ಬೇಸಿಗೆ ಕಾಲದಲ್ಲಿ ಅತ್ಯಂತ ಸಾಮಾನ್ಯವಾದ ಮತ್ತು ಅಷ್ಟೇ ಕಿರಿಕಿರಿಯನ್ನು ತರುವ ಬೆವರುಗುಳ್ಳೆ ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ, ದೊಡ್ಡವರಿಗೂ ಇದರ ಉಪದ್ರವ ತಪ್ಪಿದ್ದಲ್ಲ. ನಿಮ್ಮ ಬೆವರುಗುಳ್ಳೆಯ ಸಮಸ್ಯೆಗೆ ಇಲ್ಲಿದೆ ಮನೆಯಲ್ಲಿ ಕಂಡುಕೊಳ್ಳಬಹುದಾದ ಪರಿಹಾರ ಮಾರ್ಗಗಳು!
ಅಂದ ಹಾಗೆ ಈ ಬೆವರುಗುಳ್ಳೆಗಳು ಸಣ್ಣದಾದ ಕೆಂಪು ಅಥವಾ ಚರ್ಮದ ಬಣ್ಣದಲ್ಲಿದ್ದು ದೇಹದ ಹಲವಾರು ಭಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇದು ತುರಿಕೆ ಹಾಗೂ ನೋವಿನಿಂದಲೂ ಕೂಡಿರುತ್ತದೆ.ಈ ಗುಳ್ಳೆಗಳು ಸಾಮಾನ್ಯವಾಗಿ ಮುಖ, ಕುತ್ತಿಗೆ, ಬೆನ್ನು, ಎದೆ ಹಾಗೂ ತೊಡೆಗಳ ಮೇಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.
ಬೆವರುಗುಳ್ಳೆಗೆ ಕಾರಣವೇನು?ಚರ್ಮದ ರಂಧ್ರಗಳು ಯಾವಾಗಲೂ ತೆರೆದಿದ್ದು, ಜೀವಕೋಶಗಳ ಕಶ್ಮಲಗಳನ್ನು ಬೆವರಿನ ರೂಪದಲ್ಲಿ ಚರ್ಮ ವಿಸರ್ಜಿಸುತ್ತದೆ. ಆದರೆ ವಾತಾವರಣದಲ್ಲಿಯ ಧಗೆಯ ಕಾರಣದಿಂದ ದೇಹ ಅತಿ ಹೆಚ್ಚು ಬೆವರನ್ನು ಹೊರಚೆಲ್ಲುತ್ತದೆ. ಆದರೆ, ಬೆವರಿನೊಂದಿಗೆ ಬರುವ ಎಣ್ಣೆಯಂಶ ಅಥವಾ ಬ್ಯಾಕ್ಟೇರಿಯಾ ಚರ್ಮದ ರಂಧ್ರಗಳಿಂದ ಸರಾಗವಾಗಿ ಕಲ್ಮಶಗಳು ಹೊರಬಾರದಂತೆ ತಡೆಒಡ್ಡುತ್ತವೆ. ಬ್ಯಾಕ್ಟೇರಿಯಾಗಳು ಚರ್ಮದ ರಂಧ್ರಗಳ ಮೇಲೇಯೇ ಕುಳಿತು ಚರ್ಮಕ್ಕೆ ಹಾನಿಯುಂಟು ಮಾಡುತ್ತವೆ. ಇದೇ ಕಾರಣಕ್ಕೇ ಚರ್ಮದ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.
