ಮೀನು ತಿಂದು ನಂತರ ಹಾಲು ಕುಡಿಯೋದ್ರಿಂದ ಚರ್ಮ ರೋಗ ಬರುತ್ತಾ?ವಿಜ್ಞಾನ ಹೇಳೋದೇನು

ಮೀನು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಮೀನಿನಲ್ಲಿ ಇರುವಂತಹ ಕೊಬ್ಬಿನಾಮ್ಲವು ಹಲವಾರು ವಿಧದಿಂದ ಆರೋಗ್ಯಕ್ಕೆ ಲಾಭ ನೀಡುವುದು. ಆದರೆ ಕೆಲವೊಂದು ವಿಚಾರಗಳಲ್ಲಿ ಮೀನಿನ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಅದೇನೆಂದರೆ ಮೀನು ತಿಂದ ಬಳಿಕ ಹಾಲು ಕುಡಿಯಬಾರದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಯಾಕೆಂದರೆ ಇದರಿಂದ ಆಹಾರವು ವಿಷವಾಗಿ ಅಲರ್ಜಿ ಕಾಡುವ ಸಮಸ್ಯೆಯು ಇರುವುದು.

ಇದರಲ್ಲಿ ಹಾಲು ಮತ್ತು ಮೀನು ಮಾತ್ರವಲ್ಲದೆ, ಇತರ ಹಲವಾರು ಆಹಾರಗಳನ್ನು ನಾವು ಜತೆಯಾಗಿ ಸೇವಿಸಿದರೆ ಅದರಿಂದ ಜೀರ್ಣಕ್ರಿಯೆಯಲ್ಲಿ ಪರಿಣಾಮ ಬೀಳುವುದು ಮತ್ತು ತೊಂದರೆ ಕಾಣಿಸಿಕೊಳ್ಳುವುದು.

ಅಧಿಕ ಪಿಷ್ಠ ಇರುವಂತಹ ಆಹಾರ ಮತ್ತು ಪ್ರೋಟೀನ್ ಆಹಾರ, ಅಧಿಕ ಪ್ರೋಟೀನ್ ಇರುವ ಎರಡು ಆಹಾರ ಅಥವಾ ಹಾಲು ಮತ್ತು ಕಿತ್ತಳೆ ಜ್ಯೂಸ್ ನ್ನು ಜತೆಯಾಗಿ ಸೇವಿಸಬಾರದು. ಇದರಿಂದಾಗಿ ಜೀರ್ಣಕ್ರಿಯೆ ಸಮಸ್ಯೆಯು ಕಾಣಿಸಿಕೊಳ್ಳುವುದು. ಇಂತಹ ಆಹಾರಗಳನ್ನು ಜತೆಯಾಗಿ ಸೇರಿಸಬಾರದು ಎಂದು ವೈಜ್ಞಾನಿಕ ಲೋಕವು ಅಧ್ಯಯನಗಳನ್ನು ನಡೆಸಿದೆ ಮತ್ತು ಇದರಿಂದ ಯಾವ ಸಮಸ್ಯೆಗಳು ಕಾಡಲಿದೆ ಎನ್ನುವ ಬಗ್ಗೆ ಹೇಳಿದೆ.

ಮೀನು ತಿಂದ ಬಳಿಕ ಹಾಲು ಕುಡಿಯಬಹುದೇ?

ಮನುಷ್ಯನ ದೇಹವು ಯಾರ ರೀತಿಯಲ್ಲಿ ಆಹಾರವನ್ನು ಜೀರ್ಣಗೊಳಿಸುವುದು ಎನ್ನುವುದು ಇಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದರಿಂದ ಕೆಲವೊಂದು ಆಹಾರಗಳನ್ನು ಜತೆಯಾಗಿ ಸೇವಿಸಿದರೆ ಅದರಿಂದ ಸಮಸ್ಯೆ ಕಾಣಿಸುವುದು.

ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮೀನು ತಿಂದ ಬಳಿಕ ಸೇವಿಸಬಾರದು. ಇದರಿಂದಾಗಿ ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ಸಮಸ್ಯೆ ಕಂಡುಬರುವುದು. ಹಿಂದಿನಿಂದಲೂ ನಮ್ಮ ಹಿರಿಯರು ಕೆಲವೊಂದು ಆಹಾರಗಳನ್ನು ಜತೆಯಾಗಿ ಸೇವಿಸಬಾರದು ಎನ್ನುವ ಬಗ್ಗೆ ಹೇಳುತ್ತಾ ಬರುತ್ತಿದ್ದಾರೆ. ಆದರೆ ಕೆಲವು ಜನರು ಇದನ್ನು ಕಡೆಗಣಿಸಿರುರು. ಮೀನು ಪ್ರಿಯರು ಮೀನು ತಿಂದ ಬಳಿಕ ಹಾಲು ಕುಡಿಯಬಾರದು.

