ಎಚ್ಚರ!ಈ 5 ಆಹಾರಗಳು ಕ್ಯಾನ್ಸರ್ ಗೆ ಕಾರಣವಾಗುತ್ತೆ!

ನೀವು ಇಷ್ಟ ಪಟ್ಟು ತಿನ್ನುವ ಈ ಆಹಾರಗಳು ನಿಮ್ಮ ಆರೋಗ್ಯಕ್ಕೆ ಕ್ಯಾನ್ಸರ್ ಎಂಬ ಬೇಡದ ವರ ಕೊಡಬಹುದು. ವೈದ್ಯರು ಹೇಳುವ ಪ್ರಕಾರ ಸಾಧ್ಯವಾದಷ್ಟು ಇವುಗಳನ್ನು ಅವಾಯ್ಡ್ ಮಾಡಿ! ಕ್ಯಾನ್ಸರ್ ಇಂದು ಜಗತ್ತಿನಾದ್ಯಂತ ಒಂದು ಮಾರಕ ಕಾಯಿಲೆಯಾಗಿ ಹರಡಿದೆ. ಇದಕ್ಕೆ ಪುರುಷರು, ಮಹಿಳೆಯರು ಎನ್ನುವ ಭೇದ ಭಾವವಿಲ್ಲ. ಅಷ್ಟೇ ಏಕೆ ಮಕ್ಕಳು, ವೃದ್ಧರೂ ಎನ್ನುವುದನ್ನು ಕೂಡ ಇದು ನೋಡುವುದಿಲ್ಲ.

ಕೆಲವೊಮ್ಮೆ ಅನುವಂಶಿಯವಾಗಿ ಕ್ಯಾನ್ಸರ್ ಬರುವ ಸಾಧ್ಯತೆ ಇದ್ದರೆ, ಇನ್ನು ಕೆಲವೊಮ್ಮೆ ನಮ್ಮದೇ ಆದ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದ ನಮಗೆ ಕ್ಯಾನ್ಸರ್ ಬರಬಹುದು. ಡಾಕ್ಟರ್ ಹೇಳುವ ಪ್ರಕಾರ ನಾವು ಕೆಲವೊಂದು ಆಹಾರ ಪದಾರ್ಥಗಳನ್ನು ನಿರಂತರವಾಗಿ ಸೇವನೆ ಮಾಡುವುದರಿಂದ ನಮಗೆ ನಾವೇ ಕ್ಯಾನ್ಸರ್ ತಂದುಕೊಳ್ಳುತ್ತೇವೆ. ಹಾಗಾದರೆ ನಾವು ಆರೋಗ್ಯಕರ ಎಂದು ತಿನ್ನುತ್ತಿರುವ ಆಹಾರ ಪದಾರ್ಥಗಳು ನಮಗೆ ಕ್ಯಾನ್ಸರ್ ತರುತ್ತವೆ, ನೋಡೋಣ ಬನ್ನಿ.

ಸಾಧ್ಯವಾದಷ್ಟು ಈ ಆಹಾರ ಪದಾರ್ಥಗಳಿಂದ ದೂರವಿರಿ!

ಕ್ಯಾನ್ಸರ್ ಬಂದು ಮಾರಕ ಕಾಯಿಲೆ.ಆರಂಭದಲ್ಲಿ ಅದರ ಬಗ್ಗೆ ಎಚ್ಚರ ಹೊಂದಿಲ್ಲದಿದ್ದರೆ, ನಮಗೆ ನಾವೇ ನಮ್ಮ ಜೀವಕ್ಕೆ ತೊಂದರೆ ತಂದುಕೊಂಡಂತೆ!ಆರೋಗ್ಯ ತಜ್ಞರು ಹೇಳುವ ಹಾಗೆ ಈ ಕೆಳಗಿನ ಕೆಲವೊಂದು ಆಹಾರ ಪದಾರ್ಥಗಳಿಂದ ದೂರವಿದ್ದರೆ, ಮನುಷ್ಯ ಆತನ ಜೀವಿತಾವಧಿಯಲ್ಲಿ ಕ್ಯಾನ್ಸರ್ ಅಭಿವೃದ್ಧಿಪಡಿಸಿಕೊಳ್ಳು ವುದು ಕಡಿಮೆ…

