ಇವುಗಳಿಂದಲೇ ಲಿವರ್ ಹಾಳಾಗೋದು!

ನಮ್ಮ ದೇಹದ ಪ್ರತಿಯೊಂದು ಅಂಗಾಂಗಕ್ಕೂ ಕೂಡ ಅದರದೇ ಆದ ಕಾರ್ಯ ವ್ಯಾಪ್ತಿ ಇದೆ. ಅದಕ್ಕಾಗಿ ನಾವು ಸೇವಿಸುವ ಆಹಾರಗಳು ಸರಿ ಹೊಂದಬೇಕು ಅಷ್ಟೇ. ಆದರೆ ಕೆಲವೊಮ್ಮೆ ಇಂತಹ ನಾವು ಇಷ್ಟ ಪಡುವ ಆಹಾರಗಳೇ ನಮಗೆ ಮುಳುವಾಗುತ್ತವೆ. ಲಿವರ್ ವಿಚಾರದಲ್ಲೂ ಕೂಡ ಇದೇ ರೀತಿ ಆಗುತ್ತದೆ. ನಮ್ಮ ದೇಹದಲ್ಲಿ ತುಂಬಾ ದೊಡ್ಡದಾದ ಅಂಗವೆಂದರೆ ಅದು ಲಿವರ್. ಆದರೆ ಲಿವರ್ ಕಾರ್ಯ ಚಟುವಟಿಕೆ ಕೆಲವೊಮ್ಮೆ ಸರಿಯಾಗಿ ನಡೆಯುವುದಿಲ್ಲ. ಮೆಟಬಾಲಿಸಂ ಪ್ರಕ್ರಿಯೆ ಚುರುಕಾಗಿರುವುದಿಲ್ಲ. ಇದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣ ಮತ್ತು ಕೊಬ್ಬಿನ ಪ್ರಮಾಣ ಹೆಚ್ಚಾಗುತ್ತದೆ. ಲಿವರ್ ಸದಾ ಚೆನ್ನಾಗಿ ಕೆಲಸ ಮಾಡಬೇಕು ಎಂದರೆ ಸಾಧ್ಯವಾದಷ್ಟು ಈ ಕೆಳಗಿನ ಆಹಾರಗಳಿಂದ ಮಿತಿ ಕಾಯ್ದುಕೊಳ್ಳುವುದು ಒಳ್ಳೆಯದು.

ಹೆಚ್ಚು ಉಪ್ಪು ಸೇರಿಸುವ ಆಹಾರ

ಉಪ್ಪಿಲ್ಲದ ಅಡುಗೆ ಬಾಯಲ್ಲಿ ಇಡುವುದಕ್ಕೂ ಆಗುವುದಿಲ್ಲ. ನಾವು ತಯಾರು ಮಾಡುವ ಯಾವುದೇ ಅಡುಗೆಗೆ ಉಪ್ಪಿನ ಟಚ್ ಇರಲೇ ಬೇಕು. ಹಾಗೆಂದು ಅತಿಯಾಗಿ ಉಪ್ಪು ಬಳಸುವುದು ಕೂಡ ತಪ್ಪು. ಹೆಚ್ಚು ಉಪ್ಪು ತಿನ್ನುವುದರಿಂದ ಬಿಪಿ ಹೆಚ್ಚಾಗುತ್ತದೆ ಮತ್ತು ಜೊತೆಗೆ ಹೃದಯಕ್ಕೂ ತೊಂದರೆ. ಹಲವು ಜನರಿಗೆ ಲಿವರ್ ಕೂಡ ಹಾಳಾ ಗುತ್ತದೆ. ವಿಶೇಷವಾಗಿ ಗರ್ಭಿಣಿ ಮಹಿಳೆಯರು ಹೆಚ್ಚು ಉಪ್ಪು ತಿನ್ನಬಾರದು. ಹುಟ್ಟುವ ಮಗುವಿನ ಲಿವರ್ ಕೂಡ ಇದರಿಂದ ಹಾಳಾಗುತ್ತದೆ ಎಂದು ಹೇಳುತ್ತಾರೆ.

ಆಲ್ಕೋಹಾಲ್ ನಿಮ್ಮ ಲಿವರ್ ಮೇಲೆ ಹೇಗೆ ಪರಿಣಾಮ ಬೀರುತ್ತೆ?

ನಮ್ಮ ದೇಹಕ್ಕೆ ಮೀಡಿಯಂ ಲೆವೆಲ್ ನಲ್ಲಿ ಕೊಬ್ಬಿನ ಅಂಶ ಬೇಕು. ಏಕೆಂದರೆ ಅದು ನಮಗೆ ಶಕ್ತಿ ಮತ್ತು ಚೈತನ್ಯ ಕೊಡುತ್ತದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನ ಅಂಶ ನಮ್ಮ ದೇಹ ಸೇರಿದರೆ ಅದರಿಂದ ಅನಾಹುತವೇ ಹೆಚ್ಚು.

