ಚಕೋತ ಹಣ್ಣನ್ನು ತಿಂದರೆ ಏನಾಗುತ್ತೆ ಗೊತ್ತಾ?

 ಹುಳಿ ಸಿಹಿಯನ್ನು ಹೊಂದಿರುವ ಚಕೋತ ಹಣ್ಣು ತಿನ್ನುವುದರಿಂದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.

-ದಿನನಿತ್ಯ ಚಕೋತ ತಿನ್ನುವುದರಿಂದ ಮೂತ್ರನಾಳದ ಸೋಂಕನ್ನು ತಡೆಗಟ್ಟಬಹುದು. ಇದರಲ್ಲಿ ವಿಟಮಿನ್‌ ಸಿ ಅಧಿಕವಾಗಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

-ವಸಡಿನಲ್ಲಿ ರಕ್ತ ಬರೋದು, ಬಾಯಿಯ ದುರ್ವಾಸನೆಯಿಂದ ಕೂಡಿದ್ದರೆ ದೇಹದಲ್ಲಿ ವಿಟಮಿನ್‌ ಸಿ ಕೊರತೆ ಉಂಟಾಗಿದೆ ಎಂದು ಅರ್ಥ. ಇದರಿಂದ ದೂರ ಇರೋಕೆ ಪ್ರತಿನಿತ್ಯ ಚಕೋತ ತಿಂದರೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

-ರಕ್ತದಲ್ಲಿ ಕೊಬ್ಬಿನಂಶ ಸೇರಿ ಹೃದಯಕ್ಕೆ ರಕ್ತ ಸಂಚಾರ ಕಡಿಮೆ ಆಗುತ್ತಿದ್ದರೆ ಚಕೋತದಲ್ಲಿರುವ ಪೆಕ್ಟಿನ್‌ ಎಂಬ ಅಂಶವು ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ.

-ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಜ್ವರ, ನೆಗಡಿ, ಕೆಮ್ಮು, ಅಲರ್ಜಿ, ಅಸ್ತಮಾ ಮೊದಲಾದ ಕಾಯಿಲೆಗಳಿಗೆ ಬುರುವುದು ಸಾಮಾನ್ಯ. ಇವೆಲ್ಲವುಗಳಿಗೆ ಪರಿಹಾರವೆಂದರೆ ವಿಟಮಿನ್‌ ಸಿ. ಚಕೋತ ಹಣ್ಣು ಅಥವಾ ರಸದ ರೂಪದಲ್ಲಿ ದೇಹಕ್ಕೆ ಸೇರಿವುದರಿಂದ ವಿಟಮಿಸ್‌ ಸಿ ಸಿಗುತ್ತದೆ.

-ದೇಹದ ತೂಕ ಇಳಿಸಿಕೊಳ್ಳಲು ನಾರಿನಂಶದ ಸೇವನೆ ಅಗತ್ಯ. ಚಕೋತ ತಿಂದ್ರೆ ಸಾಕಷ್ಟು ನಾರಿನಂಶ ದೇಹಕ್ಕೆ ಸಿಗುವುದರಿಂದ ನೈಸರ್ಗಿಕವಾಗಿ ಕೊಬ್ಬನ್ನು ಕರಗಿಸಬಹುದು.

-ನಿಯಮಿತವಾಗಿ ಚಕೋತ ತಿನ್ನುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.

Related Post

Leave a Comment