ಜೇನು ನಮ್ಮ ದೇಹಕ್ಕೆ ಬೇಕಾಗುವ ಎಷ್ಟೋ ಪೌಷ್ಟಿಕಾಂಶಗಳನ್ನು ಕೊಡುತ್ತದೆ. ಅನೇಕ ಔಷಧಿ ಗುಣಗಳು ಇದರಲ್ಲಿ ಇದೆ. ಆಂಟಿ ಬಕ್ಟ್ರೆರಿಯಲ್ ಆಂಟಿ ಫಂಗಲ್ ಆಂಟಿ ವೈರಲ್ ಗುಣಗಳು ಜೇನಿನಲ್ಲಿ ಇರುವ ಕಾರಣ ಜೇನು ನಮ್ಮ ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಶಕ್ತಿಯನ್ನು ನೀಡುತ್ತದೆ. ಅದೇ ರೀತಿ ಒಣ ಖರ್ಜುರ ಬಹಳಷ್ಟು ಮಂದಿ ಇಷ್ಟ ಪಟ್ಟು ತಿನ್ನುತ್ತಾರೆ. ಅದರಿಂದಲೂ ಅನೇಕ ಲಾಭಗಳು ಇವೆ. ಒಂದು ವಾರ ಜೇನಿನಲ್ಲಿ ನೆನೆಸಿದ ಒಣ ಖರ್ಜುರವನ್ನು ತಿಂದರೆ ದೇಹಕ್ಕೆ ಎಷ್ಟೆಲ್ಲ ಲಾಭಗಳು ಇದೆ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಮೊದಲು ಒಂದು ಜಾರನ್ನು ತೆಗೆದುಕೊಳ್ಳಿ ಆ ಜಾರಿನಲ್ಲಿ ನಾಲ್ಕು ಚಮಚ ಜೇನುತುಪ್ಪವನ್ನು ಹಾಕಿ ಮತ್ತು ಬೀಜ ತೆಗೆದ ಖರ್ಜುರವನ್ನು ಹಾಕಿ ಒಂದು ವಾರ ಹಾಗೆ ಇಡಬೇಕು. ನಡು ನಡುವೆ ಆ ಜಾರನ್ನು ಶೇಕ್ ಮಾಡಬೇಕು. ಒಂದು ವಾರ ಬಳಿಕ ಒಂದೆರಡು ಖರ್ಜುರ ತಿನ್ನುವುದರಿಂದ ದೇಹಕ್ಕೆ ಹಲವಾರು ಲಾಭಗಳು ಸಿಗುತ್ತವೆ.
ಈ ರೀತಿ ಸೇವನೆ ಮಾಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ಯಾವುದೇ ರೀತಿಯ ರೋಗಗಳು ಬರುವುದಿಲ್ಲ.ಈ ಮಿಶ್ರಣ ಸೇವನೆಯಿಂದ ನಿದ್ರಾ ಹೀನತೆ ಸಮಸ್ಸೆ ಕೂಡ ದೂರವಾಗುತ್ತದೆ.ಒತ್ತಡ ಆತಂಕ ಕಡಿಮೆ ಆಗುತ್ತದೆ. ಇನ್ನು ಮೆಮೊರಿ ಪವರ್ ಕಡಿಮೆ ಇರುವವರು ಈ ಮಿಶ್ರಣವನ್ನು ಸೇವನೇ ಮಾಡಬೇಕು.ಈ ಮಿಶ್ರಣ ಸೇವನೆಯಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.
ಈ ಮಿಶ್ರಣ ಸೇವನೆಯಿಂದ ಗಾಯಗಳು ಬೇಗನೇ ಗುಣ ಮುಖವಾಗುತ್ತದೆ ಮತ್ತು ಮಹಿಳೆಯರಿಗೆ ಬೇಕಾದ ಕಬ್ಬಿಣ ಅಂಶ ಕ್ಯಾಲ್ಸಿಯಂ ಹೆರಾಳವಾಗಿ ಲಭ್ಯವಾಗುತ್ತದೆ. ಇದು ರಕ್ತ ಹೀನತೆ ಸಮಸ್ಸೆಯನ್ನು ನಿವಾರಣೆ ಮಾಡುತ್ತದೆ.ಮೂಳೆಗಳನ್ನು ಸದೃಢಗೊಳಿಸುತ್ತದೆ ಮತ್ತು ಜೀರ್ಣ ಕ್ರಿಯೆಗೆ ಸಂಬಂಧ ಪಟ್ಟ ಸಮಸ್ಸೆಗಳು ಕೂಡ ದೂರವಾಗುತ್ತದೆ.ಮಲಬದ್ಧತೆ ಗ್ಯಾಸ್ ಆಸಿಡಿಟಿ ಆಜೀರ್ಣ ಸಮಸ್ಸೆಗಳು ಬರುವುದಿಲ್ಲ. ಅಷ್ಟೇ ಅಲ್ಲದೆ ಹೊಟ್ಟೆಯಲ್ಲಿ ಜಂತು ಹುಳ ನಾಶ ಆಗುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರೇಲ್ ಹೊಗಿ ಒಳ್ಳೆಯ ಕೊಲೆಸ್ಟ್ರೇಲ್ ವೃದ್ಧಿಯಾಗುತ್ತದೆ.