ಬೀಟ್ರೂಟ್ ತರಕಾರಿಯನ್ನು ಹೀಗೆ ಸೇವಿಸಿ ಎಲ್ಲಾ ರೋಗಗಳಿಗೂ ಹೇಳಿ ಗುಡ್ ಬೈ!

ತರಕಾರಿ ತಿನ್ನುವವರಿಗೆ ಆರೋಗ್ಯ ಸಮಸ್ಯೆಗಳು ಕಡಿಮೆ.ಕೆಲವೊಂದು ಪ್ರಕಾರದಲ್ಲಿ ನೋಡುವುದಾದರೆ ಇದು ನಿಜ. ಏಕೆಂದರೆ ತರಕಾರಿಗಳು ನೈಸರ್ಗಿಕ ಉತ್ಪನ್ನಗಳ ಗುಂಪಿಗೆ ಸೇರಿರುವುದರಿಂದ ಇವುಗಳಲ್ಲಿ ಅಡ್ಡಪರಿಣಾಮಗಳು ಕಡಿಮೆ ಇರುತ್ತದೆ. ಜೊತೆಗೆ ಆರೋಗ್ಯದ ಲಾಭಗಳನ್ನು ಕೊಡುವಂತಹ ಗುಣಗಳು ಇವುಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.ಈಗ ಎಲ್ಲಾ ಕಡೆ ಸಾಮಾನ್ಯವಾಗಿ ಕಾಡುತ್ತಿರುವ ಕಾಯಿಲೆ ಎಂದರೆ ಅದು ರಕ್ತದ ಒತ್ತಡ.ಇದಕ್ಕೆ ಪರಿಹಾರವಾಗಿ ಬೀಟ್ರೂಟ್ ಕೆಲಸ ಮಾಡಬಲ್ಲದು ಎನ್ನುವ ಮಾತು ಇದೆ.

ರಕ್ತದೊತ್ತಡದ ಸಮಸ್ಯೆಯನ್ನು ಸುಲಭವಾಗಿ ಪರಿಹಾರ ಮಾಡಿ ವಿಶೇಷವಾಗಿ ವಯಸ್ಸಾದವರಿಗೆ ಹಾಗೂ ಗರ್ಭಿಣಿ ಮಹಿಳೆಯರಿಗೆ ಇದು ಒಂದು ಪ್ರಯೋಜನಕಾರಿಯಾದ ತರಕಾರಿ ಆಗಿದೆ. ಮೂಳೆಗಳ ಸಮಸ್ಯೆ ಎದುರಿಸುತ್ತಿರುವವರಿಗೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಏರು-ಪೇರು ಅದ ಜನರಿಗೆ ಬಿಟ್ರೋಟ್ ಒಂದು ಅತ್ಯುತ್ತಮ ನೈಸರ್ಗಿಕ ತರಕಾರಿ ಎಂದು ಹೇಳಬಹುದು.

ನೈಟ್ರೇಟ್ ಅಂಶ ಹೆಚ್ಚಾಗಿರುವ ತರಕಾರಿಗಳನ್ನು ಸೇವನೆ ಮಾಡುವುದರಿಂದ ರಕ್ತದ ಒತ್ತಡ ಕ್ರಮೇಣವಾಗಿ ಕಡಿಮೆ ಆಗುವ ಸಾಧ್ಯತೆ ಇದೆ. ಬೀಟ್ರೂಟ್ ನಲ್ಲಿ ನೈಟ್ರೇಟ್ ಅಂಶ ಹೆಚ್ಚಾಗಿದ್ದು ಇದು ನೈಟ್ರಿಕ್ ಆಕ್ಸೈಡ್ ಎಂಬ ಆಮ್ಲವನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ರಕ್ತನಾಳಗಳು ಅಗಲ ಆಗುತ್ತವೆ ಮತ್ತು ಅವುಗಳಲ್ಲಿ ಸರಾಗವಾಗಿ ರಕ್ತಸಂಚಾರ ಉಂಟಾಗುತ್ತದೆ.ಇದರಿಂದ ಕ್ರಮೇಣವಾಗಿ ಹೃದಯದ ಮೇಲೆ ಬೀಳುವ ಒತ್ತಡ ಕಡಿಮೆಯಾಗುತ್ತದೆ.

ಸಂಶೋಧಕರು ಹೇಳುವಂತೆ ಅರ್ಧ ಕೆಜಿ ಬೀಟ್ರೋಟ್ ಸೇವನೆ ಮಾಡಿದರೆ ಕೇವಲ 6 ಗಂಟೆಯಲ್ಲಿ ರಕ್ತದ ಒತ್ತಡ ಕಡಿಮೆಯಾಗುತ್ತದೆ. ಬೀಟ್ರೋಟ್ ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತನೆಯಾಗುತ್ತದೆ. ಅಷ್ಟೇ ಅಲ್ಲದೆ ರಕ್ತ ಹರಿಯುವ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ.

Related Post

Leave a Comment