ಮೈದಾ ಹಿಟ್ಟು

ಯಾವಾಗಲೂ ಮೈದಾಹಿಟ್ಟಿನ ಆಹಾರ ಪದಾರ್ಥ ಗಳನ್ನು ತಿನ್ನುವುದು ಆರೋಗ್ಯ ತುಂಬಾ ಡೇಂಜರ್. ಇದು ಒಬ್ಬ ವ್ಯಕ್ತಿಗೆ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಹೆಚ್ಚಿ ಸುತ್ತದೆ ಎಂದು ಡಾಕ್ಟರ್ ಹೇಳುತ್ತಾರೆ.ಏಕೆಂದರೆ ಮೈದಾಹಿಟ್ಟನ್ನು ತಯಾರು ಮಾಡುವ ಕೆಲ ವೊಂದು ಸಂಸ್ಕರಣ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಾರೆ ಮತ್ತು ಆ ಸಂದರ್ಭ ದಲ್ಲಿ ಅದಕ್ಕೆ ಕ್ಲೋರಿನ್ ಗ್ಯಾಸ್ ಸ್ವಲ್ಪ ಹೆಚ್ಚಾಗಿ ಸೇರಿಸುತ್ತಾರೆ.ಇದು ಸಿಹಿ ಸೂಚ್ಯಂಕವನ್ನು ಹೆಚ್ಚಾಗಿ ಹೊಂದಿದ್ದು, ಬ್ಲಡ್ ಗ್ಲುಕೋಸ್ ಲೆವೆಲ್ ಮತ್ತು ಇನ್ಸುಲಿನ್ ಲೆವೆಲ್ ಇದಕ್ಕಿದ್ದಂತೆ ಏರಿಕೆ ಮಾಡುವ ಸಾಧ್ಯತೆ ಕೂಡ ಇರುತ್ತದೆ.

ಮೈಕ್ರೋವೇವ್ ಮಾಡಿದ ಪಾಪ್ಕಾರ್ನ್

ಪಾಪ್ಕಾರ್ನ್ ಎಂದರೆ ಬಹಳಷ್ಟು ಜನರಿಗೆ ಪ್ರಿಯ. ಮಕ್ಕಳಂತೂ ಬಹಳ ಇಷ್ಟ ಪಟ್ಟು ತಿನ್ನುತ್ತಾರೆ. ಆದರೆ ಇದು ನಿರಂತರವಾಗಿ ಮುಂದುವರೆದರೆ, ಕ್ಯಾನ್ಸರ್ ಸಮಸ್ಯೆಗೆ ಗುರಿಯಾಗಬೇಕಾಗಿಬರಬಹುದು ಎಂದು ವೈದ್ಯರು ಎಚ್ಚರಿಕೆ ನೀಡುತ್ತಾರೆ.ಏಕೆಂದರೆ ಮೈಕ್ರೋವೇವ್ ನಲ್ಲಿ ತಯಾರಾದ ಪಾಪ್ಕಾ ರ್ನ್ ತಮ್ಮಲ್ಲಿ PFOA ಪ್ರಮಾಣವನ್ನು ಹೆಚ್ಚಾಗಿ ಹೊಂದಿ ರುತ್ತವೆ. ಇದು ಕ್ಯಾನ್ಸರ್ ತರುವಂತಹ ಒಂದು ಪ್ರಮುಖ ಏಜೆಂಟ್.ಬಹಳಷ್ಟು ಜನರಲ್ಲಿ ಈಗಾಗಲೇ ಕಿಡ್ನಿ, ಲಿವರ್, ಮೂತ್ರ ಚೀಲ ಹಾಗೂ ಪ್ಯಾಂಕ್ರಿಯಾಸ್ ಅಂಗಕ್ಕೆ ಸಂಬಂಧಪಟ್ಟ ಕ್ಯಾನ್ಸಲ್ ಬರಲು ಇದು ಕಾರಣವಾಗಿದೆ ಎಂದು ಹೇಳುತ್ತಾರೆ.

