ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ನ ಪ್ರಮಾಣ ಹೆಚ್ಚಾಗುವುದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಈ ಕೆಳಗಿನ ಲಕ್ಷಣಗಳು ದೇಹದಲ್ಲಿ ಕೊಲೆಸ್ಟ್ರಾಲ್ ಏರಿಕೆಯನ್ನು ಸೂಚಿಸುತ್ತವೆ, ಅಲ್ಲದೆ ಅವುಗಳನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಅಂತಹ ಲಕ್ಷಣಗಳು ಯಾವುವು ನೋಡಿ.
ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಕೊಲೆಸ್ಟ್ರಾಲ್ನಿಂದ ದೇಹಕ್ಕೆ ಅನುಕೂಲ ಹಾಗೂ ಅನಾನುಕೂಲ ಎರಡೂ ಇದೆ. ಯಕೃತ್ತು ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ಸೃಷ್ಟಿಸುತ್ತದೆ. ಇದು ಮೇಣದಂತಹ ಕೊಬ್ಬಿನ ವಸ್ತು. ವಿವಿಧ ಹಾರ್ಮೋನುಗಳು, ವಿಟಮಿನ್ ಡಿ ಮತ್ತು ಜೀವಕೋಶ ಪೊರೆಗಳ ಉತ್ಪಾದನೆಗೆ ಇದು ಅವಶ್ಯಕವಾಗಿದೆ.
ಕೊಲೆಸ್ಟ್ರಾಲ್ನಲ್ಲಿ ಎರಡು ವಿಧ. ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಉತ್ತಮ ಕೊಲೆಸ್ಟ್ರಾಲ್. ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣದಲ್ಲಿ ಏರಿಕೆಯಿಂದ ಹಲವು ಸಮಸ್ಯೆಗಳಾಗುತ್ತವೆ. ಅಲ್ಲದೆ ಪ್ರಪಂಚದಾದ್ಯಂತ ಹಲವರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಸರ್ಮಪಕ ಜೀವನಶೈಲಿಯು ಇದಕ್ಕೆ ಮುಖ್ಯ ಕಾರಣವಿರಬಹುದು. ಕೆಲವೊಮ್ಮೆ ಔಷಧಿ ಸೇವನೆಯ ಜೊತೆಗೆ ಉತ್ತಮ ಆಹಾರ ಮತ್ತು ನಿಯಮಿತ ವ್ಯಾಯಾಮವು ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅಧಿಕ ಕೊಲೆಸ್ಟ್ರಾಲ್ಗೆ ಸಂಬಂಧಿಸಿ ಯಾವುದೇ ರೋಗಲಕ್ಷಣಗಳು ಹೆಚ್ಚಾಗಿ ಕಾಣಿಸುವುದಿಲ್ಲ. ಆದರೆ ಪ್ರಾಥಮಿಕವಾಗಿ ಇವು ತುರ್ತು ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಅತಿಯಾದ ಕೊಲೆಸ್ಟ್ರಾಲ್ನಿಂದಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯು ವಿನಂತಹ ಸಮಸ್ಯೆಗೂ ಕಾರಣವಾಗಬಹುದು. ಇದಲ್ಲದೆ, ಕೆಲವು ನಿರ್ದಿಷ್ಟ ಬದಲಾವಣೆಗಳಿಂದ ಕಂಡುಹಿಡಯಬಹುದು.
ಕೆಟ್ಟ ಕೊಲೆಸ್ಟ್ರಾಲ್ನ ಲಕ್ಷಣಗಳು
ಮರಗಟ್ಟುವಿಕೆ–ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದರೆ ಕೈ ಹಾಗೂ ಪಾದಗಳಲ್ಲಿ ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆಗೆ ಕಾರಣವಾಗಬಹುದು. ಕೊಲೆಸ್ಟ್ರಾಲ್ ಶೇಖರಣೆಯ ಪರಿಣಾಮವಾಗಿ ಈ ಭಾಗಗಳಿಗೆ ಸರಿಯಾಗಿ ರಕ್ತಸಂಚಾರವಾಗದೇ ಮರಗುಟ್ಟುವಿಕೆ ಉಂಟಾಗಬಹುದು.
ಉಸಿರಾಟದ ತೊಂದರೆ–ಅತಿಯಾದ ಕೊಲೆಸ್ಟ್ರಾಲ್ ಸೇರಿದಂತೆ ಹಲವು ಹೃದಯದ ಕಾಯಿಲೆಗಳ ಪ್ರಮಖ ಲಕ್ಷಣ ಉಸಿರಾಟದ ತೊಂದರೆ. ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಹೃದಯಕ್ಕೆ ರಕ್ತದ ಹರಿವು ಕಡಿಮೆಯಾಗುತ್ತದೆ. ಇದರಿಂದ ಉಸಿರಾಟಕ್ಕೆ ತೊಂದರೆ ಉಂಟಾಗುತ್ತದೆ.
