ಒಂದೇ ದಿನದಲ್ಲಿ ಶೀತ ಕೆಮ್ಮು ಕಫ ನಿವಾರಣೆಗೆ ಹಿಗೊಮ್ಮೆ ಮಾಡಿ ನೋಡಿ!

ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ ಎಂದರೆ ಶೀತ ಮತ್ತು ಕೆಮ್ಮು. ಒಮ್ಮೆ ಈ ಶೀತ ಹಾಗೂ ಕೆಮ್ಮು ಆರಂಭವಾದರೆ ಕಫ ಸಹ ಉಂಟಾಗುತ್ತದೆ. ಈ ಕಫ ಹೊರತೆಗೆಯಲು ಕೆಲವೊಮ್ಮೆ ಕಷ್ಟಪಡಬೇಕಾಗುತ್ತದೆ. ಯಾವುದೇ ಆಹಾರ ತಿಂದರೂ, ಮೆಡಿಸಿನ್ ಮಾಡಿದರೂ ಕಫ ಕುಳಿತುಕೊಂಡು ಬಿಡುತ್ತದೆ. ಈ ಕಫವನ್ನು ಹೊರತೆಗೆಯಲು ಸಹಾಯ ಮಾಡುವ ಕೆಲ ಆಹಾರಗಳು ಇಲ್ಲಿದೆ.

ಶುಂಠಿ ಕೆಮ್ಮು ಮತ್ತು ಶೀತಕ್ಕೆ ಪರಿಹಾರ ನೀಡುತ್ತದೆ. ಅಲ್ಲದೇ ಈ ಶುಂಠಿ ಸೇವನೆ ಕುಡಿಯುವುದು ಕಫವನ್ನು ಹೊರತೆಗೆಯಲು ಸಹಾಯ ಮಾಡುತ್ತದೆ. ಈ ಕಫದ ಸಮಸ್ಯೆಯಿಂದ ನಿಮಗೆ ಉಸಿರಾಡಲು ಕಷ್ಟವಾಗುತ್ತಿದ್ದರೆ ಸ್ವಲ್ಪ ಶುಂಠಿ ಚಹಾ ಕುಡಿಯಿರಿ ಸಾಕು.

ಚಳಿಗಾಲದ ಆರೋಗ್ಯ ಸಮಸ್ಯೆಗಳಿಗೆ ಈ ಬೆಳ್ಳುಳ್ಳಿಯಿಂದ ಪರಿಹಾರ ಸಿಗುತ್ತದೆ. ಈ ಕೆಮ್ಮು ಮತ್ತು ಶೀತದಿಂದ ಕಫ ಹೆಚ್ಚಾಗಿ, ಅದು ಹೊರ ಬರದಿದ್ದರೆ ಬೆಳ್ಳುಳ್ಳಿ ಸೇವಿಸಿ. ಹಸಿ ಬೆಳ್ಳುಳ್ಳಿಯನ್ನು ತಿಂದು ನೀರು ಕುಡಿದರೆ ಕಫ ಕರಗುತ್ತದೆ.

ಗಂಟಲು ನೋವು ಹಾಗೂ ಶೀತಕ್ಕೆ ಈ ಜೇನುತುಪ್ಪವನ್ನು ಬಳಸುವುದು ಸೂಕ್ತ ಎನ್ನುತ್ತಾರೆ ತಜ್ಞರು. ಹಾಗೆಯೇ ನಿಮ್ಮ ಕಫದ ಸಮಸ್ಯೆಗೆ ಸಹ ಜೇನುತುಪ್ಪವನ್ನು ಸೇವಿಸುವುದು ಉತ್ತಮ. ದಿನಕ್ಕೆ 2 ರಿಂದ 3 ಚಮಚ ಜೇನುತುಪ್ಪ ತಿಂದರೆ ಕಫ ಹೊರಬರುತ್ತದೆ.

