ತುಪ್ಪ ಮತ್ತು ಖರ್ಜೂರ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.
ಆದರೆ ತುಪ್ಪದಲ್ಲಿ ರಾತ್ರಿ ಖರ್ಜೂರ ನೆನೆಹಾಕಿ ಬೆಳಗ್ಗೆ ಸೇವಿಸುವದರಿಂದ ಹೆಚ್ಚಿನ ಪೋಷಕಾಂಶಗಳನ್ನು ಪಡೆಯಬಹುದು.
ಮತ್ತು ತುಪ್ಪದಲ್ಲಿ ನೆನೆಸಿದ ಖರ್ಜೂರ ಒಮ್ಮೆ ತಿಂದು ನೋಡಿ ಅಬ್ಬಬ್ಬಾ ಅದರ ರುಚಿ ಅನುಭವಿಸಿದವರಿಗೆ ಗೊತ್ತು. ಹಿಂದಿನ ಕಾಲದಲ್ಲಿ ಕುಸ್ತಿ ಪಟುಗಳಿಗೆ ತುಪ್ಪದಲ್ಲಿ ಖರ್ಜೂರ ಗಳನ್ನು ನೆನಹಾಕಿ ತಿನ್ನಿಸುತ್ತಿದ್ದರು. ಇದರಿಂದ ಕಟುಮಸ್ತಾದ ದೇಹದಾರ್ಢ್ಯ, ಶಕ್ತಿ ವೃದ್ಧಿಯಾಗುತ್ತದೆ.
ಮಕ್ಕಳಿಗೆ ನಿತ್ಯ ತುಪ್ಪದಲ್ಲಿ ನೆನೆಹಾಕಿದ ಎರಡು – ನಾಲ್ಕು ಖರ್ಜೂರ ತಿನ್ನಿಸಿ ನೋಡಿ ತಿಂಗಳಲ್ಲೆ ಆ ಮಗುವಿನ ಸ್ಟ್ರಾಂಗನೆಸ್ ನಮ್ಮ ಗಮನಸೆಳೆಯಲಿದೆ.
ವೀಕ್ ಇದ್ದ ಮಕ್ಕಳಿಗೆ ಈ ರೀತಿ ತಿನ್ನಿಸಿ ನೋಡಿ ಕೆಲ ದಿನಗಳಲ್ಲಿಯೇ ಅವರ ದೇಹ ಹೇಗೆ ಮಾರ್ಪಾಡು ಆಗುತ್ತದೆ ಮತ್ತು ಶಕ್ತಿದಾಯಕವಾಗಿ ಬೆಳೆಯುತ್ತಾರೆ ಎಂಬುದು ಗಮನಕ್ಕೆ ಬರಲಿದೆ.
ತುಪ್ಪದಲ್ಲಿ ನೆನಸಿದ ಖರ್ಜೂರ ಸೇವನೆಯಿಂದ ಆರೋಗ್ಯಕ್ಕೆ ಬೇಕಾದ ಐರನ್, ಪೊಟ್ಯಾಶಿಯಂ, ಮ್ಯಾಂಗನೀಸ್ ಅಂಶಗಳು ಹೇರಳವಾಗಿ ಕಂಡು ಬರುತ್ತವೆ. ತುಪ್ಪದಲ್ಲಿ ನೆನಹಾಕಿದ ಖರ್ಜೂರ ಸೇವನೆಯಿಂದ ಹೆಚ್ಷಿನ ಪೋಷಕಾಂಶಗಳು ಪಡೆಯಬಹುದು.