ಅಸಹನೀಯ ಕಿರಿಕಿರಿ ನೀಡುವ ಬೆವರು ಸಾಲೆ..ಕೆಂಪು ಬಣ್ಣದ ಚಿಕ್ಕ ಚಿಕ್ಕ ಗುಳ್ಳೆಗಳು ಒತ್ತೊತ್ತಾಗಿ ಹುಟ್ಟುವುದರಿಂದ ಅಸಹನೀಯ ಕಿರಿಕಿರಿ ಉಂಟುಮಾಡುತ್ತವೆ. ಹೀಗಾಗಿ ಬೆವರು ಗುಳ್ಳೆಗಳ ಲಕ್ಷಣಗಳೇನಾದರೂ ಕಂಡುಬಂದಲ್ಲಿ ಅಥವಾ ಪ್ರತಿವರ್ಷವೂ ಬೇಸಿಗೆಯಲ್ಲಿ ಬೆವರುಸಾಲೆಯ ಸಮಸ್ಯೆಯನ್ನು ಅನುಭವಿಸುವವರು ಮುಂಜಾಗೃತಾ ಕೃಮಗಳನ್ನು ಕೈಗೊಳ್ಳುವುದು ಉತ್ತಮ. ತೀರಾ ಸೆಖೆಯಿರುವ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಇದು ಸಾಮಾನ್ಯ. ಸಣ್ಣ ಮಕ್ಕಳಲ್ಲಂತೂ ಇದು ಸರ್ವೇ ಸಾಮಾನ್ಯ. ಅದರಲ್ಲೂ ನೀವೇನಾದರೂ ಮಕ್ಕಳಿಗೆ ಈ ಬೇಸಿಗೆಯಲ್ಲಿ ವಿಪರೀತ ಬಟ್ಟೆ ತೊಡಿಸಿದರಂತೂ ಕೇಳಲೇ ಬೇಡಿ, ಇಡೀ ದಿನ ರಚ್ಚೆ ಹಿಡಿದು ನಿಮ್ಮನ್ನು ಸತಾಯಿಸುವುದಂತೂ ಗ್ಯಾರಂಟಿ.
ಅತಿಯಾದ ತಾಪಮಾನ ಮತ್ತು ಬೆವರುವುಕೆಯಲ್ಲದೆ ಇಂತಹ ಗುಳ್ಳೆಗಳು ಏಳಲು ಅನಾರೋಗ್ಯಕರ ಜೀವನಶೈಲಿಯೂ ಕಾರಣವಾಗಿದೆ.
ಬೆವರುಗುಳ್ಳೆಯ ಸಮಸ್ಯೆ ಸಾಮಾನ್ಯವಾಗಿ ಅಂಥಾ ಗಂಭೀರ ರೋಗವೇನಲ್ಲ. ವಾತಾವರಣ ತಂಪುಗೊಂಡಾಗ ಇದು ತನ್ನಿಂದ ತಾನೇ ಮರೆಯಾಗುವುದು. ಆದರೂ ತಾಪಮಾನದ ಏರಿಕೆ ನಿರಂತರವಾಗಿದ್ದಲ್ಲಿ, ನಿಮ್ಮ ಬೆವರಿನ ಉತ್ಪಾದನೆಯೂ ಹೆಚ್ಚಾದಾಗ, ಬೆವರುಗುಳ್ಳೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲೇ ಬೇಕು, ಇಲ್ಲವಾದಲ್ಲಿ ಮನೆಯ ಎಲ್ಲರೂ ತುರಿಕೇಶ್ವರರಾಗುವ ಸಾಧ್ಯತೆಯ ಜೊತೆಗೆ ಮಾನಸಿಕ ನೆಮ್ಮದಿಗೂ ಭಂಗ ಬರಬಹುದು. ಜೊತೆಗೆ ದೇಹಸೌಂದರ್ಯಕ್ಕೂ ಅಡ್ಡಿಯೆನಿಸುವುದು.
ಕೆಲವು ಮನೆಮದ್ದುಗಳು ಮತ್ತು ಮನೆಯಲ್ಲೇ ಮಾಡಬಹುದಾದ ಕೆಲವು ಅಭ್ಯಾಸಗಳ ಸಹಾಯದಿಂದ ನೀವು ಬೆವರಗುಳ್ಳೆ ಮುಕ್ತರಾಗುವ ಬಗೆಯನ್ನು ತಿಳಿಯುವ. ಇಲ್ಲಿ ಕೆಲವು ಬೆವರುಗುಳ್ಳೆಯನ್ನು ಸಂಪೂರ್ಣ ನಿವಾರಿಸುವಲ್ಲಿ ಸಹಾಯ ಮಾಡಿದರೆ ಇನ್ನು ಕೆಲವು ತುರಿಕೆ, ನವೆ, ಉರಿ ಮತ್ತು ಚರ್ಮ ಕೆಂಪಾಗುವುದನ್ನು ಕಡಿಮೆಗೊಳಿಸಲು ಉಪಕಾರಿ.
