬಗ್ಗೆ ತಿಳಿಯೋಣ ಬನ್ನಿ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಆರೋಗ್ಯ ತಜ್ಞರು ಹೇಳುವ ಪ್ರಕಾರ–ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಇರುವವರು,ತಮಗೆ ಎಷ್ಟೇ ಇಷ್ಟವಾದ ಆಹಾರ ಪದಾರ್ಥವಾದರೂ ಕೂಡ ಮಿತವಾಗಿ ಸೇವಿಸಬೇಕಾಗುತ್ತದೆ. ಆದಷ್ಟು ಸಿಹಿ ಅಂಶ ಹೆಚ್ಚಿರುವ ಆಹಾರಪದಾರ್ಥಗಳಿಂದ ದೂರವಿದ್ದರೆ ಒಳ್ಳೆಯದು.
ಒಂದು ವೇಳೆ ನೈಸರ್ಗಿಕ ಸಿಹಿ ಅಂಶ ಇರುವ ಆಹಾರ ಪದಾರ್ಥಗಳು ಕೂಡ ಅಷ್ಟೇ, ಆದಷ್ಟು ಮಿತವಾಗಿ ಸೇವಿಸ ಬೇಕು, ಇದಕ್ಕೆ ಬಾಳೆಹಣ್ಣು ಕೂಡ ಹೊರತಲ್ಲ! ಹೀಗಾಗಿ ಮಧುಮೇಹಿಗಳು, ಬಾಳೆಹಣ್ಣನ್ನು ಮಿತವಾಗಿ ಸೇವನೆ ಮಾಡಿದರೆ ಒಳ್ಳೆಯದು.ಈ ವಿಷ್ಯ ನೆನಪಿರಲಿ, ಬಾಳೆಹಣ್ಣಿನಲ್ಲಿ ಗ್ಲೈಸೆಮಿಕ್ ಹಾಗೂ ಸಕ್ಕರೆ ಅಂಶದ ಪ್ರಮಾಣ ತುಂಬಾ ಹೆಚ್ಚಾಗಿ ಇರುವು ದರಿಂದ, ಮಧುಮೇಹ ಕಾಯಿಲೆ ಇರುವವರು, ಈ ಹಣ್ಣನ್ನು ತಿನ್ನುವ ಮೊದಲು ವೈದ್ಯರ ಸಲಹೆಗಳನ್ನು ಪಡೆದುಕೊಂಡರೆ ಒಳ್ಳೆಯದು.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕು–ಸಕ್ಕರೆಕಾಯಿಲೆ ಇರುವವರ, ದೊಡ್ಡ ಸಮಸ್ಯೆ ಏನೆಂದರೆ, ಒಂದು ವೇಳೆ ಇವರು ಸೇವನೆ ಮಾಡಿದ ಆಹಾರ ಪದಾರ್ಥ ಗಳಲ್ಲಿ ಸಕ್ಕರೆ ಅಂಶ ಹೆಚ್ಚಾಗಿ ಬಿಟ್ಟರೆ, ರಕ್ತದಲ್ಲಿ ಕೂಡಲೇ ಏರುಪೇರು ಉಂಟಾಗಿ ಬಿಡುತ್ತದೆ.ಹೀಗಾಗಿ, ಬಾಳೆಹಣ್ಣು ತಿನ್ನುವ ಮೊದಲು, ಶುಗರ್ ಚೆಕ್ ಮಾಡುವ ಯಂತ್ರದ ಸಹಾಯದಿಂದ ಪ್ರಸ್ತುತ ರಕ್ತ ದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷೆ ಮಾಡಿಕೊಳ್ಳಿ. ಆಬಳಿಕಬಾಳೆಹಣ್ಣಿನ ಸೇವನೆಯ ಬಗ್ಗೆ ನಿರ್ಧಾರ ಮಾಡಿ.ಇಲ್ಲಿ ಮುಖ್ಯವಾಗಿ ಗಮನದಲ್ಲಿ ಇಟ್ಟುಕೊಳ್ಳಬೇಕಾದ ಸಂಗತಿ ಏನೆಂದರೆ, ಒಂದು ವೇಳೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ತುಂಬಾ ಹೆಚ್ಚಾಗಿದ್ದರೆ, ಈ ಸಮಯದಲ್ಲಿ ಬಾಳೆ ಹಣ್ಣು ತಿನ್ನದೇ ಇದ್ದರೆ ಒಳ್ಳೆಯದು
