ಕಲರ್ ಹೋಗುವ ಬಟ್ಟೆಗಳಿಗೆ ಹೀಗೆ ಮಾಡಿದರೆ ಖಂಡಿತ ಬಟ್ಟೆ ಹರಿದು ಹೋಗುವವರೆಗೂ ಬಣ್ಣ ಬಿಡೋಲ್ಲ!

ಕೆಲವೊಂದು ಬಟ್ಟೆಗಳು ಎರಡು ಮೂರು ಬಾರಿ ಬಟ್ಟೆ ತೊಳೆದಾಗ ಅದರಲ್ಲಿ ಕಲರ್ ಹೋಗುವುದು ನಿಂತುಹೋಗುತ್ತದೆ. ಅದರೆ ಕೆಲವೊಂದು ಕಾಟನ್ ಬಟ್ಟೆಗಳು ಅಥವಾ ಸೀರೆಗಳು ಪ್ರತಿದಿನ ತೊಳೆದರೂ ಸಹ ಕಲರ್ ಹೋಗುತ್ತಾಲೇ ಇರುತ್ತದೆ. ಇದರಿಂದ ಬಟ್ಟೆಗಳು ಹಳೆಯದಾಗಿ ಕಾಣಿಸುತ್ತದೆ ಹಾಗು ಡಲ್ ಆಗಿ ಕಾಣಿಸುತ್ತದೆ. ಅವುಗಳ ಕಲರ್ ಕೂಡ ಫೇಡ್ ಆಗುತ್ತದೆ. ಆದ್ದರಿಂದ ಹೊಸ ಬಟ್ಟೆ ವಾಶ್ ಮಾಡುವುದಕ್ಕೂ ಮುಂಚೆ ಕಲರ್ ಅನ್ನು ಫಿಕ್ಸ್ ಮಾಡಬೇಕು.ಹಾಗಾಗಿ ಬಟ್ಟೆ ಕಲರ್ ಫಿಕ್ಸ್ ಮಾಡುವುದಕ್ಕೆ ಈ ಮೂರು ಉಪಾಯಗಳನ್ನು ತಿಳಿಸಿಕೊಡುತ್ತೇವೆ.

ಮೊದಲನೇ ಉಪಾಯ ಕಾಲು ಬಕೆಟ್ ನೀರು ತೆಗೆದುಕೊಂಡು ಮೂರು ಚಮಚ ಉಪ್ಪು ಹಾಕಿ ಬಟ್ಟೆಯನ್ನು ನೆನಸಿ ಇಡಬೇಕು. ನಂತರ ಬೇರೆ ನೀರಿನಿಂದ ವಾಶ್ ಮಾಡಿದಾಗ ಕಲರ್ ಹೋಗುತ್ತದೆ. ಅದರೆ ನಂತರದಲ್ಲಿ ಹೊಸ ಬಟ್ಟೆಯ ಕಲರ್ ಯಾವುದೇ ಕಾರಣಕ್ಕೂ ಹೋಗುವುದಿಲ್ಲ.

ಇನ್ನು ಎರಡನೇ ಉಪಾಯ ಕಾಲು ಬಕೆಟ್ ನೀರು ತೆಗೆದುಕೊಂಡು ಅದಕ್ಕೆ ಎರಡು ಚಮಚ ಉಪ್ಪು ಹಾಗು 1 ಚಮಚ ವಿನೆಗರ್ ಬೆರೆಸಿ ಹೊಸ ಬಟ್ಟೆಯನ್ನು ನೆನಸಿ ಇಡಬೇಕು.15 ನಿಮಿಷದ ಬಳಿಕ ಬೇರೆ ನೀರಿನಿಂದ ವಾಶ್ ಮಾಡಿದರೆ ನಿಮ್ಮ ಬಟ್ಟೆ ಕಲರ್ ಫಿಕ್ಸ್ ಆಗಿರುತ್ತದೆ.

ಇನ್ನು ಮೂರನೇ ಉಪಾಯ ಕಾಲು ಬಕೆಟ್ ನೀರು ತೆಗೆದುಕೊಂಡು ಅದಕ್ಕೆ ಎರಡು ಚಮಚ ಉಪ್ಪು ಹಾಗು 1 ಚಮಚ ಪಟ್ಟಕ ಬೆರೆಸಿ ಹೊಸ ಬಟ್ಟೆಯನ್ನು ನೆನಸಿ ಇಡಬೇಕು.15 ನಿಮಿಷದ ಬಳಿಕ ಬೇರೆ ನೀರಿನಿಂದ ವಾಶ್ ಮಾಡಿದರೆ ನಿಮ್ಮ ಬಟ್ಟೆ ಕಲರ್ ಫಿಕ್ಸ್ ಆಗಿರುತ್ತದೆ.ಇದರಲ್ಲಿ ನೀವು ಯಾವುದಾದರು ಒಂದು ಮೆಥಡ್ ಅನ್ನು ಫಾಲೋ ಮಾಡಿದರೆ ಸಾಕು.

Related Post

Leave a Comment