ಪಾದರಸ ಏಕೆ ಅಷ್ಟೊಂದು ಮಹತ್ವ ಗೊತ್ತೇ!

ಪಾದರಸವನ್ನು ಸಾಕ್ಷಾತ್ ಶಿವನ ವೀರ್ಯಾ ಎಂದು ಕರೆಯುತ್ತಾರೆ. ಅತ್ಯಂತ ಮಹತ್ತರ ಶಕ್ತಿಯನ್ನು ಒಳಗೊಂಡ ಪಾದರಸ ಸಾಕ್ಷಾತ್ ಶಿವನ ಅಂಶ ಆಗಿರುವುದರಿಂದ ಆಧ್ಯಾತ್ಮಿಕ ವಸ್ತುಗಳಲ್ಲಿ ಅತ್ಯಂತ ಶಕ್ತಿಯುತವಾದ ವಸ್ತು ಎಂದು ಪರಿಗಣಿಸಲಾಗುವುದು. ಪಾದರಸದ ಒಂದು ಹನಿಯು ಅದ್ಬುತವಾದ ಸಾಕಾರತ್ಮಕ ಶಕ್ತಿಯನ್ನು ಆಕರ್ಷಿಸುವ ಮತ್ತು ಉತ್ಪಾದಿಸುವ ಶಕ್ತಿಯನ್ನು ಹೊಂದಿರುತ್ತದೆ. ಇಂತಹ ಪಾದರಸದಿಂದ ನಕಾರಾತ್ಮಕ ಶಕ್ತಿ, ಪೂರ್ವ ಜನ್ಮದ ಪಾಪ ಕರ್ಮಗಳು ಕೆಟ್ಟ ದೃಷ್ಟಿಗಳಂತಹ ದುಷ್ಟ ಶಕ್ತಿಗಳು ನಾಶವಾಗುತ್ತವೆ ಎಂದು ನಮ್ಮ ಪೂರ್ವಜರು ಕಂಡುಕೊಂಡಿದ್ದರು.

ಈ ಪಾದರಸವನ್ನು ತಾಯತಗಳಲ್ಲಿ ಮತ್ತು ರಕ್ಷ ಬಂಧನಗಳಲ್ಲಿ ಬಳಸುತ್ತಾರೆ. ವಿಶೇಷವಾಗಿ ದೇವತಾ ಪ್ರತಿಷ್ಠಾಪನೆಯಲ್ಲಿ, ಶಂಖು ಸ್ಥಾಪನೇಯಲ್ಲಿ, ಅಷ್ಟ ದಿಗ್ಬಂದನ ಮಾಡುವಾಗ ಈ ರೀತಿಯಾದ ಶುಭ ಸಮಾರಂಭಗಳಲ್ಲಿ ಪಾದರಸವನ್ನು ವಿಶೇಷವಾಗಿ ಬಳಸುತ್ತಾರೆ. ಇನ್ನು ಈ ಪಾದರಸದ ರಸ ಮಣಿಗಳನ್ನು ಮಕ್ಕಳಿಗೆ ಬಾಲಗ್ರಹ ಆಗದಂತೆ, ದೃಷ್ಟಿ ಆಗದಂತೆ ಮಕ್ಕಳಿಗೆ ಕಟ್ಟುತ್ತಾರೆ.

ಮಾಟ ಮಂತ್ರ ವಶೀಕರಣ ಶುದ್ರ ಶಕ್ತಿಗಳ ಉಪಟಳ ಈ ರೀತಿಯಾದ ಅನೇಕ ತೊಂದರೆಗಳ ನಿವಾರಣೆಗೂ ಪಾದರಸವನ್ನು ಬಳಸುತ್ತಾರೆ. ಈ ಪಾದರಸವನ್ನು ಗಟ್ಟಿ ಮಾಡಲು ಗಿಡ ಮೂಲಿಕೆಯಿಂದ ರಸವನ್ನು ಕಟ್ಟಿ ಆ ರಸದಿಂದ ಆ ಪಾದರಸವನ್ನು ಗಟ್ಟಿ ಮಾಡಿ ವಿಗ್ರಹಗಳನ್ನು ತಯಾರಿಸುವರು. ಉದಾರಣೆಗೆ ಲಿಂಗ ಲಕ್ಷ್ಮಿ ಗಣಪತಿ ಕಾಳಿಕಾದೇವಿ ಇನ್ನು ಹಲವಾರು ರೂಪಾಗಳಲಿ ತಯಾರಿಸಿ ಪೂಜಿಸುವುದು. ಇದು ಶಿವನಷ್ಟೇ ಶಕ್ತಿಯನ್ನು ಇದು ಒಳಗೊಂಡಿರುತ್ತದೆ.

ಪಾದರಸ ವಿಗ್ರಹವನ್ನು ಯಾರು ಪೂಜಿಸಬೇಕು…?

ಯಾರು ಬೇಕಾದರೂ ಪಾದರಸ ವಿಗ್ರಹಗಳನ್ನು ಮನೆಯಲ್ಲಿ ಇಟ್ಟು ಅಥವಾ ವ್ಯಾಪಾರ ಸ್ಥಳದಲ್ಲಿ ಇಟ್ಟು ಪೂಜಿ ಸಬಹುದು. ಪಾದರಸ ವಿಗ್ರಹಗಳನ್ನು ಸಕಲ ಪಾಪಗಳನ್ನು ನೀವಾರಿಸುವ ಲಿಂಗ ರೂಪದಲ್ಲಿ, ಗಣಪತಿ, ಮಹಾಲಕ್ಷ್ಮಿ, ಆಂಜನೇಯ, ಕಾಳಿಕಾದೇವಿ ಹೀಗೆ ಹಲವು ರೂಪದಲ್ಲಿ ಪೂಜಿಸುತ್ತಾರೆ. ಈ ರೀತಿಯಾಗಿ ನಮಗೆ ಇಷ್ಟವಾದ ವಿಗ್ರಹ ರೂಪದಲ್ಲಿ ಪಾದರಸ ವನ್ನು ಪೂಜಿಸಿದರೆ ನಮ್ಮ ಪೂರ್ವ ಜನ್ಮದ ಪಾಪಗಳು ನಾಶವಾಗುತ್ತದೆ.

Related Post

Leave a Comment