ಆಯುರ್ವೇದವು ಏನು ಹೇಳುತ್ತದೆ?

ಹಾಲು ಮತ್ತು ಮೀನನ್ನು ಜತೆಯಾಗಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಆಯುರ್ವೇದವು ಕೂಡ ಹೇಳಿದೆ. ಹಾಲು ಸಸ್ಯಾಹಾರಿ ಮತ್ತು ಮೀನು ಮಾಂಸಾಹಾರಿ ಮತ್ತು ಎರಡನ್ನು ಜತೆಯಾಗಿ ಸೇವಿಸಿದರೆ ಅದರಿಂದ ದೇಹದಲ್ಲಿ `ತಮಸ’ಗುಣವು ಹೆಚ್ಚಾಗುವುದು. ಇದು ದೇಹದಲ್ಲಿ ಶಕ್ತಿಯ ಹರಿವಿನ ಮೇಲೆ ತಡೆ ಬೀರುವುದು ಮತ್ತು ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದು.

ಹಾಲು ದೇಹದಲ್ಲಿ ತಂಪನ್ನು ಉಂಟು ಮಾಡುವುದು. ಅದೇ ಮೀನು ಉಷ್ಣತೆ ಹೆಚ್ಚಿಸುವುದು. ಸ್ವಲ್ಪ ಸಮಯದ ಅಂತರದಲ್ಲಿ ಇದರೆಡನ್ನು ಸೇವಿಸಿದರೆ ಅದು `ವಾತ ದೋಷ’ ಉಂಟು ಮಾಡುವುದು. ಇದರಿಂದ ವಿಟಲಿಗೊ(ಮೈಮೇಲೆ ಬಿಳಿ ಕಲೆ ಬೀಳುವುದು) ಕಾಡಬಹುದು ಎಂದು ಆಯುರ್ವೇದವು ಹೇಳುತ್ತದೆ. ಮೀನು ತಿಂದ ಬಳಿಕ ಹಾಲು ಕುಡಿದರೆ ಅಲರ್ಜಿ ಕೂಡ ಆಗಬಹುದು.

ವೈಜ್ಞಾನಿಕ ಕಾರಣಗಳು ಏನು?ಮೀನು ಮತ್ತು ಹಾಲು ಸೇವನೆ ಮಾಡಿದರೆ ಅದರಿಂದ ಯಾವುದೇ ರೀತಿಯ ತೊಂದರೆ ಆಗಿರುವ ಬಗ್ಗೆ ಸಾಕ್ಷ್ಯಗಳು ಇಲ್ಲ ಎಂದು ವೈಜ್ಞಾನಿಕವಾಗಿ ಹೇಳಲಾಗುತ್ತದೆ. ಹಾಲು ಮತ್ತು ಮೀನು ಜತೆಯಾಗಿ ಸೇವನೆ ಮಾಡಿದರೆ ಅದರಿಂದ ವಿಟಲಿಗೋ ಅಥವಾ ಲ್ಯುಕೋಡರ್ಮಾ ಎನ್ನುವ ಬಗ್ಗೆ ಗೊಂದಲದಲ್ಲಿದ್ದಾರೆ.

ವಿಟಲಿಗೋ ಚರ್ಮದಲ್ಲಿನ ಮೆಲನೋಸೈಟ್ ಸಾಯುವಂತಹ, ಆಕ್ಸಿಡೇಟಿವ್ ಒತ್ತಡ ಅಥವಾ ಅಟೋಇಮ್ಯೂನ್ ಕಾಯಿಲೆಯ ಪರಿಸ್ಥಿತಿಯಾಗಿದೆ. ಆದರೆ ಮೀನು ಮತ್ತು ಹಾಲಿನಿಂದ ಈ ಪರಿಸ್ಥಿತಿ ಬಂದಿದೆ ಎಂದು ಇದುವರೆಗೆ ಯಾವುದೇ ಅಧ್ಯಯನಗಳು ಹೇಳಿಲ್ಲ.

