Benefits of drinking raw milk :ಎಲ್ಲರೂ ಹಾಲು ಕುಡಿಯುತ್ತಾರೆ. ಆದರೆ ಹೆಚ್ಚಿನ ಸಂದರ್ಭದಲ್ಲಿ ಕಾಸಿದ ಹಾಲನ್ನೇ ಎಲ್ಲರೂ ಕುಡಿಯುತ್ತಾರೆ ಆದರೆ ಹಸಿ ಹಾಲು ಕುಡಿದರೆ ಏನೆಲ್ಲಾ ಪ್ರಯೋಜನ ಇದೆ ನೋಡಿ.
ನಿಮ್ಮ ಬಾಯಲ್ಲಿ ಉಶ್ಣತೆ ಹೆಚ್ಚಾಗಿ ಗುಳ್ಳೆಗಳಾಗಿದ್ದರೆ ನೀವು ಹಸಿ ಹಾಲನ್ನು ಕುಡಿಯುವುದರಿಂದ ಅದು ಗುಣವಾಗುತ್ತದೆ. ಆದ್ದರಿಂದ ಹಸಿ ಹಾಲು ಬಾಯಿಯ ಆರೋಗ್ಯಕ್ಕೆ ಸಹಕಾರಿ.
ಹಸಿ ಹಾಲನ್ನು ಕರೆದ ತಕ್ಷಣ ಅಂದರೆ ಅದನ್ನು ಪಾಶ್ಚರೀಕರಿಸದೇ ಅಂದರೆ ಫ್ರಿಜ್ನಲ್ಲಿ ಇಡುವುದಕ್ಕಿಂತ ಮುಂಚಿತವಾಗಿ ಕುಡಿಯಬೇಕು. ಹಾಗೆ ಮಾಡಿದರೆ ನಿಮಗೆ ಆರೋಗ್ಯ ವೃದ್ಧಿಸುವಲ್ಲಿ ಹಾಲು ಸಹಕಾರಿಯಾಗಿರುತ್ತದೆ.
ಎಲ್ಲಾ ವಯಸ್ಸಿನ ಜನರಲ್ಲಿ ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ಯಾಲ್ಸಿಯಂ ಅವಶ್ಯಕವಾಗಿದೆ ಅದು ಹಸಿ ಹಾಲಿನಲ್ಲಿ ಹೇರಳವಾಗಿ ಲಭ್ಯವಿದೆ. ಆದ್ದರಿಂದ ನೀವು ಹಸಿ ಹಾಲು ಕುಡಿಯುವುದು ಉತ್ತಮ.
ಹಸಿ ಹಾಲು ಕುಡಿಯುವುದರಿಂದ ನಿಮ್ಮ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ. ಆದರೆ ಅತಿಯಾದ ಹಸಿ ಹಾಲಿಸ ಸೇವನೆಯಿಂದ ತೊಂದರೆಗಳೇ ಹೆಚ್ಚು. ಮಿತವಾಗಿ ಸೇವಿಸುವುದು ಉತ್ತಮ.
ಹಾಲು ಪೊಟ್ಯಾಸಿಯಮ್ನ ಅತ್ಯುತ್ತಮ ಮೂಲವಾಗಿದೆ, ಇದು ಕಡಿಮೆ ರಕ್ತದೊತ್ತಡ ಮತ್ತು ಒಟ್ಟಾರೆ ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ಉತ್ತಮ ಉತ್ಪನ್ನವಾಗಿದೆ.
ಹಾಲಿನಲ್ಲಿರುವ ವಿಟಮಿನ್ ಎ ಹೃದಯ, ಶ್ವಾಸಕೋಶಗಳು ಮತ್ತು ಮೂತ್ರಪಿಂಡಗಳು ಸೇರಿದಂತೆ ದೇಹದಾದ್ಯಂತ ಇರುವ ಹಲವಾರು ಅಂಗಗಳ ಆರೋಗ್ಯವನ್ನು ಕಾಪಾಡುತ್ತದೆ.