ಹಣ್ಣುಗಳು ಮತ್ತು ತರಕಾರಿಗಳು ವ್ಯಕ್ತಿಯ ಜೀವನಶೈಲಿ ಮತ್ತು ಆರೋಗ್ಯದ ಪ್ರಮುಖ ಭಾಗವಾಗಿದೆ. ಪ್ರತಿಯೊಂದು ಹಣ್ಣು ತರಕಾರಿ ತನ್ನದೇ ಆದ ವಿಶೇಷವಾದ ಪ್ರಯೋಜನವನ್ನು ಹೊಂದಿದೆ. ಇನ್ನು ಟೈಪ್-2 ಮಧುಮೇಹದಿಂದ ಬಳಲುತ್ತಿರುವ ಜನರು ತಮ್ಮ ಮೇದೋಜಿರಕ ಗ್ರಂಥಿಯಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಾಕಷ್ಟು ಇನ್ಶೂಲಿನ್ ಅನ್ನು ಉತ್ಪದಿಸಲು ಸಾಧ್ಯವಾಗುವುದಿಲ್ಲ. ಈರುಳ್ಳಿ ರಸವೂ ಅಧಿಕ ರಕ್ತದ ಸಕ್ಕರೆಯನ್ನು ಬಲವಾಗಿ ಕಡಿಮೆ ಮಾಡುತ್ತದೆ.
ಈರುಳ್ಳಿ ರಸವೂ ಹೆಚ್ಚಿನ ಕೊಲೆಸ್ಟ್ರೇಲ್ ಮಟ್ಟವನ್ನು ಕೂಡ ಕಡಿಮೆ ಮಾಡುತ್ತದೆ. ಇನ್ನು ಮಧುಮೆಹಿಗಳು ಈರುಳ್ಳಿ ರಸ ಸೇವನೆ ಮಾಡಿದರೆ ಯಾವ ರೀತಿ ಅರೋಗ್ಯ ಲಾಭಗಳು ಸಿಗುತ್ತದೆ ಎಂದು ತಿಳಿಸಿಕೊಡುತ್ತೇವೆ.
ಇತ್ತೀಚಿನ ಸಂಶೋಧನೆ ಪ್ರಕಾರ ಈರುಳ್ಳಿ ರಸವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು 50% ಅಷ್ಟು ಕಡಿಮೆ ಮಾಡುತ್ತದೆ. ಕೆಂಪು ಈರುಳ್ಳಿ ಫೈಬರ್ ಅಂಶದಿಂದ ಸಮೃದ್ಧವಾಗಿದೆ. ಸ್ಪ್ರಿಂಗ್ ಈರುಳ್ಳಿ ಕಡಿಮೆ ಫೈಬರ್ ಅಂಶವನ್ನು ಹೊಂದಿರುತ್ತದೆ. ಫೈಬರ್ ಒಡೆಯಲು ಮತ್ತು ಜೀರ್ಣಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾದೆ.ಇದು ರಕ್ತ ಪ್ರವಾಹದಲ್ಲಿ ಸಕ್ಕರೆಗಳನ್ನು ನಿಧಾನವಾಗಿ ಬಿಡುಗಡೆ ಮಾಡುತ್ತದೆ. ಇದು ಮಲಬದ್ಧತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಗ್ಲಿಸಮಿಕ್ ಅಂಶವು ಆಹಾರಗಳಿಗೆ ನೀಡದಿ ಪಡಿಸಿದ ಮೌಲ್ಯವಾಗಿದೆ.ಅವು ತ್ವರಿತವಾಗಿ ಗ್ಲುಕೋಸ್ ಮಟ್ಟದ ಮೇಲೆ ಪರಿಣಾಮವನ್ನು ಬೀರುತ್ತದೆ. ಇದು ಮಧುಮೆಹಿ ಡಯಟ್ ನಲ್ಲಿ ಸೇವಿಸುವ ಕಡಿಮೆ ಗ್ಲಿಸಮಿಕ್ ಆಹಾರವಾಗಿದೇ. ಇನ್ನು ಈರುಳ್ಳಿಯಲ್ಲಿ ಕಾರ್ಬೋ ಹೈಡ್ರಾಟ್ ಗಳು ತುಂಬಾ ಕಡಿಮೆ ಇರುತ್ತದೆ. 100ಗ್ರಾಂ ಕೆಂಪು ಈರುಳ್ಳಿ ಸೇವನೆಯು ಸುಮಾರು 8ಗ್ರಾಂ ಕಾರ್ಬೋ ಹೈಡ್ರೆಟ್ ಗಳನ್ನು ಹೊಂದಿರುತ್ತದೆ.
ಇವು ಶೀಘ್ರದಲ್ಲಿ ಚಯಪಾಚಯ ಆಗುತ್ತವೆ. ಇದು ರಕ್ತ ಪ್ರವಾಹದಲ್ಲಿ ಸಕ್ಕರೆಯನ್ನು ವೇಗವಾಗಿ ಬಿಡುಗಡೆ ಮಾಡುತ್ತದೆ. ಮಧುಮೆಹಿಗಳು ಆಹಾರದಲ್ಲಿ ಹೆಚ್ಚು ಕಾರ್ಬೋ ಹೈಡ್ರಟ್ ಅಂಶ ಇರುವ ಆಹಾರವನ್ನು ಸೇವಿಸಲು ಸಲಹೆ ನಿಡುತ್ತಾರೆ. ಈರುಳ್ಳಿಗಳು ಕಡಿಮೆ ಕ್ಯಾಲೋರಿಯನ್ನು ಹೊಂದಿರುತ್ತವೆ ಮತ್ತು ಆರೋಗ್ಯಕರ ತೂಕ ನಷ್ಟಕ್ಕೆ ಉತ್ತಮವಾಗಿದೆ.