12 ಮಾಸಗಳಲ್ಲಿ ಒಂದಾಗಿರುವ ಈ ಆಷಾಡ ಮಾಸಕ್ಕೆ ಅದ್ರದ್ದೇ ಆದ ಮಹತ್ವವಿದೆ. ಸುಮಾರು ಜನರು ಈ ಆಷಾಡ ಮಾಸ ಅಶುಭ ಎಂದು ಕರೆದರೆ. ಇನ್ನು ಆಷಾಡ ಮಾಸದಲ್ಲಿ ದೇವರ ಪೂಜೆಗೆ ಅತ್ಯಂತ ಪ್ರಶಸ್ತಾವಾದದ್ದು ಎಂದು ಹಿರಿಯರು ಹೇಳುತ್ತಾರೆ. ಈ ಆಷಾಡ ಮಾಸದಲ್ಲಿ ಗಾಳಿ ಮಳೆ ಹೆಚ್ಚಾಗಿ ಇರುವ ಕಾರಣದಿಂದ ಈ ಮಾಸದಲ್ಲಿ ಯಾವುದೇ ಒಂದು ಶುಭಕಾರ್ಯವನ್ನು ಮಾಡುವುದಿಲ್ಲ.ಹಾಗಾಗಿ ಈ ಮಾಸವನ್ನು ಅಶುಭ ಮಾಸ ಎಂದು ಕರೆಯುತ್ತಾರೆ.
ಹಿಂದೂ ಕ್ಯಾಲೆಂಡರ್ ಪ್ರಕಾರ ವರ್ಷದಲ್ಲಿ ಬರುವ 4ನೇ ತಿಂಗಳನ್ನು ಆಷಾಡ ಮಾಸ ಅಥವಾ ಶೂನ್ಯ ಮಾಸ ಕರೆಯುತ್ತೀವಿ.ಹಿಂದೂ ಧರ್ಮದಲ್ಲಿ ಆಷಾಡ ಮಾಸ ಒಂದು ಅಶುಭ ಮಾಸ ಎಂದು ಕಲ್ಪನೆ ಇದೆ. ಈ ಒಂದು ಮಾಸದಲ್ಲಿ ಯಾವುದೇ ಒಂದು ಶುಭಕಾರ್ಯವನ್ನು ಮಾಡಿದರು ಅದರ ಫಲ ಸಿಗುವುದಿಲ್ಲ ಎನ್ನುವ ತಪ್ಪು ನಂಬಿಕೆ ಇದೆ.ಹಾಗಾಗಿ ಈ ಆಷಾಡ ಮಾಸದಲ್ಲಿ ಯಾವುದೇ ಒಂದು ಶುಭ ಕಾರ್ಯವನ್ನು ಮಾಡುವುದಕ್ಕೆ ಮನ್ನಣೆಯನ್ನು ನೀಡಿಲ್ಲ.ಈ ಸಮಯದಲ್ಲಿ ಶುಭಕಾರ್ಯವನ್ನು ಯಾರು ಕೂಡ ಮಾಡುವುದಿಲ್ಲ.ಅದರೆ ಎಲ್ಲೂ ಕೂಡ ಅಶುಭ ಎಂದು ಉಲ್ಲೇಖ ಮಾಡಿಲ್ಲ.ಹಾಗಾಗಿ ಆಷಾಡ ಮಾಸವನ್ನು ಅಶುಭ ಮಾಸ ಎಂದು ಕರೆಯುವುದು ತಪ್ಪು.
ಇನ್ನು ಈ ಸಮಯದಲ್ಲಿ ಮಳೆ ಗಾಳಿ ಹೆಚ್ಚು ಇರುವುದರಿಂದ ಈ ಸಮಯದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡುತ್ತಿರಲಿಲ್ಲ.ಈ ಆಷಾಡ ಮಾಸವನ್ನು ಶೂನ್ಯ ಮಾಸ ಎಂದು ಕರೆದರೂ ಕೂಡ ಇದು ಒಂದು ಪವಿತ್ರವಾದ ಮಾಸ.ಈ ಮಾಸದಲ್ಲಿ ದೇವರ ಪೂಜೆಯನ್ನು ಮಾಡಿದರೆ ನಿಮ್ಮ ಬಯಕೆಗಳು ನೆರವೇರುತ್ತೆ ಮತ್ತು ಈಡೇರುತ್ತದೆ ಎನ್ನುವ ನಂಬಿಕೆ ಇದೆ.ಇನ್ನು ಆಷಾಡ ಮಾಸ 2023 ಇಸವಿಯಲ್ಲಿ ಜೂನ್ 19ನೇ ತಾರೀಕು ಸೋಮವಾರದ ದಿನ ಆರಂಭವಾಗಿ ಜೂಲೈ 17ನೇ ತಾರೀಕು ಸೋಮವಾರ ಮುಕ್ತಾಯ ಆಗುತ್ತದೆ.
ಈ ಆಷಾಡ ಮಾಸವನ್ನು ದೇವತೆಗಳಿಗೆ ಅರ್ಪಿಸಲಾಗಿದೆ. ಯಾರು ಆಷಾಡ ಮಾಸದಲ್ಲಿ ಹೆಣ್ಣು ದೇವತೆಗಳನ್ನು ಹೆಚ್ಚಾಗಿ ಪೂಜೆ ಮಾಡುತ್ತಾರೋ ಅಂತವರ ಬಯಕೆ ಬೇಗಾ ಈಡೇರುತ್ತದೆ.ವಿಶೇಷವಾಗಿ ಆಷಾಡ ಶುಕ್ರವಾರದ ದಿನ ಲಕ್ಷ್ಮಿ ವ್ರತವನ್ನು ಯಾರು ಮಾಡುತ್ತಾರೋ ಅಂತವರು ತಮ್ಮ ಮನಸ್ಸಿನಲ್ಲಿ ಅಂದುಕೊಂಡಿದ್ದು ಈಡೇರುತ್ತದೆ.ಈ ಸಮಯದಲ್ಲಿ ಉಪ್ಪಿನ ದೀಪರಾಧನೆ ಮಾಡುವುದು ತುಂಬಾ ಒಳ್ಳೆಯದು.ಈ ಮಾಸದಲ್ಲಿ ಅಮ್ಮನವರಿಗೆ ಮಡಿಲಕ್ಕಿ ಕೊಡುವುದು ಮತ್ತು ನಿಂಬೆ ಹಣ್ಣಿನ ದೀಪರಾಧನೆ ಮಾಡುವುದು ಮಾಡುವುದು ತುಂಬಾ ಒಳ್ಳೆಯದು.ಇನ್ನು ಆಷಾಡ ಮಾಸದಲ್ಲಿ ಲಕ್ಸ್ಮಿ ದೇವಿಯನ್ನು ಭಕ್ತಿಯಿಂದ ಪೂಜಿಸಿದರೆ ಲಕ್ಷ್ಮಿ ದೇವಿ ಅನುಗ್ರಹ ಸಿಗುತ್ತದೆ.
ಆಷಾಢ ಮಾಸದಲ್ಲಿ ಬರುವ ಪ್ರಮುಖ ಹಬ್ಬಗಳು
ದೇವಶಯನಿ ಏಕಾದಶಿ – ಜೂನ್ 19
ಚಾತುರ್ಮಾಸ ವ್ರತ ಪ್ರಾರಂಭವಾಗುತ್ತದೆ -ಜೂನ್ 30
ಗೋಪದ್ಮ ವ್ರತ ಆರಂಭ -ಜೂನ್ 30
ಭೀಮನ ಅಮಾವಾಸ್ಯೆ -ಜೂಲೈ 17