ಸೂರ್ಯೋದಯಕ್ಕೂ ಮುನ್ನ ಏಳಿ. ತಂಪಾದ ಮುಂಜಾನೆ ಸರ್ವರೋಗಕ್ಕೂ ಮದ್ದಂತೆ!ಬೆಳಿಗ್ಗೆ ಮತ್ತು ರಾತ್ರಿ ತಣ್ಣೀರಿನ ಅಥವಾ ಉಗುರು ಬೆಚ್ಚಗಿನ ನೀರಿನ ಸ್ನಾನ. ಹೆಚ್ಚು ಬೆವರುವ ಕಂಕುಳು, ಕುತ್ತಿಗೆ, ತೊಡೆ ಸಂಧಿ, ದೇಹದ ಹಿಂಭಾಗ, ಮೊಣಕಾಲ ಸಂಧಿ, ಬೆರಳು ಸಂಧಿ ಗಳನ್ನು ಮೆಲುವಾಗಿ ತಿಕ್ಕಿ ಸ್ನಾನ ಮಾಡಿ.
ರಾಸಾಯನಿಕ ಸೋಪಿನ ಬದಲು ಕಡಲೆಹಿಟ್ಟು, ಅರಿಶಿನ, ಮೆಂತ್ಯ, ಹೆಸರುಕಾಳಿನ ಪುಡಿ, ಕಹಿಬೇವು, ಶ್ರೀಗಂಧ, ಆಯುರ್ವೇದ ಸೋಪು ಇತ್ಯಾದಿಗಳನ್ನು ಬಳಸಿ.ಬಿಸಿ ಕುದಿಸಿ ಆರಿಸಿದ ತಣ್ಣಗಿನ ನೀರನ್ನು ಕುಡಿಯುತ್ತ ಇರಿ. ದಿನದಲ್ಲಿ ಕನಿಷ್ಠ ೩-೫ ಲೀಟರ್ ನೀರು ಅವಶ್ಯ. ಮಣ್ಣಿನ ಹೂಜಿಯಲ್ಲಿಟ್ಟ ನೀರು ಇನ್ನೂ ಉತ್ತಮ.ಆದಷ್ಟೂ, ಒಗೆದು ಶುಭ್ರವಾಗಿ ಒಣಗಿಸಿದ ಹಗುರವಾದ ಮತ್ತು ಸಡಿಲವಾದ ಹತ್ತಿ ಬಟ್ಟೆಗಳನ್ನೇ ಧರಿಸಿ.ಹೊರಗೆ ಓಡಾಡುವುದನ್ನು ಅತ್ಯಂತ ಮಿತಗೊಳಿಸಿ.
ಮನೆಯಲ್ಲೇ ಇದೆ ಮದ್ದು:ಬೆವರುಗುಳ್ಳೆಗಳಿಗೆ ಅಕ್ಕಿ ತೊಳೆದ ನೀರನ್ನು ಹಚ್ಚಿದರೆ ಗುಳ್ಳೆಗಳು ಗುಣವಾಗುತ್ತವೆ.ಮನೆಯಲ್ಲಿರುವ ಅಲೋವೆರಾವನ್ನು ೫-೧೦ ಇಂಚಿನಷ್ಟು ಕತ್ತರಿಸಿ ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು ಹಾಗೇ ಬೆವರುಗುಳ್ಳೆಗಳ ಮೇಲೆ ಮಸಾಜ್ ಮಾಡಿ. ಮೂವತ್ತು ನಿಮಿಷದಿಂದ ಒಂದು ಗಂಟೆ ಯ ನಂತರ ಮಸಾಜ್ ಮಾಡಿದ ಜಾಗವನ್ನು ತಣ್ಣೀರಿನಿಂದ ಮೆಲುವಾಗಿ ತೊಳೆಯಿರಿ.