ಮೀನು ಮತ್ತು ಹಾಲು ಜತೆಯಾಗಿ ಸೇವಿಸಿದರೆ ಪ್ರತಿರೋಧಕ ವ್ಯವಸ್ಥೆ ಮತ್ತು ಜೀರ್ಣಕ್ರಿಯೆ ಮೇಲೆ ಪರಿಣಾಮ

ಮೀನು ಮತ್ತು ಹಾಲನ್ನು ಜತೆಯಾಗಿ ಯಾಕೆ ಸೇವಿಸಬಾರದು ಎಂದು ನಿಮಗೆ ಈ ತಿಳಿಯಿತೇ? ಎಲ್ಲಾ ರೀತಿಯ ಮಾಂಸ ಮತ್ತು ಹಾಲನ್ನು ಜತೆಯಾಗಿ ಸೇವಿಸಿದರೆ ಈ ಸಮಸ್ಯೆಯು ಬರುವುದು. ಹಾಲು ಮತ್ತು ಮಾಂಸದಲ್ಲಿ ಹೆಚ್ಚಿನ ಮಟ್ಟದ ಪ್ರೋಟೀನ್ ಇರುವುದು.

ಇದರಿಂದ ಇದನ್ನು ಜೀರ್ಣಕ್ರಿಯೆ ವೇಳೆ ವಿಘಟಿಸಲು ತುಂಬಾ ಕಷ್ಟವಾಗುವುದು. ಇದನ್ನು ಜೀರ್ಣಿಸಿಕೊಳ್ಳಲು ದೇಹವು ಹೆಚ್ಚಿನ ಮಟ್ಟದ ಶಕ್ತಿ ಬಿಡುಗಡೆ ಮಾಡಬೇಕಾಗುತ್ತದೆ. ಇದು ಜೀರ್ಣಕ್ರಿಯೆ ಮೇಲೆ ಕೂಡ ಅತಿಯಾದ ಒತ್ತಡ ಹಾಕುವುದು. ಇದರಿಂದಾಗಿ ಹೊಟ್ಟೆ ಉಬ್ಬರ, ಗ್ಯಾಸ್ ಅಥವಾ ಇತರ ಜೀರ್ಣಕ್ರಿಯೆ ಸಮಸ್ಯೆ ಕಂಡುಬರುವುದು.

ಮೀನು ಮತ್ತು ಹಾಲು ಜತೆಯಾಗಿ ಸೇವಿಸಿದರೆ ಮೈಮೇಲೆ ಬಿಳಿ ಕಲೆ ಬೀಳುವುದೇ?

ಮೈ ಮೇಲೆ ಬಿಳಿ ಕಲೆಗಳು ಬೀಳುವುದನ್ನು ವಿಟಿಲಿಗೊ ಎಂದು ಕರೆಯಲಾಗುತ್ತದೆ. ಈ ಪರಿಸ್ಥಿತಿಯು ದೇಹದಲ್ಲಿ ವರ್ಣದ್ರವ್ಯ ಮೆಲನೋಸೈಟ್ ಅಸಮತೋಲನ ಆದ ವೇಳೆ ಕಂಡುಬರುವುದು. ಮೆಲನೋಸೈಟ್ ಮೇಲೆ ಅನುವಂಶೀಯ ಪರಿಸ್ಥಿತಿ ಅಥವಾ ಅಟೋಇಮ್ಯೂನ್ ಕಾಯಿಲೆಗಳು ಪರಿಣಾಮ ಬೀರಬಹುದು.

ಆದರೆ ಇದಕ್ಕೆ ಇದುವರೆಗೆ ಸರಿಯಾದ ಕಾರಣಗಳು ತಿಳಿದುಬಂದಿಲ್ಲ. ಆದರೆ ಹಾಲು ಮತ್ತು ಮೀನು ದೇಹದಲ್ಲಿ ಬಿಳಿ ಕಲೆಗಳನ್ನು ಉಂಟು ಮಾಡದು. ಆದರೆ ಮೀನು ಮತ್ತು ಹಾಲನ್ನು ಜತೆಯಾಗಿ ಸೇವಿಸಿದರೆ ಅದರಿಮದ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದು ಖಚಿತ. ಅಲರ್ಜಿ, ಅತಿಸಾರ ಅಥವಾ ಆಹಾರವು ವಿಷವಾಗುವ ಸಾಧ್ಯತೆಗಳು ಇರುವುದು.

Related Post

Leave a Comment