ಅಗಸೆಬೀಜದಲ್ಲಿ ಹಲವಾರು ಪೋಷಕಾಂಶಗಳು ಇದೆ. ಆ ಪೋಷಕಾಂಶದ ಸತ್ವದಿಂದ ಆರೋಗ್ಯದಲ್ಲಿ ಒಂದು ಅದ್ಭುತವಾದ ಪರಿಣಾಮವನ್ನು ಕಾಣಬಹುದು.ಇದರಲ್ಲಿ ಫ್ಯಾಟ್ 60%, ಸ್ಯಚುರೆಟೆಡ್ ಫ್ಯಾಟ್ 18%, ಫೋಟೊಸ್ಸಿಯಂ ಅಂಶ 23%, ಫೈಬರ್ ಅಂಶ 108%,ಪ್ರೊಟೀನ್ 36%, ಕ್ಯಾಲ್ಸಿಯಂ 25%, MG 98%, ವಿಟಮಿನ್ ಬಿ6 28%, ಐರನ್ 31%, ಒಮೇಗಾ 3 ಫ್ಯಾಟಿ ಆಸಿಡ್ಸ್ ಕೂಡ ಹೆಚ್ಚಾಗಿ ಇರುತ್ತದೆ.
ಸಾವಿರಾರು ವರ್ಷಗಳ ಹಿಂದೆಯೇ ಬಳಕೆಯಲ್ಲಿರುವ ಅಗಸೆ ಬೀಜಗಳು ಆರೋಗ್ಯಕ್ಕೆ ಭರಪೂರ ಉಪಯೋಗಗಳನ್ನು ನೀಡುತ್ತವೆ. ಹೇರಳವಾದ ಪೌಷ್ಟಿಕಾಂಶಗಳನ್ನು ಹೊಂದಿರುವ ಅಗಸೆ ಬೀಜಗಳು ನೋಡಲು ಪುಟ್ಟದಾಗಿದ್ದರೂ ಆರೋಗ್ಯಕ್ಕೆ ಬೆಟ್ಟದಷ್ಟು ಉಪಯೋಗಗಳನ್ನು ನೀಡುತ್ತವೆ.
ಅಗಸೆ ಬೀಜದಲ್ಲಿರುವ ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಫೈಬರ್ ಅಂಶದಿಂದಾಗಿ ಆರೋಗ್ಯಕರ ಆಹಾರವಾಗಿ ಗುರುತಿಸಿಕೊಂಡಿದೆ. ಹೃದ್ರೋಗ, ಟೈಪ್ 2 ಮಧುಮೇಹ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
ಇನ್ನು ಯಾವೆಲ್ಲಾ ಪ್ರಯೋಜನಗಳನ್ನು ಅಗಸೆ ಬೀಜ ಆರೋಗ್ಯಕ್ಕೆ ನೀಡುತ್ತದೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ
ಅಗಸೆ ಬೀಜಗಳಲ್ಲಿ ಲಿಗ್ನಾನ್ ಅಂಶ ಸಮೃದ್ಧವಾಗಿದೆ. ಇದು ಈಸ್ಟ್ರೊಜೆನ್ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿರುವ ಸಸ್ಯ ಸಂಯುಕ್ತಗಳಾಗಿವೆ. ಈ ಸಂಯುಕ್ತಗಳು ವಿವಿಧ ರೀತಿಯ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಆರೋಗ್ಯವನ್ನು ಸುಧಾರಿಸುವಲ್ಲಿ ಅತ್ಯಂತ ಉಪಯುಕ್ತವಾಗಿದೆ. ವಿಶೇಷವಾಗಿ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಈ ಅಗಸೆ ಬೀಜಗಳು ಸಹಾಯ ಮಾಡುತ್ತವೆ ಎಂದು ಅಧ್ಯಯನಗಳು ಕಂಡುಕೊಂಡಿವೆ.
ರಕ್ತದೊತ್ತಡವನ್ನು ನಿಯಂತ್ರಣ
ಅಗಸೆ ಬೀಜಗಳು ರಕ್ತದೊತ್ತಡವನ್ನು ನಿಯಂತ್ರಿಸಿ, ಹೈಪರ್ ಟೆನ್ಷನ್ನ್ನು ಕಡಿಮೆ ಮಾಡುತ್ತವೆ. ಆರು ತಿಂಗಳ ಕಾಲ ಪ್ರತಿದಿನ 30 ಗ್ರಾಂ ಅಗಸೆಬೀಜಗಳನ್ನು ಸೇವಿಸಿದ ಜನರು ತಮ್ಮ ಸಿಸ್ಟೊಲಿಕ್ ರಕ್ತದೊತ್ತಡದಲ್ಲಿ 10 mm Hg ಯಷ್ಟು ಇಳಿಕೆಯನ್ನು ಅನುಭವಿಸುತ್ತಾರೆ ಎಂದು ಅಧ್ಯಯನ ಹೇಳಿದೆ.
ಹೀಗಾಗಿ ಬಿಪಿ ಸಮಸ್ಯೆ ಇದ್ದವರು ನಿಯಮಿತವಾಗಿ ಅಗಸೆ ಬೀಜಗಳನ್ನು ಬಳಸುವುದು ಒಳ್ಳೆಯದು.