ಮುಳ್ಳುಸೌತೆ/ ಸೌತೆಕಾಯಿಯನ್ನು ವೃತ್ತಾಕಾರವಾಗಿ ಕತ್ತರಿಸಿ , ಆ ಬಿಲ್ಲೆಗಳಿಂದ ಬೆವರುಗುಳ್ಳೆಯಿರುವ ಜಾಗವನ್ನು ಮಸಾಜ್ ಮಾಡಿ/ ಹಸಿ ಆಲೂಗಡ್ಡೆಯನ್ನು ಕತ್ತರಿಸಿ ಬೆವರುಗುಳ್ಳೆಗಳ ಮೇಲೆ ಸುಮಾರು ೧೫ ನಿಮಿಷಗಳ ಕಾಲ ಇಟ್ಟಾಗಲೂ ಸಮಸ್ಯೆ ಪರಿಹಾರ ಕಾಣುವುದು.
ನೆಲ್ಲಿಕಾಯಿಯನ್ನು ಜಜ್ಜಿ ರಸ ತೆಗೆದು ಅದನ್ನು ಅಂಗೈ, ಅಂಗಾಲಿಗೆ ಹಚ್ಚುವುದರಿಂದ ಬೆವರುವ ಪ್ರಮಾಣದಲ್ಲಿ ಕಡಿಮೆಯಾಗುವುದನ್ನು ಕಾಣಬಹುದು.ಮನೆಯಲ್ಲೇ ಲಭ್ಯವಿರುವ ಕೆಲವು ವಸ್ತುಗಳ ಮಿಶ್ರಣಗಳ ತಯಾರಿಕೆಯಿಂದಲೂ ಬೆವರುಗುಳ್ಳೆಗೆ ಸುಲಭ ಪರಿಹಾರ ಕಂಡುಕೊಳ್ಳಬಹುದು:
ತೆಂಗಿನೆಣ್ಣೆ ಮತ್ತು ಸೌತೆಕಾಯಿ ರಸ,ಅಲೋವೆರಾ ಮತ್ತು ಅರಿಸಿನ,ಕಡಲೆಹಿಟ್ಟು ಮತ್ತು ರೋಸ್ ವಾಟರ್,ಕರ್ಪೂರ ಮತ್ತು ಕಹಿಬೇವಿನ ಎಣ್ಣೆ,ಆಲೂಗಡ್ಡೆ ರಸ ಮತ್ತು ಎಲೋವೇರಾ,ತೇಯ್ದ ಶ್ರೀಗಂಧ ಮತ್ತು ಎಲೋವೇರಾ,ಮುಲ್ತಾನ್ಮಿಟ್ಟಿ ಮತ್ತು ಎಲೋವೇರಾ,ಕಲ್ಲಂಗಡಿ ಹಣ್ಣಿನ ರಸ ಮತ್ತು ಅರಸಿನ,ಜಜ್ಜಿದ ಹಸಿಶುಂಠಿ ರಸ ಮತ್ತು ರೋಸ್ ವಾಟರ್
ಈ ಮೇಲಿನ ಎರಡೂ ವಸ್ತುಗಳನ್ನು ಸಮ ಪ್ರಮಾಣದಲ್ಲಿ ಬೆರೆಸಿ, ಪೇಸ್ಟ್ನಂತೆ ಮಾಡಿಕೊಂಡು ಬೆವರುಗುಳ್ಳೆಯ ಮೇಲೆ ಹಚ್ಚಿ. ಆದಷ್ಟು ಬೆರಳನ್ನು ಬಳಸದೆ, ಮೃದುವಾದ ಬ್ರಷ್ ಅಥವ ಹತ್ತಿಯಿಂದ ಹಚ್ಚಿಕೊಳ್ಳಿ. ೪೦-೬೦ ನಿಮಿಷಗಳ ನಂತರ ತಣ್ಣೀರಿನಲ್ಲಿ ಮೆಲುವಾಗಿ ತೊಳೆಯಿರಿ. ಮೃದುವಾದ ಬಟ್ಟೆಯಿಂದ ಒರೆಸಿರಿ.
