ಈ ಗಿಡಗಳು ನಿಮ್ಮ ಮನೆಯಲ್ಲಿ ಇದ್ದರೆ ಸಿರಿ ಸಂಪತ್ತು ನೆಲೆಸುತ್ತಾದೆ.ಹಿಂದೂ ಧರ್ಮದಲ್ಲಿ ಗಿಡಗಳನ್ನು ದೇವತೆಗಳಂತೆ ಆರಾಧಿಸಲಾಗುತ್ತದೆ.ಕೆಲವು ಗಿಡಗಳನ್ನು ಮನೆಯ ಮುಂದೆ ಬಳಸುವುದರಿಂದ ಕಂಡಿತ ಅದೃಷ್ಟ ಬದಲಾಗುತ್ತದೆ.ಪ್ರತಿಯೊಬ್ಬರ ಮನೆಯಲ್ಲೂ ಯಾವುದಾದರು ಒಂದು ಗಿಡವನ್ನು ಅಥವಾ ತುಳಸಿ ಗಿಡವನ್ನು ಇಟ್ಟಿರುತ್ತರೆ. ಕೆಲವೊಂದು ಗಿಡಗಳು ಮನೆಯಲ್ಲಿ ಇದ್ದರೆ ಕೆಟ್ಟ ಪ್ರಭಾವವನ್ನು ಬೀರುತ್ತವೆ. ಹಾಗಾಗಿ ಮನೆಯಲ್ಲಿ ಈ ರೀತಿಯ ಬಳಸಬಾರದು ಮತ್ತು ಈ ಕೆಲವೊಂದು ಗಿಡವನ್ನು ಮಾತ್ರ ಬೆಳೆಸಬೇಕು.ಕೆಲವೊಂದು ಬರೀ ಮನೆಯಲ್ಲಿ ತುಂಬಾ ಕಷ್ಟಗಳು ಇದ್ದಾರೆ ಮನೆಯಲ್ಲಿ ಇರುವ ವಾಸ್ತುವನ್ನು ಮೊದಲು ಸರಿ ಮಾಡಿಕೊಳ್ಳಬೇಕಾಗುತ್ತದೆ.
ಮನೆಯ ವಾಸ್ತುವನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಎಂದರೆ ಮನೆಯ ಅಕ್ಕಪಕ್ಕದಲ್ಲಿ ಇರುವ ಪರಿಸರವು ಚೆನ್ನಾಗಿ ಇರುವುದು ತುಂಬಾನೇ ಮುಖ್ಯ.ಮರ ಗಿಡಗಳು ಪ್ರಕೃತಿಯನ್ನು ಸಮತೋಲನದಿಂದ ಇರಿಸಿಕೊಳ್ಳುತ್ತದೆ ಮತ್ತು ಮಾನವ ಜೀವನಕ್ಕೆ ತುಂಬಾನೇ ಮಹತ್ವ ಪೂರ್ಣ ಆಗಿರುತ್ತವೆ.ವಾತಾವರಣದಲ್ಲಿ ಇರುವ ಅಶುದ್ಧವಾದ ಹಾನಿಕಾರಕವಾದ ಅಂಶವನ್ನು ಸೇವಿಸುತ್ತದೆ.ನಂತರ ವಾತಾವರಣ ಶುದ್ಧವಾಗಿ ಇರಿಸುತ್ತದೆ. ವಾಸ್ತುಶಾಸ್ತ್ರದ ಅನುಸರವಾಗಿ ಮನುಷ್ಯ ಸಿರಿ ಸಂಪತ್ತನ್ನು ಪಡೆಯಲು ತಮ್ಮ ಮನೆಯಲ್ಲಿ ತಪ್ಪದೆ ಈ ಸಸ್ಯಗಳನ್ನು ನೆಡಬೇಕು.
1, ಬಾಳೆ ಹಣ್ಣಿನ ಗಿಡ–ಈಶನ್ಯ ದಿಕ್ಕಿನಲ್ಲಿ ಈ ವೃಕ್ಷವನ್ನು ನೆಟ್ಟರೆ ಅಧಿಕವಾದ ಲಾಭ ನಿಮಗೆ ಸಿಗುತ್ತದೆ. ಒಂದು ವೇಳೆ ಬಾಳೆಹಣ್ಣಿನ ಗಿಡದ ಹತ್ತಿರ ತುಳಸಿ ಗಿಡ ನೆಟ್ಟರೆ ಇಲ್ಲಿ ಅಧಿಕವಾದ ಲಾಭ ಸಿಗುತ್ತದೆ.
2, ಅಶೋಕ ವೃಕ್ಷ.–ಈ ವೃಕ್ಷವನ್ನು ಮನೆಯ ಉತ್ತರ ದಿಕ್ಕಿನಲ್ಲಿ ನೆಟ್ಟರೆ ಇದರ ಶುಭ ಪ್ರಭಾವ ನಿಮಗೆ ಸಿಗುತ್ತಾದೆ.ಈ ವೃಕ್ಷವನ್ನು ಪರಿಸರದಲ್ಲಿ ಅಥವಾ ಮನೆಯ ಮುಂದೆ ನೆಡುವುದರಿಂದ ಬೇರೆ ಅಶುಭ ವೃಕ್ಷದ ದೋಷವು ನಾಶ ಆಗುತ್ತದೆ.