ಕೊಲೆಸ್ಟ್ರಾಲ್ ಹೆಚ್ಚಾಗಲು ಪ್ರಮುಖ ಕಾರಣವಾಗಿ ನಮ್ಮ ಹೃದಯ ಸೇರಿದಂತೆ ರಕ್ತನಾಳಗಳು ಮತ್ತು ಲಿವರ್ ಭಾಗದಲ್ಲಿ ಕೊಲೆಸ್ಟ್ರಾಲ್ ಶೇಖರಣೆಯಾಗುತ್ತದೆ. ಇದರಿಂದ ಲಿವರ್ ದಪ್ಪ ಆಗಿ ಫ್ಯಾಟಿ ಲಿವರ್ ಸಮಸ್ಯೆ ಬಂದು ಲಿವರ್ ಹಾಳಾಗುತ್ತದೆ.​

ಇದಕ್ಕೆ ಉದಾಹರಣೆ ಎಂದರೆ ಆಲೂಗಡ್ಡೆ, ಬಿಳಿ ಅನ್ನ, ಬಿಳಿ ಬ್ರೆಡ್. ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನುವುದರಿಂದ ನಮ್ಮ ಬ್ಲಡ್ ಶುಗರ್ ಲೆವೆಲ್ ಇದ್ದಕ್ಕಿದ್ದಂತೆ ಏರಿಕೆ ಆಗುತ್ತದೆ.

ಶುಗರ್ ಇಲ್ಲದಿದ್ದರೂ ಕೂಡ ಇದೇ ರೀತಿ ಆಗುತ್ತದೆ. ಆದರೆ ನಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಇವುಗಳು ಬೇಕೇ ಬೇಕು. ಸಂಪೂರ್ಣವಾಗಿ ಬಿಡಲು ಆಗದೆ ಹೋದರು ಸಹ ಮಿತ ಪ್ರಮಾಣದ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಶುಗರ್ ಹೆಚ್ಚಾದರೆ ಅದು ಲಿವರ್ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಕಡಿಮೆ ಪ್ರಮಾಣದಲ್ಲಿ ಇವುಗಳನ್ನು ಸೇವಿಸಿ.

ಸಿಹಿ ಹೆಚ್ಚಾಗಿರುವ ಆಹಾರಗಳು

ಇತ್ತೀಚಿನ ದಿನಗಳಲ್ಲಿ ಜನರು ಸ್ವೀಟ್ ಹೆಚ್ಚಾಗಿ ತಿನ್ನುತ್ತಿದ್ದಾರೆ ಎಂದು ಸಂಶೋಧನೆ ಹೇಳುತ್ತದೆ. ಆದರೆ ಇದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಇದು ಪ್ರತ್ಯಕ್ಷವಾಗಿ ಮತ್ತು ಪರೋಕ್ಷ ವಾಗಿ ಲಿವರ್ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ.

ಸಕ್ಕರೆ ಕಾಯಿಲೆ ಹೆಚ್ಚಾಗುವ ಜೊತೆಗೆ ಲಿವರ್ ಆರೋಗ್ಯ ಕೂಡ ಹಾಳಾಗುತ್ತದೆ. ಹೀಗಾಗಿ ಸಕ್ಕರೆ ಅಂಶದ ಬದಲು ಮಿತ ಪ್ರಮಾಣದಲ್ಲಿ ಬೆಲ್ಲ, ಜೇನುತುಪ್ಪ, ಬಾಳೆಹಣ್ಣು, ಒಣದ್ರಾಕ್ಷಿ ಇವುಗಳನ್ನು ಉಪಯೋಗಿಸಿ.​

ಕೆಂಪು ಮಾಂಸಹಾರ

ಮಾಂಸಪ್ರಿಯರಿಗೆ ಇಷ್ಟವಾದ ಕೆಂಪು ಮಾಂಸಹಾರ ಕೂಡ ಅತಿಯಾಗಿ ಸೇವಿಸಿದರೆ ಲಿವರ್ ಗೆ ತೊಂದರೆ ಉಂಟಾಗುವುದು ಗ್ಯಾರಂಟಿ.ಏಕೆಂದರೆ ಇದು ಅಷ್ಟು ಬೇಗನೆ ನಮ್ಮ ದೇಹದಲ್ಲಿ ಜೀರ್ಣ ವಾಗುವುದಿಲ್ಲ. ಕೆಂಪು ಮಾಂಸಹಾರದಲ್ಲಿ ಪ್ರೋಟೀನ್ ಹೆಚ್ಚಾಗಿರುತ್ತದೆ.
ಹೀಗಾಗಿ ಮಿತಿ ಇಲ್ಲದ ಸೇವನೆಯಿಂದ ಸಿಗುವ ಅತಿಯಾದ ಪ್ರೋಟೀನ್ ನಮ್ಮ ಲಿವರ್ ಭಾಗದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಹೀಗಾಗಿ ಆರೋಗ್ಯ ತಜ್ಞರು ಕೆಂಪು ಮಾಂಸಹಾರ ವನ್ನು ಮಿತ ಪ್ರಮಾಣದಲ್ಲಿ ಸೇವಿಸಿ ಎಂದು ಹೇಳಿದ್ದಾರೆ.​

ದೇಹದ ಲಿವರ್ ಆರೋಗ್ಯ ಚೆನ್ನಾಗಿರಬೇಕು ಎಂದರೆ, ಸಂಸ್ಕರಿಸಿದ ಆಹಾರ ಪದಾರ್ಥಗಳು, ಫಾಸ್ಟ್ ಫುಡ್, ಎಣ್ಣೆಯಾಂಶ ಇರುವ ಆಹಾರ ಗಳು, ಕೃತಕ ಸಿಹಿಯಾಂಶ ಹೆಚ್ಚಿರುವ ಸಿಹಿತಿಂಡಿಗಳು ಹಾಗೂ ಪಾನೀಯಗಳಿಂದ ದೂರವಿರಬೇಕು.

Related Post

Leave a Comment