ಸ್ನಾನದಲ್ಲಿ ತಾಜಾತನ—ಕೊತ್ತಂಬರಿ ಬೀಜ ನೆನೆಸಿಟ್ಟ ನೀರು:ಒಂದು ಹತ್ತಿಬಟ್ಟೆಯಲ್ಲಿ ಎರಡು ಹಿಡಿಯಷ್ಟು ಕೊತ್ತಂಬರಿ ಬೀಜವನ್ನು ಕಟ್ಟಿ ಸುಮಾರು ಎರಡು ಲೀಟರ್ ಶುಧ್ಧ ನೀರಿನಲ್ಲಿಸುಮಾರು ೫ಗಂಟೆ ಕಾಲ ಅಥವಾ ರಾತ್ರಿಯಿಡೀ ನೆನೆಸಿಡಬೇಕು. ನಂತರ ಈ ಕೊತ್ತಂಬರಿ ಬೀಜದ ಗಂಟನ್ನು ಬೆವರು ಸಾಲೆಯಿರುವ ಜಾಗದ ಮೇಲೆ ಸುಮಾರು ಅರ್ಧ ಗಂಟೆಗಳ ಕಾಲ ಮೆಲುವಾಗಿ ಒತ್ತಿ ಮಸಾಜ್ ಮಾಡಿ. ಈಗ ಪಾತ್ರೆಯಲ್ಲಿರುವ ನೀರನ್ನು ನಿಮ್ಮ ಸ್ನಾನದ ನೀರಿನೊಂದಿಗೆ ಬೆರೆಸಬಹುದು ಅಥವಾ ಮುಖ ತೊಳೆದುಕೊಳ್ಳಲು ಬಳಸಬಹುದು.
ಓಟ್ ಮೀಲ್ ಸ್ನಾನ–ಒಂದು ಟಬ್ ನೀರಿಗೆ ೧-೨ ಕಪ್ ಓಟ್ ಮೀಲ್ ಬೆರೆಸಿ , ಅದರಲ್ಲಿ ಸುಮಾರು ೧೫-೨೦ ನಿಮಿಷವಿದ್ದು ನಂತರ ತಣ್ಣೀರ ಸ್ನಾನ ಮಾಡಿ.ರೋಸ್ ವಾಟರ್ ಸ್ನಾನ : ಒಂದು ಟಬ್ ನೀರಿಗೆ ೧ -೨ ಕಪ್ ರೋಸ್ ವಾಟರ್ ಹಾಕಿ ಅದರಲ್ಲಿ ಸುಮಾರು ೨೦ ನಿಮಿಷವಿದ್ದು ನಂತರ ತಣ್ಣೀರು ಸ್ನಾನ ಮಾಡಿಈ ಸ್ನಾನಗಳು ಬೆವರುಗುಳ್ಳೆ ನಿವಾರಣೆಯ ಜೊತೆಗೆ ಶ್ರಮ ನಿವಾರಕ ಮತ್ತು ದೇಹಕ್ಕೂ ತಂಪು.
ಎಷ್ಟು ದಿನದ ಗುಳ್ಳೆಗಳಿವು?–ನಿಮಗೆ ಬೇರೆ ಯಾವುದೇ ಚರ್ಮದ ಅಥವಾ ಇತರ ಆರೋಗ್ಯ ಸಮಸ್ಯೆಗಳಿಲ್ಲದೆ ಇದ್ದಲ್ಲಿ, ನೀವು ನಿಮಗೆ ಸರಿ ಹೊಂದುವ ಮನೆಮದ್ದನ್ನು ಸುಮಾರು ಒಂದು ವಾರ ಗಳಷ್ಟು ಕಾಲ ನಿರಂತರವಾಗಿ ಉಪಯೋಗಿಸಿದಲ್ಲಿ ಪರಿಹಾರವನ್ನು ಕಾಣಬಹುದು.