3, ಎಕ್ಕದ ಗಿಡ–ವಾಸ್ತು ಶಾಸ್ತ್ರದ ಸಿದ್ದಂತದ ಅನುಸರವಾಗಿ ಹಾಲಿನಿಂದ ತುಂಬಿದ ಸಸ್ಯಗಳನ್ನು ನೆಡುವುದು ಅಶುಭ ಎಂದು ತಿಳಿಯಲಾಗಿದೆ.ಅದರೆ ಎಕ್ಕದ ಗಿಡ ಮನೆಯಲ್ಲಿ ಸ್ವತಃ ತಾನಾಗಿ ಹುಟ್ಟಿದರೆ ಅದನ್ನು ನೀವು ಕಿತ್ತು ತೆಗೆಯಬಾರದು. ಬದಲಿಗೆ ಇದರ ಪೂಜೆಯನ್ನು ನೀವು ಮಾಡಬೇಕು. ಈ ರೀತಿ ಮಾಡಿದರೆ ಮನೆಯಲ್ಲಿ ಧನ ಸಂಪತ್ತಿನ ವೃದ್ಧಿ ಕಾಣುತ್ತಿರ.ಮನೆಯಲ್ಲಿ ಇರುವ ಜನರಲ್ಲಿ ಸುಖ ಶಾಂತಿ ನೆಮ್ಮದಿಯು ಇರುತ್ತದೆ.
4, ಪಪ್ಪಾಯ ಹಣ್ಣಿನ ಗಿಡ—ವಾಸ್ತುವಿನ ಅನುಸರವಾಗಿ ಮನೆಯ ಮುಂದೆ ಪಪ್ಪಾಯ ಗಿಡವನ್ನು ನೆಡಬಾರದು. ಯಾಕೆಂದರೆ ಇದು ಅಶುಭ ಫಲವನ್ನು ನೀಡುತ್ತದೆ.
5, ತೆಂಗಿನಕಾಯಿ ಮರ—ಒಂದು ವೇಳೆ ಮನೆಯ ಮುಂದೆ ತೆಂಗಿನ ಮರ ಇದ್ದರೆ ಶುಭ ಫಲ ಸಿಗುತ್ತದೆ.
6, ಆಲದ ಮರ—ಪೂರ್ವದಿಕ್ಕಿನಲ್ಲಿ ಆಲದಮರ ಇರುವುದು ತುಂಬಾನೇ ಶುಭ ಆಗಿರುತ್ತದೆ. ಇಲ್ಲಿ ಎಲ್ಲಾ ಮನಸ್ಸಿನ ಇಚ್ಛೆಗಳು ಸಹ ಪೂರ್ತಿ ಆಗುತ್ತವೆ. ಆದರೆ ಮನೆಯ ಮೇಲೆ ಆಲದ ಮರದ ನೆರಳು ಬೀಳಬಾರದು. ಒಂದು ವೇಳೆ ನೈರುತ್ಯ ದಿಕ್ಕಿನಲ್ಲಿ ಆಲದಮರದ ಇದ್ದರೆ ಅಶುಭ ಎಂದು ತಿಳಿಯಲಾಗಿದೆ.
7, ನೆಲ್ಲಿ ಕಾಯಿ ಗಿಡ—ನೆಲ್ಲಿಕಾಯಿ ಗಿಡ ಮನೆಯ ಅಂಗಳದಲ್ಲಿ ಇರುವುದು ಶುಭ ಆಗಿರುತ್ತದೆ.
8, ದಾಳಿಂಬೆ ಗಿಡ—ಒಂದು ವೇಳೆ ಹಣ್ಣು ನೀಡುವ ದಾಳಿಂಬೆ ಗಿಡ ಇದ್ದಾರೆ ಇಲ್ಲಿ ಶುಭ ಫಲ ಸಿಗುತ್ತದೆ.ಅದರೆ ಈ ಗಿಡ ಆಗ್ನೇಯ ಮತ್ತು ನೈರುತ್ಯ ದಿಕ್ಕಿನಲ್ಲಿ ಇರಬಾರದು. ಇನ್ನು ಮನೆಯ ಹತ್ತಿರ ಅರಿಶಿಣದ ಗಿಡ ಇರುವುದು ಅಶುಭ ಆಗಿದೆ. ಇನ್ನು ಸೀತಾಫಲ ಗಿಡ ಕೂಡ ಅಶುಭ ಎಂದು ಹೇಳಲಾಗಿದೆ. ಇದು ಕೂಡ ಮನೆಯಲ್ಲಿ ನೇಡಬಾರದು.
9, ವಾಸ್ತುವಿನ ಅನುಸಾರವಾಗಿ ನೇರಳೆ ಗಿಡವನ್ನು ದಕ್ಷಿಣ ದಿಕ್ಕಿನಲ್ಲಿ ಇದ್ದರೆ ಇದು ತುಂಬಾನೇ ಶುಭವಾಗಿರುತ್ತದೆ.
10, ಇನ್ನು ಮಾವಿನ ಹಣ್ಣಿನ ಗಿಡ ಮನೆಯಲ್ಲಿ ಇದ್ದರೆ ಒಳ್ಳೆಯದಲ್ಲ. ಅಷ್ಟೇ ಅಲ್ಲದೆ ಮನೆಯ ವಾಯುವ್ಯ ದಿಕ್ಕಿನಲ್ಲಿ ಬೇವಿನ ಮರ ಇರುವುದು ಶುಭ ಎಂದು ಹೇಳಲಾಗುತ್ತದೆ.