ಸಾಮಾನ್ಯವಾಗಿ ಕೆಂಪು ಅಥವಾ ಕಪ್ಪು ಬಣ್ಣಗಳಲ್ಲಿ ಕಾಕೆ ಹಣ್ಣುಗಳನ್ನು ಕಾಣಬಹುದು. ಈ ಹಣ್ಣು ಸಿಹಿ ಮತ್ತು ಹುಳಿಯಿಂದ ಕೂಡಿರುತ್ತದೆ. ಇವುಗಳಲ್ಲಿ ಕೆಂಪು ಹಣ್ಣು ಬಿಡುವ ಸಸ್ಯ ಔಷಧಿ ಸಸ್ಯವಾಗಿದೆ.
ಕಾಕಮಾಚಿ-ಕಾಗೆ ಸೊಪ್ಪು, ಅಥವಾ ಕಾಕಿ ಹಣ್ಣಿನ ಹೆಸರನ್ನು ಕೇಳಿಯೇ ಇರುತ್ತೀರಿ. ಚಿಕ್ಕ ಗಿಡ. ಗಿಡದ ತುಂಬ ಕಪ್ಪು ಬಣ್ಣದ ಹಣ್ಣುಗಳು. ಸಾಮಾನ್ಯವಾಗಿ ಮಲೆನಾಡಿನ ಕಡೆ ಹೆಚ್ಚು ಕಂಡುಬರುವ ಸಸ್ಯವಿದು. ಕೆಲವು ಕಡೆ ಸಾಮಾನ್ಯವಾಗಿ ಕಂಡು ಬಂದರೆ ಇನ್ನು ಕೆಲವೆಡೆ ಸಾಗುವಳಿಯಾಗಿ ಬೆಳೆಯುತ್ತಾರೆ. ಹಾಗಾದರೆ ಕಾಗೆ ಸೊಪ್ಪು ಅಥವಾ ಕಾಕಿ ಹಣ್ಣಿನ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.
ಸಾಮಾನ್ಯವಾಗಿ ಕೆಂಪು ಅಥವಾ ಕಪ್ಪು ಬಣ್ಣಗಳಲ್ಲಿ ಕಾಕೆ ಹಣ್ಣುಗಳನ್ನು ಕಾಣಬಹುದು. ಈ ಹಣ್ಣು ಸಿಹಿ ಮತ್ತು ಹುಳಿಯಿಂದ ಕೂಡಿರುತ್ತದೆ. ಇವುಗಳಲ್ಲಿ ಕೆಂಪು ಹಣ್ಣು ಬಿಡುವ ಸಸ್ಯ ಔಷಧಿ ಸಸ್ಯವಾಗಿದೆ. ಈ ಸಸ್ಯದ ಎಲೆ ಮತ್ತು ಕಾಂಡವನ್ನು ಅಡುಗೆ ತಯಾರಿಸಲು ಬಳಸುತ್ತಾರೆ. ವಿಟಮಿನ್ ಸಿ ಮತ್ತು ಬಿ ಅಂಶವನ್ನು ಹೊಂದಿರುವ ಈ ಸಸ್ಯ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಹಾಯಕ.
ಕಫ ಕರಗಿಸುತ್ತದೆ–ಶೀತ, ಕಫ, ಜ್ವರಗಳಂತಹ ಸಮಸ್ಯೆಗಳು ಕಾಡುವುದು ಸಾಮಾನ್ಯ. ಕಫವನ್ನು ಕರಗಿಸಲು ಈ ಸಸ್ಯ ಸಹಾಯ ಮಾಡುತ್ತದೆ. ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇದ್ದಾಗ ಸಸ್ಯದ ಎಲೆಗಳಿಂದ ತಂಬುಳಿ ಮಾಡಿ ಊಟದ ಜತೆ ಸೇವಿಸಲಾಗುತ್ತದೆ. ಇದರಿಂದ ಸಾಮಾನ್ಯ ಶೀತ, ಜ್ವರ ಮತ್ತು ಕಫದಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ದೇಹದ ಸದೃಢತೆಯನ್ನು ಹೆಚ್ಚಿಸಿಕೊಳ್ಳಬಹುದು.
ತುರಿಕೆಯಿದ ಮುಕ್ತಿ–ತುರಿಕೆ ಎಲೆಯನ್ನು ತಾಗಿಸಿಕೊಂಡಾಗ ಅಥವಾ ದೇಹದಲ್ಲಿನ ಧೂಳು ಕಣಗಳಿಂದ ತುರಿಕೆ ಆಗುತ್ತಿರುತ್ತದೆ. ಕೆಲವರಿಗೆ ಅದು ಕಜ್ಜಿಯಾಗಿ ಪಡಿಣಮಿಸುತ್ತದೆ. ಕಾಗೆ ಸೊಪ್ಪಿನ ಎಲೆಗಳನ್ನು ಕೊಯ್ದು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಕುದಿಸಿ. ಆ ಬಿಸಿ ಎಣ್ಣೆಯನ್ನು ತುರಿಕೆಯಾದ ಜಾಗದಲ್ಲಿ ಅಥವಾ ಕಜ್ಜಿಯಾದ ಜಾಗದಲ್ಲಿ ಹಚ್ಚಿದರೆ ಕೆಲವೇ ಸಮಯಗಳೊಳಗೆ ತುರಿಕೆ ನಾಶವಾಗುತ್ತದೆ. ದೇಹದಲ್ಲಿನ ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯ ಮಾಡುತ್ತದೆ.
ರಕ್ತಸ್ರಾವ ಕಡಿಯಾಗುತ್ತದೆ–ದೇಹದ ಉಷ್ಟಾಂಶದ ತೀವ್ರತೆಯಿಂದಾಗಿ ಕೆಲವರಿಗೆ ಮೂಗಿನಲ್ಲಿ ಆಗಾಗ ರಕ್ತಸ್ರಾವ ಆಗುವುದನ್ನು ಕಾಣಬಹುದು. ಹೀಗಿರುವಾಗ ಕಾಕಿ ಸೊಪ್ಪಿನ ಸೇವನೆಯಿಂದ ಕಡಿಮೆ ಮಾಡಿಕೊಳ್ಳಬಹುದು. ಸೊಪ್ಪಿಗೆ ಜೇನುತುಪ್ಪ ಬೆರೆಸಿ ಸೇವನೆ ಮಾಡುವುದರಿಂದ ರಕ್ತದ್ರಾವ ಕಡಿಮೆಯಾಗುತ್ತದೆ. ಹಾಗೆಯೇ ಉರಿಮೂತ್ರ, ಮಲಬದ್ಧತೆ ಹಾಗೂ ಮೂಲವ್ಯಾಧಿಯಂತಹ ಸಮಸ್ಯೆಗೆ ಕಾಕಿ ಸೊಪ್ಪಿನ ಪಲ್ಯ ಮಾಡಿ ಸೇವನೆ ಮಾಡುತ್ತಾರೆ.