ಒಂದು ವೇಳೆ ಈಗಾಗಲೇ ಬೆವರುಗುಳ್ಳೆಗಳು ಬಾತುಕೊಂಡಿದ್ದಲ್ಲಿ, ಕೀವುತುಂಬಿಕೊಡಿದ್ದಲ್ಲಿ, ನೋವಿಗೆ ಜ್ವರ, ಮೈ ಕೈ ನೋವು , ತಲೆ ನೋವು ಮುಂತಾದ ಲಕ್ಷಣಗಳಿದ್ದಲ್ಲಿ ನಿಮ್ಮ ಹತ್ತಿರದ ಚರ್ಮ ತಜ್ಞರನ್ನು ಭೇಟಿಯಾಗುವುದೇ ಸೂಕ್ತ.
ತಿನ್ನಿ ಮತ್ತು ಕುಡಿಯಿರಿತ್ತು ಕುಡಿಯಿರಿ
ಪಪ್ಪಾಯ ಹಣ್ಣು,ಕಲ್ಲಂಗಡಿ ಹಣ್ಣು,ವಿಟಮಿನ್ ಸಿ ಅಧಿಕವಾಗಿರುವ ಕಿತ್ತಳೆ, ಸೇಬು, ನೆಲ್ಲಿಕಾಯಿ,ದ್ರಾಕ್ಷಿ, ಟೊಮೇಟೊ,ಸೌತೆಕಾಯಿ,ಪುದೀನಾ ಬೆರೆಸಿದ ನಿಂಬೆ ಹಣ್ಣಿನ ಪಾನಕ,ಕೊಕ್ಕಮ್ ಹಣ್ಣಿನ ಪಾನಕ,ಬೀಟ್ರೂಟ್ ಜ್ಯೂಸು,ಕ್ಯಾರೆಟ್ ಜ್ಯೂಸು.ಸುಳ್ಳಾಸ್ರಿಗೆ ( ಬೆಲ್ಲ, ಏಲಕ್ಕಿ, ತೆಂಗಿನಹಾಲು ಮಿಶ್ರಣದ ಪಾನಕ).ರಾಗಿ ಪಾನಕ.ಹೆಸರು ಕಾಳಿನ ಪಾನಕ,ಎಳ್ಳಿನ ಪಾನಕ,ಜೀರಿಗೆ ಪಾನಕ,ನೀರಲ್ಲಿ ನೆನೆಸಿದ ತಂಪಿನ ಬೀಜದ ಪಾನಕ,ತಂಬುಳಿಗಳು,ತರಹೇವಾರಿ ಸೊಪ್ಪಿನ ಪಲ್ಯಗಳು,ಇಂಗು, ಶುಂಠಿ, ಕೊತ್ತಂಬರಿ ಸೊಪ್ಪು ಹಾಕಿದ ಮಜ್ಜಿಗೆ
ಮಾಡಲೇಬಾರದು
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
- ಗುಳ್ಳೆಗಳನ್ನು ಪದೇ ಪದೇ ತುರಿಸುವುದು-ಯಾವುದೇ ರಾಸಾಯನಿಕ ಕ್ರೀಮ್ಗಾಲ ಬಳಕೆ
- ಬಿಗಿಯಾದ ಉಡುಪು ಧರಿಸುವುದು
- ಬಿಸಿಲಿನಲ್ಲಿ ಅಡ್ಡಾಡುವುದು
- ಧೂಮಪಾನ, ಜಂಕ್ ಫುಡ್, ಅತಿಯಾಗಿ ತಿನ್ನುವುದು ಮತ್ತು ಮಲಗುವುದು
- ಸರಳ ಉಪಾಯವೆಂದರೆ , ನಿಮ್ಮ ದೇಹ ಮತ್ತು ಮನಸ್ಸನ್ನು ಆರೋಗ್ಯಕರ ರೀತಿಯಲ್ಲಿ ತಂಪಾಗಿಟ್ಟುಕೊಳ್ಳಿ. ಬೇಸಿಗೆಯ ಬೇಗೆ ನಿಮ್ಮನ್ನು ಕಾಡದಿರಲಿ.