ಬಿಸಿಲು ಇವಾಗ ತುಂಬಾ ಜಾಸ್ತಿನೇ ಇದೆ. ನಮ್ಮ ದೇಹಕ್ಕೆ ಬಿಸಿಲಿನಿಂದ ಆಗುವಂತಹ ಅನೇಕ ದುಷ್ಟಪರಿಣಾಮಗಳನ್ನು ನಾವು ತಪ್ಪಿಸಿಕೊಳ್ಳಬೇಕು ಎಂದರೆ ನಾವು ಆದಷ್ಟು ಲಿಕ್ವಿಡ್ ಐಟಂ ಸೇವನೆ ಮಾಡಬೇಕು. ಇನ್ನು ಕೆಲವರು ಎಳೆನೀರಿನ ಜೊತೆ ನಿಂಬೆ ರಸ ಮಿಕ್ಸ್ ಮಾಡಿ ಕುಡಿಯುತ್ತಾರೆ. ಇದರಿಂದ ದೇಹಕ್ಕೆ ಏನೆಲ್ಲಾ ಪರಿಣಾಮ ಬಿರುತ್ತದೆ ಎಂದು ತಿಳಿಸಿಕೊಡುತ್ತೇವೆ.
ಇದು ದೇಹದಲ್ಲಿ ನಿರ್ಜಲಿಕರಣ ಆಗದೆ ಇರುವ ಹಾಗೆ ತುಂಬಾನೇ ಸಹಾಯ ಮಾಡುತ್ತದೆ. ಈ ಬೇಸಿಗೆಯಲ್ಲೂ ತುಂಬಾನೇ ನಮಗೆ ದೇಹದಲ್ಲಿ ನಿರ್ಜಲಿಕರಣ ಆಗುವಂತಹ ಸಂಭವ ಇರುತ್ತದೆ. ಈ ಉರಿ ಬಿಸಿಲು ಇರುವಾಗ ದೇಹವನ್ನು ಹೈಡ್ರೆಟ್ ಆಗಿ ಇಟ್ಟುಕೊಳ್ಳವುದು ತುಂಬಾನೇ ಇಂಪಾರ್ಟೆಂಟ್ ಆಗಿರುತ್ತದೆ. ಹಾಗಾಗಿ ಎಳೆನೀರಿನ ಜೊತೆ ನಿಂಬೆ ರಸ ಮಿಕ್ಸ್ ಮಾಡಿ ಕುಡಿಯುವುದು ತುಂಬಾ ಸಹಕರಿಯಾಗಿದೆ.
ಇನ್ನು ದೇಹದಲ್ಲಿ ಸುಸ್ತು ಆಯಾಸ ಇದ್ದಾಗ ಕೂಡ ಇದನ್ನು ಸೇವನೆ ಮಾಡುವುದು ತುಂಬಾ ಒಳ್ಳೆಯದು.ದೇಹವನ್ನು ತಂಪು ಮಾಡುವುದಕ್ಕೆ ಎಳೆನೀರು ತುಂಬಾ ಸಹಾಯಕರಿಯಾಗಿದೆ. ಬಿಸಿಲು ಜಾಸ್ತಿಯಾದಾಗ ಕೂಡ ನಮಗೆ ಜೀರ್ಣ ಕ್ರಿಯೆ ಸಮಸ್ಸೆ ಕಾಡುತ್ತದೆ. ಇದನೆಲ್ಲ ದೂರ ಇಡುವುದಕ್ಕೆ ಎಳೆನೀರಿನ ಜೊತೆ ನಿಂಬೆ ರಸ ಮಿಕ್ಸ್ ಮಾಡಿ ಕುಡಿಯಬೇಕು.