ಮಧುಮೇಹ ನಿಯಂತ್ರಣ
ಸಾಮಾನ್ಯವಾಗಿ ಮಧುಮೇಹ ಇದ್ದವರಿಗೆ ಅದನ್ನು ತಿನ್ನಬೇಡಿ, ಇದನ್ನು ತಿನ್ನಬೇಡಿ ಎನ್ನುವುದೇ ಹೆಚ್ಚು ಆದರೆ ಮಧುಮೇಹ ಇದ್ದವರಿಗೆ ಅಗಸೆ ಬೀಜಗಳು ಅತ್ಯುತ್ತಮ ಆಹಾರವಾಗಿದೆ.
ರಕ್ತದಲ್ಲಿ ಸಕ್ಕರೆ ಪ್ರಮಾಣದ ಉತ್ಪಾದನೆಯನ್ನು ನಿಯಂತ್ರಣದಲ್ಲಿರಿಸಿ, ಮಧುಮೇಹವನ್ನು ಹತೋಟಿಗೆ ತರುವಲ್ಲಿ ಅಗಸೆ ಬೀಜಗಳು ಉತ್ತಮವಾಗಿವೆ.
ಹೃದಯದ ಆರೋಗ್ಯ
ಅಗಸೆಬೀಜಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಹೀಗಾಗಿ ಹೃದಯದ ಆರೋಗ್ಯವನ್ನುವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಕೊಬ್ಬು ಮೂಲತಃ ಅಪಧಮನಿಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ, ಇದು ಸಾಮಾನ್ಯವಾಗಿ ಪಾರ್ಶ್ವವಾಯು, ಹೃದಯಾಘಾತ ಮತ್ತು ಹೃದಯ ಸ್ತಂಭನದಂತಹ ವಿವಿಧ ಹೃದಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಅಗಸೆ ಬೀಜಗಳು ಈ ಕೊಬ್ಬನ್ನು ಕಡಿಮೆ ಮಾಡಿ ಹೃದಯವನ್ನು ಆರೋಗ್ಯವಾಗಿರುವಂತೆ ಮಾಡುತ್ತದೆ.
ದೇಹದ ತೂಕ ಇಳಿಕೆಗೆ ಒಳ್ಳೆಯದು
ತೂಕ ನಷ್ಟ ಮಾಡಿಕೊಳ್ಳುವವರಿಗೆ ಅಗಸೆ ಬೀಜಗಳು ಬಹಳ ಒಳ್ಳೆಯದು. ಸಣ್ಣ ಕಂದು ಬೀಜಗಳು ಲೋಳೆಪೊರೆ ಎಂದು ಕರೆಯಲ್ಪಡುವ ಫೈಬರ್ನಿಂದ ತುಂಬಿರುತ್ತವೆ, ಇದು ಹಸಿವು, ಕಡುಬಯಕೆಗಳನ್ನು ನಿಗ್ರಹಿಸುತ್ತದೆ. ಅಗಸೆಬೀಜಗಳು ಅಧಿಕ ತೂಕ ಮತ್ತು ಸ್ಥೂಲಕಾಯತೆ ಹೊಂದಿರುವ ಜನರಲ್ಲಿ ಕೊಬ್ಬಿನ ಅಂಶವನ್ನು ಕರಗಿಸಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ
ಅಗಸೆಬೀಜಗಳು ಕರಗಬಲ್ಲ ಮತ್ತು ಕರಗದ ಎರಡೂ ವಿಧದ ಫೈಬರ್ ಅನ್ನು ಹೊಂದಿರುತ್ತವೆ. ಹೀಗಾಗಿ ಕರುಳಿನ ಆರೋಗ್ಯ ಮತ್ತುಜೀರ್ಣಶಕ್ತಿಯನ್ನು ಉತ್ತಮವಾಗಿಸಲು ಉತ್ತಮವಾಗಿಸಲು ಅಗಸೆ ಬೀಜಗಳು ಸಹಾಯ ಮಾಡುತ್ತವೆ.
ಮಲಬದ್ಧತೆ ಮತ್ತು ಕೆರಳಿಸುವ ಕರುಳಿನ ಲಕ್ಷಣಗಳಿಂದ ಬಳಲುತ್ತಿರುವ ಜನರಿಗೆ ಪ್ರತಿದಿನ ಅಗಸೆಬೀಜಗಳನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ. ಆದರೆ ಅಗಸೆ ಬೀಜಗಳನ್ನು ಸೇವಿಸಿದರೆ ದಿನವಿಡೀ ಸಾಕಷ್ಟು ನೀರು ಅಥವಾ ದ್ರವ ಪದಾರ್ಥವನ್ನು ಸೇವನೆ ಮಾಡಬೇಕಾಗುತ್ತದೆ.
ಅಗಸೆ ಬೀಜ ಹೇಗೆ ಸೇವನೆ ಮಾಡಬೇಕು?
ಅಗಸೆ ಬೀಜವನ್ನು ಕುಟ್ಟಿ ಪುಡಿ ಮಾಡಬೇಕು. ಬೆಳಗ್ಗೆ ಒಂದು ಲೋಟ ಮಜ್ಜಿಗೆಗೆ ಎರಡು ಚಮಚ ಅಗಸೆ ಬೀಜದ ಪುಡಿ ಹಾಕಿ ಮಿಕ್ಸ್ ಮಾಡಿ ಕುಡಿಯಬೇಕು.ಈ ರೀತಿ ಕುಡಿದರೆ ಈ ಎಲ್ಲಾ ಸಮಸ್ಸೆಗಳು ದೂರವಾಗುತ್ತದೆ.