ಮಧ್ಯಪಾನ ಸೇವನೆ

ಹೆಚ್ಚಿನ ಪ್ರಮಾಣದಲ್ಲಿ ಮಧ್ಯಪಾನ ಸೇವನೆ ಮಾಡು ವುದು ಕೂಡ ನಿಮ್ಮ ಲಿವರ್ ಹಾಳಾಗಲು ಪ್ರಮುಖ ಕಾರಣ ಎನ್ನುವುದನ್ನು ಮಧ್ಯಪಾನ ಸೇವನೆ ಮಾಡುವವರು ಮರೆಯಬಾರದು.ಇದು ಲಿವರ್ ಭಾಗಕ್ಕೆ ಕ್ಯಾನ್ಸರ್ ತಂದುಕೊಡುವ ಸಾಧ್ಯತೆ ಯಿದ್ದು, ಸಂಪೂರ್ಣವಾಗಿ ನಿಮ್ಮ ಲಿವರ್ ಭಾಗವನ್ನು ಹಾನಿ ಗೊಳಗಾಗುವಂತೆ ಮಾಡುತ್ತದೆ ಮತ್ತು ನಿಮ್ಮ ಕಿಡ್ನಿ ಸಹ ಇದರಿಂದ ಹಾಳಾಗಬಹುದು. ಸಂಪೂರ್ಣ ನಿಮ್ಮ ಜೀರ್ಣಾಂಗ ವ್ಯವಸ್ಥೆ ನಿಮ್ಮ ಈ ಒಂದು ದುರಭ್ಯಾಸ ದಿಂದ ಹಾಳಾಗಿ ಹೋಗುತ್ತದೆ.

ಆಲೂಗಡ್ಡೆ ಚಿಪ್ಸ್

ಇದನ್ನಂತೂ ನೆನೆಸಿಕೊಂಡರೆ ಎಂತಹವರಿಗಾದರೂ ಬಾಯಲ್ಲಿ ನೀರು ಬರುವುದು ಸಹಜ. ಆದರೆ ಕ್ಯಾನ್ಸರ್ ವಿಚಾರದಲ್ಲಿ ನೋಡುವುದಾದರೆ ಆಲೂಗೆಡ್ಡೆ ಚಿಪ್ಸ್ ಡೇಂಜರ್ ಎಂಬುದು ವೈದ್ಯರ ಮಾತು.ಏಕೆಂದರೆ ಇದನ್ನು ಹೆಚ್ಚಿನ ತಾಪಮಾನದಲ್ಲಿ ಎಣ್ಣೆ ಯಲ್ಲಿ ಬೇಯಿಸಿ ಪ್ಯಾಕ್ ಮಾಡುವ ಸಂದರ್ಭದಲ್ಲಿ acrylamide ಎಂಬ ಕ್ಯಾನ್ಸರ್ ಕಾರಕ ರಾಸಾಯನಿಕ ಇದರಲ್ಲಿರುತ್ತದೆ ಎಂದು ತಿಳಿದುಬಂದಿದೆ.ನಿರಂತರವಾಗಿ ಯಾರು ಆಲೂಗಡ್ಡೆ ಚಿಪ್ಸ್ ಅನ್ನುತ್ತಾರೆ ಅವರಿಗೆ ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಬರುವುದು ಖಚಿತ.​

ಸೋಡಾ

ಗ್ಯಾಸ್ಟ್ರಿಕ್ ಹೋಗಲಿ ಎಂದು ನಾವು ರೋಡ್ ಸೈಡ್ ಸೋಡಾ ಕುಡಿಯುತ್ತೇವೆ. ಆದರೆ ಆರೋಗ್ಯಕ್ಕೆ ಇದೆಷ್ಟು ಒಳ್ಳೆಯದು ಎಂಬುದನ್ನು ನಾವು ಆಲೋಚನೆ ಮಾಡುವುದಿಲ್ಲ.

ತಜ್ಞ ವೈದ್ಯರ ಪ್ರಕಾರ ಯಾರು ಪದೇ ಪದೇ ಆಗಾಗ ಸೋಡಾ ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ ಅಂತಹವರಿಗೆ ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳು ಒಂದಕ್ಕೆ ಎರಡರಂತೆ ಅಭಿವೃದ್ಧಿಯಾಗಿ ಇಡೀ ದೇಹವನ್ನು ಕ್ಯಾನ್ಸರ್ ಮಾಯವನ್ನಾಗಿ ಮಾಡ ಬಹುದಾದ ಸಾಧ್ಯತೆ ಇರುತ್ತದೆ.