ಊಟ ಮಾಡಿದ ಬಳಿಕ ಬಾಳೆಹಣ್ಣು ತಿನ್ನಬೇಡಿ!–ಕೆಲವೊಮ್ಮೆ ನಮ್ಮ ದೈನಂದಿನ ಆಹಾರ ಪದಾರ್ಥಗಳಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋ ಹೈಡ್ರೇಟ್ ಅಂಶ ಕಂಡುಬರುತ್ತದೆ. ಅಲ್ಲದೆ ಎರಡು ಹೊತ್ತಿನ ಊಟಕ್ಕೂ ಕೂಡ ಇಂತಹದ್ದೇ ಆಹಾರ ಪದಾರ್ಥಗಳನ್ನು ನಾವು ಸೇವನೆ ಮಾಡುವುದರಿಂದ, ಕಾರ್ಬೋಹೈಡ್ರೇಟ್ ಅಂಶ, ನಮ್ಮ ದೇಹದಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ.ಹೀಗಾಗಿ ಊಟ ಮಾಡಿದ ತಕ್ಷಣ ಬಾಳೆಹಣ್ಣು ಸೇವನೆ ಮಾಡುವ ಅಭ್ಯಾದ ಒಳ್ಳೆಯದಲ್ಲ! ಇದರಿಂದಾಗಿ ಕೂಡ ಮಧುಮೇಹ ಕಾಯಿಲೆ, ನಿಯಂತ್ರಣಕ್ಕೆ ಸಿಗದೇ ಇರಬಹುದು.
ದಿನಕ್ಕೊಂದು ಬಾಳೆಹಣ್ಣು–ಬೆಳಗ್ಗೆ ತಿಂಡಿ ತಿಂದ ನಂತರ, ಒಂದು ಬಾಳೆಹಣ್ಣಿನ ಸೇವನೆ ಮಾಡಬಹುದು. ಇದರಿಂದ ಇದರಲ್ಲಿ ಅಡಗಿರುವ ಕ್ಯಾಲೋರಿಗಳು, ದೇಹದಲ್ಲಿ ಕರಗಲು ಉಪಯೋಗಕ್ಕೆ ಬರುತ್ತದೆ. ಅಷ್ಟೇ ಅಲ್ಲದೆ ಬಾಳೆಹಣ್ಣಿನ ಸೇವನೆಯಿಂದಾಗಿ ದೇಹಕ್ಕೆ ಇಡೀ ದಿನ ಶಕ್ತಿ ಹಾಗೂ ಚೈತನ್ಯ ಸಿಗುತ್ತದೆ.ಸಕ್ಕರೆಕಾಯಿಲೆ ಇದ್ದವರು, ನನಗೆ ಬಾಳೆಹಣ್ಣು ಇಷ್ಟ ಎಂದು ಹೇಳಿ,ಪ್ರತಿದಿನ ಎರಡು ಮೂರು ಬಾಳೆ ಹಣ್ಣನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಡಿ. ಆದಷ್ಟು ಮೇಲೆ ತಿಳಿಸಿದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ. ಅತಿಯಾಗಿ ಬಾಳೆ ಹಣ್ಣು ಸೇವನೆ ಮಾಡಿದರೆ ಆರೋಗ್ಯಕ್ಕೆ ತೊಂದರೆ ಖಂಡಿತ.
ಒಂದು ವೇಳೆ ಮನೆಯಲ್ಲಿ, ಶುಗರ್ ಚೆಕ್ ಮಾಡುವ ಯಂತ್ರ ಇದ್ದರೆ, ಮೊದಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷೆ ಮಾಡಿಕೊಂಡು ಆನಂತರ ಬಾಳೆಹಣ್ಣಿನ ಸೇವನೆಯ ಬಗ್ಗೆ ನಿರ್ಧಾರ ಮಾಡುವುದು ಒಳ್ಳೆಯ ನಿರ್ಧಾರಏಲಕ್ಕಿ ಬಾಳೆ, ನೇಂದ್ರಬಾಳೆ, ಇವೆಲ್ಲಾ ಮಧುಮೇಹಿಳ ಆರೋಗ್ಯಕ್ಕೆ ಒಳ್ಳೆಯದು. ವಾರದಲ್ಲಿ ಎರಡು ಮೂರು ಬಾರಿ ಮಾತ್ರ ಬಾಳೆಹಣ್ಣು ಸೇವನೆ ಮಾಡಿದರೆ ಒಳ್ಳೆಯದು. ನಿತ್ಯವೂ ಬಾಳೆಹಣ್ಣನ್ನು ಸೇವಿಸಬಾರದು.