ಎದೆನೋವು–ಎದೆಯ ನೋವು, ಎದೆಯ ಭಾಗದಲ್ಲಿ ಅಸ್ವಸ್ಥತೆ ಉಂಟಾಗುವುದಕ್ಕೆ ಸಾಮಾನ್ಯವಾಗಿ ಆಂಜಿನಾ ಎಂದು ಕರೆಯಲಾಗುತ್ತದೆ. ಇದು ಅಪಧಮನಿ ಸಮಸ್ಯೆ ಇರುವವರಲ್ಲಿ ಅತಿಯಾದ ಕೊಲೆಸ್ಟ್ರಾಲ್ನ ಕಾರಣದಿಂದ ಉಂಟಾಗುತ್ತದೆ. ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗುವುದರಿಂದ ತೊಂದರೆ ಉಂಟಾಗಬಹುದು. ಇದು ಅನಾರೋಗ್ಯಕ್ಕೆ ಎಡೆ ಮಾಡಿಕೊಡಬಹುದು.
ಆಯಾಸ, ಸುಸ್ತು–ರಕ್ತದಲ್ಲಿ ಅಧಿಕ ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗುವುದರಿಂದ ಸುಸ್ತು ಹಾಗೂ ಆಯಾಸ ಕಾಣಿಸಬಹುದು. ಇದು ಸ್ನಾಯುಗಳಿಗೆ ರಕ್ತದ ಪೊರೈಕೆಯನ್ನು ಕಡಿಮೆ ಮಾಡುವ ಸಾಧ್ಯತೆಯಿಂದಾಗಿ ಬಳಲಿಕೆಗೆ ಕಾರಣವಾಗಬಹುದು.
ಅಧಿಕ ರಕ್ತದೊತ್ತಡ–ಕೆಲವೊಮ್ಮೆ ಅಧಿಕ ರಕ್ತದೊತ್ತಡ ಸಮಸ್ಯೆಗೆ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುವುದೂ ಕಾರಣವಾಗಬಹುದು. ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಶೇಖರಣೆಯು ಅವುಗಳನ್ನು ನಿರ್ಬಂಧಿಸಬಹುದು ರಕ್ತನಾಳಗಳ ಪ್ರತಿರೋಧವು ಹೆಚ್ಚಿಸುವ ಸಾಧ್ಯತೆಯೂ ಇದೆ.
ದೃಷ್ಟಿ ದೋಷ–ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುವುದರಿಂದ ದೃಷ್ಟಿದೋಷದ ಸಮಸ್ಯೆಯೂ ಕಾಣಿಸಬಹುದು. ರಕ್ತದಲ್ಲಿ ಕೊಲೆಸ್ಟ್ರಾಲ್ ಶೇಖರಣೆಗೊಂಡರೆ ಕಣ್ಣುಗಳಿಗೆ ರಕ್ತವನ್ನು ಪೂರೈಸುವ ರಕ್ತ ನಾಳಗಳಲ್ಲಿ ಅಡೆತಡೆಗಳು ಉಂಟಾಗಬಹುದು. ಇದರಿಂದ ದೃಷ್ಟಿದೋಷದ ಸಮಸ್ಯೆ ಕಾಣಿಸಬಹುದು.
ಹೆಚ್ಚು ಕೊಬ್ಬಿನ ಅಂಶ ಇರುವ ಆಹಾರಗಳಿಂದ ದೂರವಿರಿ, ಉದಾಹರಣೆಗೆ ಕೆಂಪು ಮಾಂಸಗಳು, ಸಂಸ್ಕರಿಸಿದ ಆಹಾರಗಳು, ಜಂಕ್ ಫುಡ್ನಂತಹ ಆಹಾರಗಳು, ಎಣ್ಣೆಯಾಂಶ ಇರುವ ಆಹಾರಗಳು, ಚೀಸ್, ಕೆನೆ ಭರಿತ ಹಾಲು, ಸಿಹಿ ತಿಂಡಿಗಳು ಹಾಗೂ ತಂಪು ಪಾನೀಯಗಳಿಂದ ಮೊದಲು ದೂರವಿರಿ ಯಾಕೆಂದ್ರೆ, ಇವುಗಳು, ದೇಹದಲ್ಲಿ ಬೊಜ್ಜಿನ ಅಂಶ ಹೆಚ್ಚು ಮಾಡುವುದು ಮಾತ್ರದಲ್ಲಿ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗು ವಂತೆ ಮಾಡುವುದು. ಇನ್ನು ಬೆಳ್ಳುಳ್ಳಿ, ತ್ರಿಫಲ ಚೂರಣ, ಬಾದಾಮಿ, ಓಟ್ಸ್ ಸೇವನೆ ಮಾಡಿದರೆ ತುಂಬಾ ಒಳ್ಳೆಯದು.