ಪ್ಯಾಕೆಟ್ ಉಪ್ಪಿನಕಾಯಿ

ಹಲವರಿಗೆ ವಿವಿಧ ಬಗೆಯ ರೆಡಿ ಉಪ್ಪಿನಕಾಯಿ ತೆಗೆದುಕೊಂಡು ತಿನ್ನುವ ಅಭ್ಯಾಸ ಇದ್ದೇ ಇರುತ್ತದೆ. ಆದರೆ ಕೆಲವು ಬಗೆಯ ಉಪ್ಪಿನಕಾಯಿ ಆರೋಗ್ಯಕ್ಕೆ ತುಂಬಾ ಮಾರಕ ಎಂದು ಈಗಾಗಲೇ ಸಾಬೀತಾಗಿದೆ.

ಉದಾಹರಣೆಗೆ ಕ್ಯಾರೆಟ್, ಸೌತೆಕಾಯಿ ಇವುಗಳಿಂದ ತಯಾರು ಮಾಡಿದ ಉಪ್ಪಿನಕಾಯಿ ಪಾಕೆಟ್ ಒಳಗೆ ನೈಟ್ರೇಟ್ ಉಪ್ಪಿನ ಅಂಶವನ್ನು ಹೆಚ್ಚು ಮಾಡುವುದರಿಂದ ಮತ್ತು ಜೊತೆಗೆ ಕೃತಕ ಬಣ್ಣ ಬಳಕೆ ಮಾಡಿರುವುದರಿಂದ ಅದು ದೇಹದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚಾಗಿ ಪ್ರಭಾವ ಬೀರಬಹುದಾದ ಸಾಧ್ಯತೆ ಇರುತ್ತದೆ. ಇದು ಹೊಟ್ಟೆ ಮತ್ತು ಕರುಳಿಗೆ ಸಂಬಂಧಪಟ್ಟಂತೆ ಕ್ಯಾನ್ಸರ್ ತರುತ್ತದೆ ಎಂಬುದು ವೈದ್ಯರ ಮಾತು.​

ಕ್ಯಾನ್ಸರ್ ಬರಲು ಕಾರಣಗಳೇನು?

“ಕ್ಯಾನ್ಸರ್ ಒಬ್ಬರಿಂದ ಒಬ್ಬರಿಗೆ ಹರಡಬಹುದಾದ ಕಾಯಿಲೆ ಆಗಿರದಿದ್ದರೂ, ದೇಹದಲ್ಲಿ ಅನಿಯಂತ್ರಿತ ಜೀವಕೋಶಗಳ ಬೆಳವಣಿಗೆ, ಕೆಲವು ಸಾಮಾನ್ಯ ವಾತಾ ವರಣ ಲಕ್ಷಣಗಳ ಕಾರಣದಿಂದ ಬರಬಹುದಾದ ಕಾಯಿಲೆಯಾಗಿದೆ.

ಉದಾಹರಣೆಗೆ ವಿವಿಧ ಬಗೆಯ ರಾಸಾಯನಿಕ ಅಂಶಗಳ ಸೇವನೆ, ಭೌತಿಕ ಏಜೆಂಟ್ ಗಳು ಅಂದರೆ ( ತಂಬಾಕು ಸೇವನೆ ಯಿಂದ 25 ರಿಂದ 30% ಕ್ಯಾನ್ಸರ್ ಬರುತ್ತದೆ),ಮಾಲಿನ್ಯಕಾರಕ ಅಂಶಗಳು, ಆಹಾರ ಪದ್ಧತಿ ಮತ್ತು ಬೊಜ್ಜು (30-35%), ಸೋಂಕುಗಳು(15-20%) ಮತ್ತು ರೇಡಿಯೇಷನ್ (10%).ವಯಸ್ಸಾಗುವಿಕೆ ಕೂಡ ದೇಹದಲ್ಲಿ ಜೀವಕೋಶಗಳ ಬದಲಾವ ಣೆಯ ಕಾರಣದಿಂದ ಕ್ಯಾನ್ಸರ್ ತರುವ ಸಾಧ್ಯತೆ ಇರುತ್ತದೆ.ವಿಶ್ವದಾದ್ಯಂತ 1/3 ರಷ್ಟು ಕ್ಯಾನ್ಸರ್ ನಿಂದ ಉಂಟಾ ಗುವ ಸಾವುಗಳನ್ನು ಈ ರೀತಿಯ ಸಾಮಾನ್ಯವಾಗಿ ಗೊತ್ತಿರುವ ತೊಂದರೆಗಳಿಂದ ಕಾಪಾಡಿಕೊಳ್ಳುವುದರ ಮೂಲಕ ತಡೆಯಬಹುದಾಗಿದೆ.”

Related Post

Leave a Comment