ಸೋರೆಕಾಯಿ ಪಡವಲಕಾಯಿ ಸಕ್ಕರೆ ಕಾಯಿಲೆ ಇದ್ದವರು ಇವತ್ತು ಸೇವಿಸಿ!

ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಇರುವವರು ಆಹಾರ ಪದ್ಧತಿಯ ವಿಷ್ಯಕ್ಕೆ ಬರುವುದಾದರೆ, ಎಷ್ಟು ಎಚ್ಚರಿಕೆ ವಹಿಸುತ್ತಾರೋ ಅಷ್ಟು ಒಳ್ಳೆಯದು. ಮುಖ್ಯವಾಗಿ ಸಕ್ಕರೆ ಅಂಶ ಕಡಿಮೆ ಇರುವ ಆಹಾರಗಳ ಜೊತೆಗೆ ನೀರಿನಾಂಶ ಹೆಚ್ಚಿರುವ ಆಹಾರಗಳನ್ನ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು. ವೈದ್ಯರು ಕೂಡ ನೀರಿನ ಅಂಶ ಹೆಚ್ಚಾಗಿರುವ ತರಕಾರಿಗಳನ್ನು, ಹಣ್ಣುಗಳನ್ನು ಮಧುಮೇಹ ಇರುವವರು ಹೆಚ್ಚಾಗಿ ಸೇವನೆ ಮಾಡಬೇಕು ಎಂದು ಹೇಳುತ್ತಾರೆ. ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ಅದು ನೀರಿನಾಂಶ ಹೆಚ್ಚಿರುವ ಸೋರೆಕಾಯಿ!

ಹೌದು ಬಳ್ಳಿಯಲ್ಲಿ ಬೆಳೆಯುವ ಸೋರೆಕಾಯಿ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಈಗಾಗಲೇ ಹಲವಾರು ಬಾರಿ ಸಾಬೀತಾಗಿದೆ. ಅದರಲ್ಲೂತನ್ನಲ್ಲಿ ಅಧಿಕ ಪ್ರಮಾಣದ ನೀರಿನಂಶವನ್ನು ಒಳ ಗೊಂಡಿರುವ ಈ ತರಕಾರಿ ಮಧುಮೇಹಿಗಳ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದರಲ್ಲೂ ಸಕ್ಕರೆಕಾಯಿಲೆ ಇರುವವರು ಪ್ರತಿದಿನ ಬೆಳಗ್ಗೆ ಸೋರೆಕಾಯಿಯ ಜ್ಯೂಸ್‌ಗೆ ಸ್ವಲ್ಪ ಜೀರಿಗೆ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ ಸೇವಿಸಿದರೆ ದೇಹದ ಶಕ್ತಿ ಹೆಚ್ಚಾಗುವುದು ಮಾತ್ರವಲ್ಲದೆ, ರಕ್ತದಲ್ಲಿ ಸಕ್ಕರೆ ಮಟ್ಟ ಕೂಡ ನಿಯಂತ್ರಣಕ್ಕೆ ಬರುತ್ತದೆ.. ಮುಂದೆ ಓದಿ

ಈ ಸೋರೆಕಾಯಿಯ ಪ್ರಯೋಜನಗಳ ಬಗ್ಗೆ ಹೇಳುವುದಾದರೆ–ನೋಡಲು ದೊಣ್ಣೆಯಾಕಾರದಲ್ಲಿರುವ ಈ ಸೋರೆಕಾಯಿ, ತನ್ನಲ್ಲಿ ಅಧಿಕ ಪ್ರಮಾಣದ ಪೌಷ್ಟಿಕ ಸತ್ವ ಗಳನ್ನು ಒಳಗೊಂಡಿರುವ ಜೊತೆಗೆ ನೀರಿನಾಂಶದ ಪ್ರಮಾಣ ಕೂಡ ಯಥೇಚ್ಛವಾಗಿ ಈ ತರಕಾರಿ ಯಲ್ಲಿ ಕಂಡು ಬರುತ್ತದೆ. ಅಷ್ಟೇ ಯಾಕೆ ತನ್ನಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿ ಅಂಶಗಳನ್ನು ಒಳಗೊಂಡಿರುವುದರಿಂದ ದೇಹದ ತೂಕ ಇಳಿಸುವಲ್ಲಿಯೂ ಕೂಡ ಸಹಾಯಕ್ಕೆ ಬರುತ್ತದೆ

