2 ದಿನಗಳಲ್ಲಿ ಎಷ್ಟೇ ಹಳೆಯದಾದ ಕಜ್ಜಿ ತುರಿಕೆ ಚರ್ಮದ ಸಮಸ್ಸೆಗೆ ಪರಿಹಾರ!

ಒಣ ಚರ್ಮ, ತುರಿಕೆ, ನಂಜು, ಅಲರ್ಜಿಯಂತಹ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಗರಿಕೆ ರಸವೇ ಔಷಧಿ. ಇದರಲ್ಲಿ ಉರಿಯೂತ ಹಾಗೂ ನಂಜು ನಿವಾರಕ ಗುಣಗಳಿವೆ. ಅರಿಸಿನದೊಂದಿಗೆ ಗರಿಕೆ ಹುಲ್ಲಿನ ರಸವನ್ನು ಮಿಶ್ರಣ ಮಾಡಿ ಚರ್ಮಕ್ಕೆ ಲೇಪಿಸಿಕೊಳ್ಳುವುದರಿಂದ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.ಗರಿಕೆ ಹುಲ್ಲಿನ ಸ್ವರಸವನ್ನು ಕುಡಿಯುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿಸಿಕೊಡುತ್ತೇವೆ. ಒಂದು ಇಡೀ ಗರಿಕೆ ಹುಲ್ಲಿನ ಸೊಪ್ಪನ್ನು ಜಜ್ಜಿ ಅದರ ರಸವನ್ನು ತೆಗೆದು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಈ ಕೆಳಗೆ ತಿಳಿಸಿರುವ ಲಾಭಗಳು ನಿಮಗೆ ಸಿಗುತ್ತದೆ.

ಉರಿಮೂತ್ರದ ಸಮಸ್ಸೆ ಗುಣ ಆಗುತ್ತದೆ

-ರಕ್ತ ಪಿತ್ತದ ಸಮಸ್ಸೆ ಗುಣ ಆಗುತ್ತದೆ
-ಚರ್ಮ ವ್ಯಾದಿ ಸಮಸ್ಸೆ ಗುಣ ಆಗುತ್ತದೆ

ಆಜೀರ್ಣ ಮಲಬದ್ಧತೆ ಸಮಸ್ಸೆ ಗುಣ ಆಗುತ್ತದೆ

-ತೂಕ ಕಡಿಮೆ ಆಗುತ್ತದೆ
-ಪಿತ್ತದ ಅಲರ್ಜಿ ಕೂಡ ಕಡಿಮೆ ಆಗುತ್ತದೆ
-ಮಾನಸಿಕ ಒತ್ತಡಗಳು ಗುಣ ಆಗುತ್ತದೆ
-ರಕ್ತ ಶುದ್ಧಿಕರಣ ಆಗುತ್ತದೆ
-ಕರುಳಿನಲ್ಲಿ ಆಗಿರುವ ಅಲ್ಸರ್ ಕೂಡ ಗುಣ ಆಗುತ್ತದೆ.

ಗರಿಕೆ ಹುಲ್ಲಿನಲ್ಲಿ ಗ್ಲೆಸೆಮಿಕ್‌ ಅಂಶ ಸಮೃದ್ಧವಾಗಿದ್ದು, ಇದು ಮಧುಮೇಹ ನಿಯಂತ್ರಣಕ್ಕೆ ನೆರವಾಗುತ್ತದೆ. ಅಲ್ಲದೆ ಮಧುಮೇಹಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಗರಿಕೆ ಹುಲ್ಲಿನ ರಸದ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸಿನೊಡಾನ್ ಡ್ಯಾಕ್ಟಿಲಾನ್ ಪ್ರೊಟೀನ್ ಎಂಬ ಅಂಶವಿದ್ದು, ಇದು ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ. ಇದು ಜ್ವರದಂತಹ ಸಮಸ್ಯೆಗಳ ನಿವಾರಣೆಗೆ ಸಹಾಯ ಮಾಡುತ್ತದೆ. ಹಾಗಾಗೊ ವಾರಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಗರಿಕೆ ಹುಲ್ಲಿನ ರಸ ಅಥವಾ ಕಷಾಯದ ಸೇವನೆ ಮಾಡಬೇಕು.

ಮೂತ್ರನಾಳದ ಸೋಂಕು ನಿವಾರಣೆ

ಮೂತ್ರನಾಳದ ಸೋಂಕು, ಅಲರ್ಜಿ, ತುರಿಕೆಯಂತಹ ಸಮಸ್ಯೆಗಳಿಗೆ ಇದು ಪರಿಹಾರ ನೀಡುತ್ತದೆ. ಇದರ ಕಾಂಡ, ಎಲೆಯನ್ನು ಜಜ್ಜಿ ರಸ ತೆಗೆದು ಅದಕ್ಕೆ ಲಿಂಬೆರಸ ಹಾಗೂ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ಮೂತ್ರನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಪಿಸಿಓಡಿ, ಮುಟ್ಟಿನ ಸಮಸ್ಯೆಗಳ ನಿವಾರಣೆ

ಇತ್ತೀಚೆಗೆ ಹೆಣ್ಣುಮಕ್ಕಳನ್ನು ಹೆಚ್ಚು ಕಾಡುತ್ತಿರುವ ಪಿಸಿಓಡಿ, ಮುಟ್ಟಿನ ಸಮಸ್ಯೆ, ಅಧಿಕ ರಕ್ತಸ್ರಾವದಂತಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಗರಿಕೆ ಹುಲ್ಲಿನ ರಸಕ್ಕೆ ಬೆಲ್ಲ ಸೇರಿಸಿ ನಿಯಮಿತವಾಗಿ ಸೇವಿಸುವುದರಿಂದ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

Related Post

Leave a Comment