ಪಾತ್ರೆ ತೊಳೆಯುವ ಈ ಜುಗ್ಗಿನ ಬಗ್ಗೆ ತಿಳಿದರೆ ನಿಮ್ಮ ಪಾತ್ರೆ ತೊಳೆಯುವ ಕೆಲಸ ನಿಮಿಷದಲ್ಲಿ ಮುಗಿಯುತ್ತೆ. ಪಾತ್ರೆ ತೊಳೆಯುವ ಕೆಲಸ ದೊಡ್ಡ ಕೆಲಸ ಎಂದು ಹೇಳಬಹುದು. ಪಾತ್ರೆ ತೊಳೆಯುವುದಕ್ಕೆ ಸೋಪು ಲಿಕ್ವಿಡ್ ಎಷ್ಟು ಮುಖ್ಯನೋ ಅಷ್ಟೇ ಮುಖ್ಯ ಸ್ಕ್ರಾಬರ್. ಈ ಸ್ಕ್ರಾಬರ್ ಬಳಸಿ ಪಾತ್ರೆ ತಿಕ್ಕುವಾಗ ನಾನಾ ರೀತಿಯ ತೊಂದರೆಯನ್ನು ಪ್ರತಿನಿತ್ಯ ಅನುಭವಿಸುತ್ತಾರೆ. ಕೆಲವರಿಗೆ ಇದರಿಂದ ಗಾಯ ಕೂಡ ಆಗುತ್ತದೆ. ಅಷ್ಟೇ ಅಲ್ಲದೆ ಇದು ಸ್ವಲ್ಪ ದಿನಕ್ಕೆ ಹಾಳು ಕೂಡ ಆಗುತ್ತದೆ. ಇನ್ನು ಈ ಟಿಪ್ಸ್ ನಾ ಫಾಲೋ ಮಾಡಿ ನೀವು ಪಾತ್ರೆ ತೊಳೆಯುವ ಕೆಲಸ ನಿಮಿಷದಲ್ಲಿ ಮುಗಿಯುತ್ತೆ. ಜೊತೆಗೆ ಅರೋಗ್ಯಕ್ಕೂ ಒಳ್ಳೆಯದು.
ಸ್ಟೀಲ್ ಸ್ಕ್ರಾಬರ್ ಗಳು ಕೈ ಗೆ ತಾಗಿ ಗಾಯ ಕೂಡ ಆಗುತ್ತದೆ.ಈ ರೀತಿ ಅದರೆ ಒಂದು ಹಳೆಯ ಬಾಟಲ್ ಅನ್ನು ತೆಗೆದುಕೊಳ್ಳಿ. ಅರ್ಧ ಕಟ್ ಮಾಡಿ ಮತ್ತು ಕ್ಯಾಪ್ ಅನ್ನು ಹೋಲ್ ಮಾಡಿ. ನಂತರ ದಾರದಿಂದ ಹೋಲ್ ಒಳಗೆ ಸ್ಕ್ರಾಬರ್ ಕಟ್ಟಿ. ಇದರಿಂದ ತೊಳೆದರೆ ನಿಮ್ಮ ಕೈ ಗಾಯ ಆಗುವುದಿಲ್ಲ.
ಇನ್ನು ಹಳೆಯ ಸ್ಕ್ರಾಬರ್ ನಲ್ಲಿ ಸಾಕಷ್ಟು ಬಾಕ್ಟೆರಿಯ ಗಳು ಇರುತ್ತವೆ. ಬರಿ ನೀರಿನಲ್ಲಿ ತೊಳೆದರೆ ಇದು ಕ್ಲೀನ್ ಆಗುವುದಿಲ್ಲ. ಅಷ್ಟೇ ಅಲ್ಲದೆ ಇದನ್ನು ಕ್ಲೀನ್ ಮಾಡದೇ ಇದ್ದರೆ ಅರೋಗ್ಯಕ್ಕೂ ಕೂಡ ತುಂಬಾನೇ ಹಾನಿಕಾರಕ. ಇದಕ್ಕೆ ರಾತ್ರಿ ಬಿಸಿ ನೀರು ಮತ್ತು ಅದಕ್ಕೆ ಉಪ್ಪು ಹಾಕಿ ಸ್ಕ್ರಾಬರ್ ಅನ್ನು ನೆನಸಿ ಇಡಬೇಕು. ಇದನ್ನು ಬೆಳಗ್ಗೆ ಬರಿ ನೀರಲ್ಲಿ ಒಮ್ಮೆ ತೊಳೆಯಿರಿ. ಅವಾಗವಾಗ ಪಾತ್ರೆ ತೊಳೆಯುವ ಸ್ಕ್ರಾಬರ್ ಅನ್ನು ಈ ರೀತಿ ಕ್ಲೀನ್ ಮಾಡಿಕೊಳ್ಳಿ. ಕೆಲವೊಂದು ಸ್ಕ್ರಾಬರ್ ತುಂಬಾ ಹಾರ್ಡ್ ಆಗಿ ಇರುತ್ತವೆ. ಅದಕ್ಕೆ ತೆಗೆದುಕೊಂಡು ಬಂದ ತಕ್ಷಣ ಬಿಸಿ ನೀರು ಹಾಕಿದರೆ ಸ್ಮೋತ್ ಆಗುತ್ತದೆ.