ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ, ಧಾರ್ಮಿಕ ಹಿನ್ನೆಲೆಯನ್ನು ಪಡೆದ ಮಾಸ ಎಂದರೆ ಕಾರ್ತಿಕ ಮಾಸ . ಶಿವ ಹಾಗೂ ವಿಷ್ಣುವಿನ ಆರಾಧನೆಯನ್ನು ಮಾಡಲು ಪ್ರಶಸ್ತವಾದ ಈ ಮಾಸದಲ್ಲಿ ಕಾರ್ತಿಕ ದೀಪಾರಾಧನೆಯು ನಡೆಯುವುದು ಇನ್ನೊಂದು ವಿಶೇಷ. ಕಾರ್ತಿಕ ಮಾಸವು ಅಂತ್ಯಗೊಂಡು ಮಾರ್ಗಶಿರ ಮಾಸವು ಆರಂಭವಾಗುವ ದಿನ ಮಾರ್ಗಶಿರ ಅಮಾವಾಸ್ಯೆ. ನವೆಂಬರ್ 23 ಬುಧವಾರ ಬೆಳಗ್ಗೆ 6:54 ನಿಮಿಷಕ್ಕೆ ಪ್ರಾರಂಭವಾಗುತ್ತದೆ ಹಾಗು ನವೆಂಬರ್ 24ನೇ ತಾರೀಕು ಗುರುವಾರ ಬೆಳಗಿನ ಜವಾ 4:27 ನಿಮಿಷಕ್ಕೆ ಮುಕ್ತಯ ಆಗುತ್ತದೆ. ಹಾಗಾಗಿ ಬುಧವಾರ ಮಾರ್ಗಶಿರ ಅಮಾವಾಸ್ಯೆ ಮಾಡುತ್ತಾರೆ.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ
ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಮಾರ್ಗಶಿರ ಅಮಾವಾಸ್ಯೆ-ಕೃಷ್ಣಪಕ್ಷದ ಮಾರ್ಗಶಿರ ಮಾಸದಲ್ಲಿ ಬರುವ ಈ ಅಮಾವಾಸ್ಯೆಯು ಅಗ್ರಹಾಯನ ಅಮಾವಾಸ್ಯೆ ಎಂದೂ ಕರೆಯಲ್ಪಡುತ್ತದೆ. ಈ ದಿನ ಪಿತೃತರ್ಪಣ, ಪವಿತ್ರ ಸ್ನಾನ ಹಾಗೂ ದಾನಧರ್ಮಾದಿಗಳನ್ನು ಮುಖ್ಯವಾಗಿ ಮಾಡುವುದು ಶ್ರೇಯಸ್ಕರವಾಗಿದೆ. ಈ ದಿನ ಭಗವಾನ್ ವಿಷ್ಣು ಹಾಗೂ ಮಹಾಲಕ್ಷ್ಮೀಯನ್ನೂ ಪೂಜಿಸಿದರೆ ತುಂಬಾ ಒಳ್ಳೆಯದು.
ದರ್ಶ ಅಮಾವಾಸ್ಯೆ-ಮಾರ್ಗಶಿರ ಅಮಾವಾಸ್ಯೆಯನ್ನು ದರ್ಶ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಪಿತೃಪೂಜೆಗೆ ಪ್ರಶಸ್ತವಾದ ಈ ದಿನ ಯಾರು ಪಿತೃ ಪೂಜೆಯನ್ನು ಮಾಡುತ್ತಾರೋ ಅವರ ಪಿತೃಗಳಿಗೂ ಹಾಗೂ ಪೂಜೆಯನ್ನು ಮಾಡುವವರಿಗೂ ಶುಭವಾಗಲಿದೆ. ಮೊಸರನ್ನ ಮಾಡಿ ನೈವೇದ್ಯ ಮಾಡಬೇಕು. ನಂತರ ಅದನ್ನು ಕಾಗೆಗಳಿಗೆ ನೀಡಬೇಕು. ಈ ದಿನ ಮಾಡುವಂತಹ ಪೂಜಾ ವ್ರತ ವಿಧಾನ ಹೀಗಿರಲಿ
ಪಿತೃ ಪೂಜಾ ವಿಧಾನ-ಮುಂಜಾನೆ ಬೇಗ ಎದ್ದು ಪವಿತ್ರವಾದ ನದಿಯಲ್ಲಿ ಸ್ನಾನವನ್ನು ಮಾಡಿ, ತಿಲ ತರ್ಪಣ ಅಂದರೆ ಹರಿಯುವ ನೀರಿನಲ್ಲಿ ಕಪ್ಪು ಎಳ್ಳನ್ನು ಹಾಕಬೇಕು. ನಂತರ ಗಾಯತ್ರಿ ಮಂತ್ರ ಅಥವಾ ನಾರಾಯಣನ ನಾಮವನ್ನು ಸ್ಮರಿಸಬೇಕು. ನಂತರ ಸೂರ್ಯನಿಗೆ ಆರ್ಘ್ಯವನ್ನು ಅರ್ಪಿಸಬೇಕು. ಕುಟುಂಬದ ಸಂಪ್ರದಾಯದಂತೆ ಶಿವ ಅಥವಾ ವಿಷ್ಣುವನ್ನು ಪೂಜಿಸಬೇಕು. ನಂತರ ನದಿಯ ದಡದಲ್ಲಿ ಪಿತೃಗಳ ಮೋಕ್ಷಕ್ಕಾಗಿ ಪಿತೃಪೂಜೆಯನ್ನು ಮಾಡಬೇಕು. ಮಾರ್ಗಶಿರ ಅಮಾವಾಸ್ಯೆ ವೃತವನ್ನು ಮಾಡುವವರು ನೀರನ್ನೂ ಕುಡಿಯಬಾರದು ಎನ್ನುವ ನಿಯಮವಿದೆ. ಪೂಜೆಯ ನಂತರ ಅಗತ್ಯವಿರುವ ಬ್ರಾಹ್ಮಣರಿಗೆ ಆಹಾರ, ಬಟ್ಟೆ ಅಥವಾ ಧಾನ್ಯಗಳನ್ನು ದಾನ ಮಾಡಬೇಕು.
