ಪುರಾಣಗಳ ಪ್ರಕಾರ ಸಿರಿಸಂಪತ್ತಿನ ಆದಿದೇವತೆ ಶ್ರೀ ಮಹಾಲಕ್ಷ್ಮಿ. ಲಕ್ಷ್ಮಿ ಒಲುಮೆ ಇದ್ದರೆ ಸಾಕು ಅಷ್ಟ ಐಶ್ವರ್ಯ ಸಿಗುತ್ತದೆ ಹಾಗೂ ಎಲ್ಲಾ ಶುಭ, ಮಂಗಳ ಕಾರ್ಯಗಳು ಮನೆಯಲ್ಲಿ ಜರುಗುತ್ತವೆ.ಆದ್ದರಿಂದ ಪ್ರತಿಯೊಂದು ಕಡೆಯಲ್ಲೂ ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸುತ್ತಾರೆ.
ಇನ್ನು ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸಿರುತ್ತಾಳೆ ಆ ಮನೆಯಲ್ಲಿ ಸಿರಿಸಂಪತ್ತು ನೆಲೆಸಿರುತ್ತದೆ.ಅಷ್ಟೇ ಅಲ್ಲದೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಿಗುತ್ತದೆ. ಆದರೆ ಕೆಲವು ತಪ್ಪುಗಳಿಂದ ದರಿದ್ರವನ್ನು ತಂದುಕೊಳ್ಳುತ್ತೇವೆ. ಇದರಿಂದ ಸಿರಿವಂತಿಕೆ ಶಾಂತಿ ನೆಮ್ಮದಿ ಕೂಡ ಸಿಗುವುದಿಲ್ಲ.
ಮನೆಯಲ್ಲಿರುವ ಪ್ರತಿಯೊಬ್ಬ ಮಹಿಳೆಯವರು ಶ್ರೀ ಮಹಾಲಕ್ಷ್ಮಿ ಸ್ವರೂಪ ಎಂದು ಭಾವಿಸಬೇಕು. ಆಕೆ ಮನೆಯಲ್ಲಿ ಸಂತೋಷದಿಂದ ಇರುತ್ತಾಳೋ ಅಷ್ಟೊಂದು ಒಳ್ಳೆಯ ವಿಷಯಗಳು ಮನೆಯಲ್ಲಿ ಜರುಗುತ್ತದೆ. ನಿಮ್ಮ ಮನೆಯಲ್ಲಿ ಇರುವ ಕೆಲವೊಂದು ವಸ್ತುಗಳನ್ನು ಸಾಕಷ್ಟು ಜಾಗ್ರತೆಯಿಂದ ಉಪಯೋಗಿಸಬೇಕು.ಮುಖ್ಯವಾಗಿ ಕಸ ಪೊರಕೆ ಮತ್ತು ಮೊರ .
ಅಡುಗೆ ಪಾತ್ರೆಗಳನ್ನು ಸ್ವಚ್ಛಗೊಳಿಸುವ ಮೊರ ಅತ್ಯಂತ ಪವಿತ್ರವಾದದ್ದು. ಅದನ್ನು ಬಿದಿರು ಕಡ್ಡಿಗಳಿಂದ ಮಾಡಿರುತ್ತಾರೆ. ಈಗಾಗಿ ಮೊರವನ್ನು ಉಪಯೋಗಿಸಿದ ನಂತರ ಅದನ್ನು ಎಲ್ಲೆಂದರಲ್ಲಿ ಹಾಕಬಾರದು. ಮುಖ್ಯವಾಗಿ ಅದು ಕಾಲಿಗೆ ತಗಲಾಗಬಾರದು. ಅಷ್ಟೊಂದು ಎಚ್ಚರಿಕೆಯಿಂದ ಮಾತ್ರ ಅದನ್ನು ಉಪಯೋಗಿಸಬೇಕು ಮತ್ತು ಅದರ ಮೇಲೆ ಎಚ್ಚರಿಕೆಯನ್ನು ವಹಿಸಬೇಕು.
ಯಾವುದೇ ಕಾರಣಕ್ಕೂ ಕಾಲಿಗೆ ತಗಲಾಬಾರದು ಹಾಗೂ ಎಲ್ಲೆಂದರಲ್ಲಿ ಹಾಕಿ ಅಗೌರವವನ್ನು ಪಡಿಸಬೇಡಿ. ಆದ್ದರಿಂದ ಇದರ ಮೇಲೆ ಎಚ್ಚರಿಕೆಯನ್ನು ಇಟ್ಟರೆ ಮಹಾಲಕ್ಷ್ಮಿ ಒಲಿಯುತ್ತಾಳೆ.