ವಾಟರ್ ಕ್ಯಾಬೆಜ್ ಅರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ದೇಹವನ್ನು ತಂಪಾಗಿಡುತ್ತದೆ. ಮೊದಲು 5 ಎಲೆ ತೆಗೆದುಕೊಂಡು ಸ್ವಚ್ಛ ಮಾಡಿಕೊಳ್ಳಬೇಕು ಹಾಗು ಸ್ವಚ್ಛ ಮಾಡಿದ ಬಳಿಕ ಮಿಕ್ಸಿ ಜಾರಿಗೆ ಹಾಕಿ. ಇದಕ್ಕೆ ನೆನಸಿದ ಅಕ್ಕಿಯನ್ನು ಹಾಗು ಒಂದು ಕಪ್ಪು ಹಸಿ ತೆಂಗಿನಕಾಯಿ ತುರಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಹಾಗು ಸ್ವಲ್ಪ ನೀರು ಹಾಕಿ ರುಬ್ಬಬೇಕು. ನಂತರ ಒಂದು ಬಬೌಲ್ ನಲ್ಲಿ ಹಾಕಿ.
ನಂತರ ಮಿಕ್ಸಿ ಜಾರಿಗೆ ಒಂದು ಬೌಲ್ ಬೆಲ್ಲ, ನಾಲ್ಕು ಏಲಕ್ಕಿ ಹಾಕಿ ರುಬ್ಬಿ ಅಕ್ಕಿ ಜೊತೆ ಮಿಕ್ಸ್ ಮಾಡಬೇಕು. ನಂತರ ಒಂದು ಈರುಳ್ಳಿ ತೆಗೆದುಕೊಂಡು ಚಿಕ್ಕದಾಗಿ ಕಟ್ ಮಾಡಬೇಕು. ನಂತರ ಒಂದು ಪ್ಯಾನ್ ಒಳಗೆ ತುಪ್ಪ ಹಾಕಿ ಈರುಳ್ಳಿ ಹಾಕಿ ಫ್ರೈ ಮಾಡಿ ರುಬ್ಬಿದ ಅಕ್ಕಿಯನ್ನು ಹಾಕಬೇಕು. ನಂತರ ಚೆನ್ನಾಗಿ ಕುದಿಸಬೇಕು. ಬೆಂದಮೇಲೆ ಸ್ವಲ್ಪ ತಿರುಗಿಸಿ ಹಾಕಬೇಕು. ನಂತರ ಕಟ್ ಮಾಡಿ ಸೇವನೆ ಮಾಡಬಹುದು. ಇದನ್ನು ಯಾರು ಬೇಕಾದರೂ ಸೇವನೇ ಮಾಡಬಹುದು ಮತ್ತು ಬೇಸಿಗೆಯಲ್ಲಿ ದೇಹಕ್ಕೆ ತುಂಬಾ ತಂಪನ್ನು ಕೊಡುತ್ತದೆ.
https://youtu.be/i1dtLjIvnbQ?si=qqkxRAdRjfbZmIMk