ಪ್ರತಿಯೊಂದು ಹಣ್ಣು ಕೂಡ ತನ್ನದೇ ಆದ ಪೋಷಕಾಂಶಗಳನ್ನು ಹೊಂದಿದ್ದು ಆರೋಗ್ಯಕ್ಕೆ ಉಪಯುಕ್ತ ಆಗಿರುತ್ತದೆ.ನೈಸರ್ಗಿಕವಾಗಿ ಸಿಗುವ ಈ ಹಣ್ಣು ಹಾಗೂ ತರಕಾರಿಗಳನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗಿದ್ದು. ಇವು ಅನೇಕ ವಿಟಮಿನ್ ಮತ್ತು ಕನಿಜ ಗಳನ್ನು ನೀಡುತ್ತದೆ. ಇದೇ ಪೋಷಕಾಂಶಗಳು ವಿವಿಧ ರೋಗಗಳ ವಿರುದ್ಧ ಹೋರಾಡಿ ನಮ್ಮನ್ನು ಆರೋಗ್ಯಕರವಾಗಿ ಇರಿಸುತ್ತದೆ.ಇನ್ನು ಚಳಿಗಾಲದಲ್ಲಿ ಕಂಡುಬರುವ ಪ್ರಮುಖ ಹಣ್ಣುಗಳಲ್ಲಿ ಹಸಿರು ದ್ರಾಕ್ಷಿ ಕೂಡ ಒಂದು.ಸ್ವಲ್ಪ ಹುಳಿ ಹಾಗೂ ಸಿಹಿ ಅನುಭವ ನೀಡುವ ಈ ಹಣ್ಣಿನ ಪ್ರಯೋಜನ ಬಗ್ಗೆ ತಿಳಿಸಿಕೊಡುತ್ತೇವೆ.
1, ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ನಡೆದರೆ ಮಾತ್ರ ಆರೋಗ್ಯದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಇಲ್ಲದಿದ್ದರೆ ಹೃದಯ ರಕ್ತ ನಾಳಗಳಲ್ಲಿ ಸಮಸ್ಸೆಗಳು ಕಾಣಲು ಶುರು ಆಗುತ್ತದೆ.ಜೊತೆಗೆ ಕೆಟ್ಟ ಕೋಲೇಸ್ಟ್ರೇಲ್ ಅಂಶ ಹೃದಯದ ಕಾರ್ಯಚಟುವಟಿಕೆಗೆಗೆ ಇನ್ನಷ್ಟು ಸಮಸ್ಸೆ ಕೊಡುತ್ತದೆ.ಹೀಗಾಗಿ ದ್ರಾಕ್ಷಿ ಹಣ್ಣುಗಳ ಸೇವನೆ ಮಾಡುವುದು ಆರೋಗ್ಯಕ್ಕೆ ಹಿತಕರ. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
2, ಇನ್ನು ದೇಹದ ತೂಕ ಕಡಿಮೆ ಮಾಡಿಕೊಳ್ಳುವುದು ಇತ್ತೀಚಿನ ಜನರಿಗೆ ಆಯಾಸ ಆಗಿದೆ. ವ್ಯಾಯಾಮ ಮಾಡಿದ ನಂತರ ಒಂದು ಲೋಟ ದ್ರಾಕ್ಷಿ ಜ್ಯೂಸ್ ಕುಡಿಯುವುದರಿಂದ ಸೊಂಟ ಭಾಗದಲ್ಲಿರುವ ಬೊಜ್ಜು ಕಡಿಮೆಯಾಗುತ್ತದೆ.ಇದರಿಂದ ದೇಹದ ತೂಕ ಕಡಿಮೆಯಾಗುತ್ತದೆ.
3,ಆರೋಗ್ಯ ತಜ್ಞರು ಹೇಳಿರುವ ಹಾಗೆ ಅನಾರೋಗ್ಯ ಸಮಸ್ಯೆಯಿಂದ ರಕ್ಷಿಸಿಕೊಳ್ಳಲು ಸಹಾಯಮಾಡುವುದು ರೋಗನಿರೋಧಕ ಶಕ್ತಿ. ರೋಗನಿರೋಧಕ ಶಕ್ತಿ ಹೆಚ್ಚಾಗಬೇಕು ಎಂದರೆ ಹೆಚ್ಚು ವಿಟಮಿನ್ ಸಿ ಇರುವ ಹಣ್ಣುಗಳು ಹಾಗೂ ಆಹಾರಗಳನ್ನು ಸೇವನೆ ಮಾಡಬೇಕು. ಅದರಲ್ಲೂ ದ್ರಾಕ್ಷಿಯಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿದೆ. ಹಾಗಾಗಿ ನಿಯಮಿತವಾಗಿ ದ್ರಾಕ್ಷಿಯನ್ನು ಸೇವನೆ ಮಾಡಿದರೆ ಒಳ್ಳೆಯದು.
4, ದ್ರಾಕ್ಷಿಹಣ್ಣಿನ ವಿಶೇಷತೆಯೇನೆಂದರೆ ಅಧಿಕ ಪ್ರಮಾಣದ ನಾರಿನಂಶ ಹಾಗೂ ಕನಿಜಾಂಶಗಳನ್ನು ಒದಗಿಸುವ ಸಾಮರ್ಥ್ಯ ಇದೆ. ಇದರಿಂದಾಗಿ ದೇಹದ ತೂಕವನ್ನು ನಿಯಂತ್ರಣ ಮಾಡುವಲ್ಲಿ ಹಾಗೂ ಜೀರ್ಣ ಶಕ್ತಿಯನ್ನು ಸರಿ ಮಾಡುವಲ್ಲಿ ಸಹಕಾರಿ ಆಗಲಿದೆ.ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮುಖ್ಯವಾಗಿ ದೇಹದಲ್ಲಿ ವಿಷಕಾರಿ ಅಂಶವನ್ನು ಹೊರಹಾಕುವಲ್ಲಿ ದ್ರಾಕ್ಷಿ ಹಣ್ಣುಗಳ ಪಾತ್ರ ತುಂಬಾನೇ ದೊಡ್ಡದು.
5, ಮಧುಮೇಹ ಸಮಸ್ಯೆ ಇರುವವರು ಪ್ರತಿದಿನ ದ್ರಾಕ್ಷಿ ಸೇವನೆ ಮಾಡುವುದು ಒಳ್ಳೆಯದಲ್ಲ.