ಇನ್ನು ಈ ತರಕಾರಿಯಲ್ಲಿ ನೀರಿನಾಂಶ ಹೆಚ್ಚಿರುವ ಜೊತೆಗೆ ನಾರಿನಾಂಶ ಕೂಡ, ಯಥೇಚ್ಛವಾಗಿ ಸಿಗುವುದರಿಂದ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸವಂತೆ ಮಾಡುತ್ತದೆ. ಅಷ್ಟೇ ಅಲ್ಲದೆ ಮಲಬದ್ಧತೆ ಹಾಗೂ ಅಜೀರ್ಣ ಸಮಸ್ಯೆಯನ್ನುಕೂಡಕೂಡ ಕೂಡ ದೂರ ಮಾಡುತ್ತದೆ

ಇನ್ನು ಈ ತರಕಾರಿಯಲ್ಲಿ ಆರೋಗ್ಯಕ್ಕೆ ಪ್ರಮುಖವಾಗಿ ಬೇಕಾಗಿರುವ ಅಂಶಗಳಾದ ಸೋಡಿಯಂ ಮತ್ತು ಪೊಟಾಶಿಯಮ್ ಅಂಶ ಹೇರಳವಾಗಿ ಸಿಗುವುದರಿಂದ, ರಕ್ತದಲ್ಲಿ ಏರುಪೇರಾಗದಂತೆ ನೋಡಿಕೊಂಡು, ಆರೋಗ್ಯದಲ್ಲಿ ಕಂಡು ಬರುವ ನಿಶ್ಯಕ್ತಿಯನ್ನು ಸಮಸ್ಯೆಯನ್ನು ನಿವಾರಿಸಲು ನೆರವಾಗುತ್ತದೆ.

ವಿಟಮಿನ್‍ ಸಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ–ವಿಟಮಿನ್‍ ಸಿ ಹೆಚ್ಚಿರುವ ಆಹಾರ ಪದಾರ್ಥಗಳ ಆರೋಗ್ಯ ಪ್ರಯೋಜನಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಅಂತೆಯೇ ಈ ಸೋರೆಕಾಯಿಯಲ್ಲಿಯೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಹಾಗೂ ವಿಟಮಿನ್ ಬಿ ಅಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.

ಅಷ್ಟೇ ಅಲ್ಲದೆ ಕಬ್ಬಿಣಾಂಶ ಹಾಗೂ ಪೊಟ್ಯಾಶಿಯಮ್ ಅಂಶ ಕೂಡ ಯಥೇಚ್ಛವಾಗಿ ಕಂಡು ಬರುವು ದರಿಂದ ದೇಹದಲ್ಲಿ ರಕ್ತಹೀನತೆ ಹಾಗೂ ಅಧಿಕ ರಕ್ತದೊತ್ತಡದ ಸಮಸ್ಯೆ ಕಡಿಮೆ ಆಗುವುದರ ಜೊತೆಗೆ, ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬಂದು, ಮಧುಮೇಹ ಸಮಸ್ಯೆ ಕಂಟ್ರೋಲ್‌ಗೆ ಬರುತ್ತದೆ.

ಇನ್ನು ಸಕ್ಕರೆಕಾಯಿಲೆ ನಿಯಂತ್ರಣ ಮಾಡುವ ವಿಷ್ಯಕ್ಕೆ ಬರುವುದಾದರೆ–ನಮಗೆಲ್ಲಾ ಗೊತ್ತೇ ಇರುವ ಹಾಗೆ, ಹಲವಾರು ಹಸಿರೆಲೆ ತರಕಾರಿಗಳು, ತನ್ನಲ್ಲಿ ಹಲವಾರು ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುವುದರಿಂದ ಇದು ಅನಾರೋಗ್ಯವನ್ನು ದೂರವಿಡುವಲ್ಲಿ ತುಂಬಾ ಸಹಕಾರಿ ಆಗಿದೆ. ಅಂತಹ ತರಕಾರಿಗಳಲ್ಲಿ ಬಳ್ಳಿಯಲ್ಲಿ ಬೆಳೆಯುವ ಈ ಸೋರೆಕಾಯಿ ಕೂಡ ಒಂದು.