ಅನಾನಸ್ ಹಣ್ಣು ನಿಮ್ಮ ದೇಹದಲ್ಲಿ ಶೇಖರಣೆ ಆಗಿರುವ ಕಫ ಕರಗಲು ಸಹಾಯ ಮಾಡುತ್ತದೆ. ದಿನಕ್ಕೆ 2 ರಿಂದ 3 ಪೀಸ್ ಅನಾನಸ್ ಹಣ್ಣು ತಿನ್ನುವುದು ಉತ್ತಮ. ಇದು ಶೀತ ಹಾಗೂ ಕೆಮ್ಮಿಗೆ ಸಹ ಪರಿಹಾರ ನೀಡುತ್ತದೆ

ಈ ಜ್ಯೇಷ್ಠಮಧುವಿನ ಪ್ರಯೋಜನಗಳ ಬಗ್ಗೆ ಪಟ್ಟಿ ಮಾಡುತ್ತಾ ಹೋದರೆ ಮುಗಿಯುವುದಿಲ್ಲ. ಈ ಜ್ಯೇಷ್ಠಮಧುವಿನ ಕಡ್ಡಿಯನ್ನು ಕುದಿಸಿ ಕುಡಿಯುವುದು ಅಥವಾ ಸ್ವಲ್ಪ ಜಜ್ಜಿ ರಸವನ್ನು ಹೀರುತ್ತಿರುವುದು ಕಫ ಕಡಿಮೆ ಆಗಲು ಅಥವಾ ಹೊರ ಬರಲು ಸಹಾಯ ಮಾಡುತ್ತದೆ.

ಏಲಕ್ಕಿ ಸಹ ಚಳಿಗಾಲದಲ್ಲಿ ಕಾಡುವ ಶೀತ ಹಾಗೂ ಕೆಮ್ಮಿಗೆ ಉತ್ತಮ ಮನೆಮದ್ದು ಎನ್ನಲಾಗುತ್ತದೆ, ಏಲಕ್ಕಿಯನ್ನು ಬಿಸಿ ನೀರಿಗೆ ಹಾಕಿ ಕುಡಿಯುವುದು ಅಥವಾ ಏಲಕ್ಕಿ ಚಹಾ ಸೇವನೆ ಮಾಡುವುದು ಕಫದ ಸಮಸ್ಯೆಗೆ ಪರಿಹಾರ ನೀಡುತ್ತದೆ.

ಪುದೀನಾ ಎಲೆಗಳಲ್ಲಿರುವ ಅಂಶಗಳು ನಿಮ್ಮ ಗಂಟಲಿನಲ್ಲಿ ಸಿಲುಕಿಕೊಂಡಿರುವ ಕಫವನ್ನು ಕರಗಿಸಲು ಸಹಾಯ ಮಾಡುತ್ತದೆ. 4 ರಿಂದ 5 ಪುದೀನಾ ಎಲೆಗಳನ್ನು ಚೆನ್ನಾಗಿ ತೊಳೆದುಕೊಂಡು , ನೀರಿಗೆ ಹಾಕಿ ಕುದಿಸಿ ಅದಕ್ಕೆ ನಿಂಬೆರಸ ಮಿಕ್ಸ್ ಮಾಡಿ ಕುಡಿಯಿರಿ.

ಥೈಮ್ ಎಲೆಗಳ ಟೀ ಸಹ ನಿಮಗೆ ಕಫ ಮತ್ತು ಕೆಮ್ಮಿನಿಂದ ಮುಕ್ತಿ ನೀಡುತ್ತದೆ. ಚಳಿಗಾಲದಲ್ಲಿ ಈ ಟೀ ಸೇವನೆ ಮಾಡುವುದು ಶೀತದಿಂದ ಉಂಟಾಗುವ ತಲೆನೋವು ನಿವಾರಿಸಲು ಸಹಾಯ ಮಾಡುತ್ತದೆ.

Related Post

Leave a Comment