ಪದೇ ಪದೇ ದೇವರ ಫೋಟೋದಿಂದ ಹೂವು ಬಿದ್ದರೆ ಏನು ಅರ್ಥ!

ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ದೇವರಿಗೆ ದೇವರ ಕೋಣೆಗೆ ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಲಾಗುತ್ತದೆ. ದೇವರಿಗೆ ಹೂಗಳಿಂದ ಅರ್ಚನೆಯನ್ನು ಮಾಡುತ್ತೇವೆ. ವಿವಿಧ ಬಗೆಯ ಹೂಗಳಿಂದ ದೇವರ ಆರಾಧನೆಯನ್ನು ಮಾಡುತ್ತೇವೆ.ದೇವರಿಗೆ ಭಕ್ತಿಗಳಿಂದ ಹೂಗಳನ್ನು ನಾವು ಅರ್ಪಿಸುತ್ತೇವೆ. ಭಕ್ತಿಯಿಂದ ಧೂಪವನ್ನು ನೈವೇದ್ಯವನ್ನು ಅರ್ಪಿಸುತ್ತೇವೆ. ಭಕ್ತಿಯಿಂದ ಪೂಜೆ ವ್ರತಗಳನ್ನು ಮಾಡುತ್ತೇವೆ.

ಸಾಮಾನ್ಯವಾಗಿ ತಮ್ಮ ಕಷ್ಟಗಳನ್ನು ತೊಂದರೆಗಳನ್ನು ದೇವರ ಬಳಿ ಹೇಳಿಕೊಂಡು ಇರುತ್ತಾರೆ. ಹೀಗೆ ದೇವರು ಇವರ ಕಷ್ಟಗಳಿಗೆ ಇಷ್ಟರ್ಥಗಳಿಗೆ ಸ್ಪಂದಿಸುವುದಕ್ಕಾಗಿ ಈ ರೀತಿ ಹೂವನ್ನು ಬಿಳಿಸುವ ಮೂಲಕ ದೇವರು ಸೂಚನೆಗಳನ್ನು ನೀಡುತ್ತಾನೆ. ದೇವರಿಗೆ ಮೂಡಿಸಿದ ಹೂವು ಕೆಳಗೆ ಬಿದ್ದರೆ ಅದನ್ನು ತೆಗೆದುಕೊಳ್ಳಬೇಕು. ಪೂಜೆ ಮಾಡಿದ ನಂತರ ಪ್ರಸಾದವಾಗಿ ಸಿಕ್ಕ ಹೂವನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು. ಈ ರೀತಿ ಇಟ್ಟುಕೊಂಡ ಹೂವನ್ನು ಬೇರೆ ಎಲ್ಲೂ ಕೂಡ ಬಿಸಡಬಾರದು. ಅದನ್ನು ಪೂರ್ತಿ ಒಣಗಿ ಹೋಗುವ ವರೆಗೂ ಹಾಗೆ ಇಟ್ಟುಕೊಳ್ಳಿ. ನಂತರ ಆ ಹೂವನ್ನು ಹರಿಯುವ ನೀರಿನಲ್ಲಿ ಹಾಕಬೇಕು.

Related Post

Leave a Comment