ಹೌದು ಸಕ್ಕರೆಕಾಯಿಲೆ ಇರುವವರು ಈ ತರಕಾರಿಯ ಜ್ಯೂಸ್ ಮಾಡಿ ಕುಡಿಯುವ ಅಭ್ಯಾಸ ಮಾಡಿ ಕೊಂಡರೆ, ರಕ್ತದಲ್ಲಿ ಸಕ್ಕರೆಕಾಯಿಲೆ ನಿಯಂತ್ರಣಕ್ಕೆ ಬರುವುದು ಮಾತ್ರವಲ್ಲದೆ, ಸಕ್ಕರೆ ಕಾಯಿಲೆ ಕೂಡ ನಿಯಂತ್ರಣದಲ್ಲಿರುತ್ತದೆ

ಸಕ್ಕರೆಕಾಯಿಲೆ ಇರುವವರು ಸೋರೆಕಾಯಿ ಸೇವಿಸುವ ವಿಧಾನ ಹೇಗೆ?–ಸಕ್ಕರೆಕಾಯಿಲೆ ಇರುವವರು ಸೋರೆಕಾಯಿಯನ್ನು ನಮ್ಮ ದೈನಂದಿನ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುವ ವಿಧಾನ ಹೇಗೆ ಎಂದರೆ, ವಾರಕ್ಕೆ ಒಂದೆರಡು ಬಾರಿ ಇದರ ಆದರೂ ಪಲ್ಯ ಅಥವಾ ಸಾಂಬರ್ ಮಾಡಿ ಕೊಂಡರೆ ಒಳ್ಳೆಯದು. ಅಷ್ಟೇ ಅಲ್ಲದೆ ಪ್ರತಿದಿನ ಇದರ ಜ್ಯೂಸ್ ಮಾಡಿಕೊಂಡು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು.

ಇನ್ನು ಸಾಕಷ್ಟು ಜನರಿಗೆ ಈ ಪಡವಲಕಾಯಿ ಎಂದರೆ ಏನು ಎಂತಲೇ ಗೊತ್ತಿರುವುದಿಲ್ಲ. ಹಾವಿನಂತೆ ಕಾಣುವ ಈ ತರಕಾರಿಯನ್ನು ನೋಡಿ ಮೂಗು ಮುರಿಯುವವರೇ ಹೆಚ್ಚು. ಆದರೆ ನಿಮಗೆ ಗೊತ್ತಾ ಈ ತರಕಾರಿಯಲ್ಲಿ ನಿಮಗೆ ಊಹೆ ಮಾಡಲು ಕಷ್ಟವಾಗುವಷ್ಟು ಆರೋಗ್ಯ ಪ್ರಯೋಜನಗಳಿವೆ.ಹಾಗಾದರೆ ಪಡವಲಕಾಯಿ ದೇಹಕ್ಕೆ ಯಾವೆಲ್ಲಾ ಪ್ರಯೋಜನಗಳನ್ನು ನೀಡಲಿದೆ ಎನ್ನುವ ಮಾಹಿತಿ ಈ ಲೇಖನದಲ್ಲಿದೆ ನೋಡಿ, ತಿಳಿದುಕೊಳ್ಳಿ.

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ–ಪಡವಲ ಕಾಯಿಯಲ್ಲಿನ ಸಾರಗಳು ಹೃದಯ ಸಂಬಂಧಿ ಸಮಸ್ಯೆಗಳನ್ನು ನಿಗ್ರಹಿಸಲು ಸಹಾಯ ಮಾಡುತ್ತವೆ. ರಕ್ತದೊತ್ತಡವನ್ನು ಸಮತೋಲನದಲ್ಲಿಟ್ಟು ಹೃದಯಕ್ಕೆ ಸಂಬಂಧಿಸಿದ ಒತ್ತಡ ಮತ್ತು ನೋವನ್ನು ಕಡಿಮೆ ಮಾಡಲು ಇದು ಅತ್ಯುತ್ತಮ ಆಹಾರವಾಗಿದೆ.ನೀವು ಪ್ರತಿದಿನ ಈ ಪಡವಲಕಾಯಿಯ ಜ್ಯೂಸ್‌ ಮಾಡಿ ಸೇವನೆ ಮಾಡಬಹುದು. ಅಥವಾ ಸಲಾಡ್‌, ಸಾಂಬಾರ್‌ ಮೂಲಕ ಕೂಡ ಸೇವನೆ ಮಾಡಬಹುದು.