ಸತ್ಯನಾರಾಯಣ ಪೂಜೆ-ಪೂರ್ವಜರ ಆಶೀರ್ವಾದವನ್ನು ಪಡೆಯಲು ಹಾಗೂ ಜೀವನದಲ್ಲಿ ಬರುವ ಕಷ್ಟಗಳನ್ನು ನಿವಾರಿಸಲು ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಇದರಂತೆ ಈ ದಿನ ಸತ್ಯನಾರಾಯಣ ಪೂಜೆಯನ್ನು ಮಾಡುವುದು ತುಂಬಾ ಒಳ್ಳೆಯದು. ಲಕ್ಷ್ಮೀಸಹಿತ ವಿಷ್ಣುವಿನ ವಿಗ್ರಹವನ್ನು ಸ್ಥಾಪಿಸಿ, ಕುಟುಂಬದ ಪೂಜಾ ವಿಧಿಯ ಪ್ರಕಾರ ಪೂಜೆಯನ್ನು ಸಲ್ಲಿಸಿ, ನೈವೇದ್ಯವನ್ನು ಅರ್ಪಿಸಿ, ನಂತರ ಸತ್ಯನಾರಾಯಣ ಕಥೆಯನ್ನು ಓದುವ ಮೂಲಕ ಪೂಜೆಯನ್ನು ಸಲ್ಲಿಸಬೇಕು, ಕಥಾಶ್ರವಣದ ನಂತರ ಮಂಗಳಾರತಿಯನ್ನು ಮಾಡಿ ಪೂಜೆಯನ್ನು ಅಂತ್ಯಗೊಳಿಸಿ. ಬಂದಂತಹ ಭಕ್ತರಿಗೆ ಪ್ರಸಾದವನ್ನು ನೀಡಬೇಕು.
ಮಾರ್ಗಶಿರ ಅಮಾವಾಸ್ಯೆಯ ಮಹತ್ವ-ಪ್ರತಿ ಅಮಾವಾಸ್ಯೆಯಂದೂ ಪಿತೃತರ್ಪಣ ನೀಡುವಂತೆ ಮಾರ್ಗಶಿರ ಅಮಾವಾಸ್ಯೆಯಂದೂ ಪಿತೃತರ್ಪಣ ನೀಡಲಾಗುತ್ತದೆ. ಆದರೆ ಈ ದರ್ಶ ಅಮಾವಾಸ್ಯೆಯಂದು ಮಾಡುವಂತಹ ಧಾರ್ಮಿಕ ವಿಧಿಗಳು ಅತ್ಯಂತ ಶುಭವಾಗಿದ್ದು, ಭಕ್ತರಿಗೂ ಹಾಗೂ ಪೂರ್ವಜರಿಗೂ ಪ್ರತಿಫಲವನ್ನು ನೀಡುತ್ತದೆ. ಪಿಂಡ ಪ್ರದಾನ ಹಾಗೂ ತಿಲ ತರ್ಪಣವು ಗತಿಸಿದ ಪೂರ್ವಜರ ಆತ್ಮಕ್ಕೆ ಮೋಕ್ಷ ಹಾಗೂ ಶಾಂತಿಯನ್ನು ನೀಡಲು ಸಹಾಯ ಮಾಡುತ್ತದೆ. ಅಲ್ಲದೇ ಮಾರ್ಗಶಿರ ಅಮಾವಾಸ್ಯೆಯಂದು ಮಾಡುವ ಉಪವಾಸ ಎಲ್ಲಾ ಪಾಪಗಳನ್ನೂ ತೊಳೆಯುವುದು ಎನ್ನಲಾಗುತ್ತದೆ. ಹಾಗೂ ಭಕ್ತರ ಜೀವನದಲ್ಲಿ ಶಾಂತಿ ಹಾಗೂ ಸಮೃದ್ಧಿಯನ್ನು ತರುತ್ತದೆ.