​​ಮಲಬದ್ಧತೆಯನ್ನು ನಿವಾರಿಸುತ್ತದೆ–ಪಡವಲಕಾಯಿ ಮಲಬದ್ಧತೆಗೆ ಉತ್ತಮ ಚಿಕಿತ್ಸೆ ನೀಡುತ್ತದೆ. ಗ್ಯಾಸ್ಟ್ರಿಕ್‌ ಅಥವಾ ಆಸಿಡಿಟಿಯಿಂದ ಹೊಟ್ಟೆ ಭಾರವಾಗಿದ್ದರೆ ಅದನ್ನು ನಿವಾರಿಸಿ, ಹೊಟ್ಟೆಯುಬ್ಬರ, ನೋವನ್ನು ಕಡಿಮೆ ಮಾಡುತ್ತದೆ.ಅಲ್ಲದೆ ಆಹಾರ ಜೀರ್ಣವಾಗದೆ ಮಲಬದ್ಧತೆ ಸಮಸ್ಯೆಯಾಗಿದ್ದರೆ ನಿಮ್ಮ ಕರುಳಿನ ಚಲನೆಯನ್ನು ಸುಧಾರಿಸಿ ಮಲವಿಸರ್ಜನೆಯನ್ನು ಸುಲಭಗೊಳಿಸುತ್ತದೆ. ನೀವು ಪ್ರತಿದಿನ ಬೆಳಿಗ್ಗೆ 1 ರಿಂದ 2 ಚಮಚ ಪಡವಲಕಾಯಿ ರಸವನ್ನು ಸೇವನೆ ಮಾಡಿದರೆ ಹೊಟ್ಟೆ ಸಮಸ್ಯೆ ನಿವಾರಣೆಯಾಗಿ ದೇಹಕ್ಕೆ ಆರಾಮದಾಯಕ ಅನುಭವ ಸಿಗುತ್ತದೆ.

​ಟೈಪ್‌ 2 ಮಧುಮೇಹಕ್ಕೆ ಒಳ್ಳೆಯದು–ಸಾಮಾನ್ಯವಾಗಿ ಮಧುಮೇಹ ಇದ್ದವರಿಗೆ ಅದನ್ನು ಸೇವಿಸಬಾರದು, ಇದನ್ನು ಸೇವಿಸಬಾರದು ಎನ್ನುತ್ತಾರೆ. ಆದರೆ ಪಡವಲಕಾಯಿ ಮಧುಮೇಹಿಗಳಿಗೆ ಉತ್ತಮ ಆಹಾರವಾಗಿದೆ. ಟೈಪ್ 2 ಡಯಾಬಿಟಿಸ್ ಇರುವವರಿಗೆ ಈ ತರಕಾರಿ ಉತ್ತಮವಾಗಿದೆ. ಸೋರೆಕಾಯಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ತೂಕವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿರಿಸಿ ಮಧುಮೇಹವನ್ನು ನಿಯಂತ್ರಿಸಲು ಪಡವಲಕಾಯಿ ಸಹಕಾರಿಯಾಗಿದೆ.

​ಕಾಮಾಲೆಗೆ ಪಥ್ಯದ ಆಹಾರವಾಗಿದೆ–ಕಣ್ಣು, ಉಗುರುಗಳೆಲ್ಲ ಹಳದಿಯಾಗುವ ಜಾಂಡೀಸ್‌ ಅಥವಾ ಕಾಮಾಲೆಗೆ ಪಡವಲಕಾಯಿ ಉತ್ತಮ ಆಹಾರವಾಗಿದೆ. ಅಲ್ಲದೆ ಕಾಮಾಲೆಯಾದಾಗ ಪಥ್ಯ ಮಾಡುವ ಅಗತ್ಯವಿರುತ್ತದೆ. ಹೀಗಾಗಿ ಕಾಮಾಲೆ ಚಿಕಿತ್ಸೆಗಾಗಿ ಪಡುವಲಕಾಯಿಯ ಎಲೆಗಳನ್ನು ಕೊತ್ತಂಬರಿ ಸೊಪ್ಪಿನೊಂದಿಗೆ ಸೇವಿಸಿ. ನೀವು ದಿನಕ್ಕೆ ಮೂರು ಬಾರಿ ಈ ಮನೆಮದ್ದನ್ನು ವೈದ್ಯರ ಸಲಹೆಯೊಂದಿಗೆ ಸೇವನೆ ಮಾಡಿದರೆ ಕಾಮಾಲೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

​ತೂಕ ನಷ್ಟಕ್ಕೆ ಸಹಕಾರಿ–ಪಡವಲಕಾಯಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ ಮತ್ತು ಕೊಬ್ಬಿನ ಅಂಶವನ್ನು ಹೊಂದಿರುವುದಿಲ್ಲ. ಹೀಗಾಗಿ ಇದು ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ.ಏಕೆಂದರೆ ಇದು ನೀರು ಮತ್ತು ನಾರಿನ ಜೊತೆಗೆ ಪ್ರಮುಖ ಪೋಷಕಾಂಶಗಳನ್ನು ಹೊಂದಿರುತ್ತದೆ. ಆದ್ದರಿಂದ ನೀವು ನೈಸರ್ಗಿಕವಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಪಡವಲಕಾಯಿಯ ಜ್ಯೂಸ್‌ ಸಹಾಯಕವಾಗಿದೆ.

Related Post

Leave a Comment