ಜುಲೈ ತಿಂಗಳು ಯಾವ ರಾಶಿಗೆ ಶುಭ!

ಮೇಷರಾಶಿ;ಈ ರಾಶಿಯವರಿಗೆ ಕೆಲಸದ ವಿಚಾರದಲ್ಲಿ ಸ್ವಲ್ಪ ಗೊಂದಲ ಕಾಡಬಹುದು. ಕೆಲಸವನ್ನು ಬಿಡುವ ಯೋಚನೆ ಮಾಡುವಿರಿ.ಪರಿಹಾರವಾಗಿ ಇನ್ನೇನು ಮಳೆಗಾಲ ಪ್ರಾರಂಭವಾಗುತ್ತಿದೆ ಹೀಗಾಗಿ ವೃದ್ಧಾಶ್ರಮಗಳಿಗೆ ಬೆಡ್ ಶೀಟ್ ಗಳನ್ನು ದಾನವಾಗಿ ನೀಡಿ.

ವೃಷಭ ರಾಶಿ;ಈ ರಾಶಿಯವರಿಗೆ ಬುದ್ಧಿವಂತಿಕೆ ಚೆನ್ನಾಗಿ ಕೆಲಸ ಮಾಡುತ್ತದೆ.ಬುದ್ಧಿ ಚುರುಕಾಗುತ್ತದೆ,ಅತಿ ಬುದ್ಧಿವಂತಿಕೆಯಿಂದ ನಷ್ಟ ಹೊಂದಬಹುದು ಹಾಗಾಗಿ ಸಾಮಾನ್ಯ ಬುದ್ಧಿವಂತಿಕೆಯಿಂದ ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬಹುದು.
ಜುಲೈ ತಿಂಗಳ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ 2 ಒಣ ಖರ್ಜೂರವನ್ನು ತಿನ್ನಿ.

ಮಿಥುನ ರಾಶಿ;ಈ ರಾಶಿಯವರು ಕೆಲಸದ ಬದಲಾವಣೆ ಬಗ್ಗೆ ಚಿಂತನೆಯಲ್ಲಿರುತ್ತಿತ್ತಾರೆ ಅಥವಾ ಬೇರೆ ಕೆಲಸದ ಬಗ್ಗೆ ಯೋಚಿಸುತ್ತಿರುತ್ತಾರೆ.ಈ ರೀತಿಯ ಚಿಂತೆಗಳನ್ನು ಬಿಟ್ಟು ಇರುವ ಕೆಲಸವನ್ನು ಶ್ರದ್ಧೆಯಿಂದ ಮಾಡಿ. ಪರಿಹಾರವಾಗಿ ವೃದ್ಧಾಶ್ರಮಗಳಲ್ಲಿ ಅನ್ನದಾಸೋಹಕ್ಕೆ ಸಹಾಯ ಮಾಡಿ.

ಕಟಕ ರಾಶಿ;ಈ ರಾಶಿಯವರಿಗೆ ಆತ್ಮವಿಶ್ವಾಸದ ಕೊರತೆ ಕಾಣುತ್ತಿದೆ ಹೀಗಾಗಿ ಯಾವುದೇ ಕೆಲಸದಲ್ಲೂ ಮುಂದುವರಿಯಲು ಸಾಧ್ಯವಾಗುವುದಿಲ್ಲ. ಪರಿಹಾರವಾಗಿ ನಿಮ್ಮ ಕೈಲಾದಷ್ಟು ಕಡಲೆಕಾಳನ್ನು ದೇವಸ್ಥಾನಕ್ಕೆ ದಾನವಾಗಿ ನೀಡಿ.

ಸಿಂಹ ರಾಶಿ:ಸ್ವಲ್ಪ ಕೋಪ ಜಾಸ್ತಿಯಾಗಿರುವುದರಿಂದ ಮಾಡುವ ಕೆಲಸದ ಮೇಲೆ ಏಕಾಗ್ರತೆ ಕಡಿಮೆಯಾಗಬಹುದು. ಹಾಗಾಗಿ ಕೋಪವನ್ನು ನಿಯಂತ್ರಣದಲ್ಲಿಡಿ ಹಾಗೂ ಮಂಗಳವಾರ ಮತ್ತು ಶುಕ್ರವಾರ ದಂದು ಮಹಾಲಕ್ಷ್ಮೀ ದೇವಿಗೆ ಮಲ್ಲಿಗೆ ಹೂವನ್ನು ಅರ್ಪಿಸಿ.

ಕನ್ಯಾ ರಾಶಿ:ಈ ರಾಶಿಯವರಿಗೆ ಪ್ರತಿ ವಿಚಾರದಲ್ಲೂ ಅನೇಕ ರೀತಿಯ ಗೊಂದಲಗಳು ಕಾಡುತ್ತದೆ ಹಾಗಾಗಿ ಇವರ ಕೆಲಸ ಕಾರ್ಯಗಳು ನಿಂತು ಹೋಗುತ್ತವೆ.ಇದಕ್ಕೆ ಪರಿಹಾರವಾಗಿ 2 ಕೆಜಿ ಅಕ್ಕಿ ಮತ್ತು 1 ಕೆಜಿ ಬೆಲ್ಲವನ್ನು ಶಿವನ ದೇವಸ್ಥಾನಕ್ಕೆ ನೀಡಿ.

ತುಲಾ ರಾಶಿ:ಈ ರಾಶಿಯವರು ಮಾಡುವ ಪ್ರತಿಯೊಂದು ಕೆಲಸವೂ ಅರ್ದಂಬರ್ಧ ವಾಗುತ್ತದೆ. ಒಂದು ರೀತಿಯ ಗೊಂದಲದ ವಾತಾವರಣ ಸೃಷ್ಟಿಯಾಗುತ್ತದೆ. ಮಾನಸಿಕವಾಗಿ ನೆಮ್ಮದಿ ಕೆಡುತ್ತದೆ.ಇದಕ್ಕೆ ಪರಿಹಾರವಾಗಿ ಪ್ರತಿದಿನ ಖಾಲಿಹೊಟ್ಟೆಯಲ್ಲಿ ಒಣ ದ್ರಾಕ್ಷಿಯನ್ನು ತಿನ್ನಿ ಹಾಗೂ ಚಿಕ್ಕ ಮಕ್ಕಳಿಗೆ ಒಣ ದ್ರಾಕ್ಷಿ ನೀಡಿ.

ವೃಶ್ಚಿಕ ರಾಶಿ:ಈ ರಾಶಿಯವರಿಗೆ ಕೈಗೆ ಬಂದ ತುತ್ತು ಬಾಯಿಗೆ ಸಿಗುವುದಿಲ್ಲ.ಯಾವುದೇ ಕೆಲಸವು ಪೂರ್ತಿ ಆಯಿತು ಎಂದುಕೊಳ್ಳುವ ವೇಳೆಗೆ ಪೂರ್ತಿಯಾಗಿ ನಿಂತುಹೋಗುತ್ತದೆ.ಇವರು ಪರಿಹಾರಕ್ಕಾಗಿ ಬೂದು ಕುಂಬಳ ಕಾಯಿಯನ್ನು ದಾನವಾಗಿ ನೀಡಿ.

ಧನಸ್ಸು ರಾಶಿ:ಈ ರಾಶಿಯವರಿಗೆ ಈ ತಿಂಗಳಿನಲ್ಲಿ ಆರ್ಥಿಕ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತದೆ.ಅನವಶ್ಯಕ ಖರ್ಚು ಹೆಚ್ಚಾಗುತ್ತದೆ.ಜುಲೈ ತಿಂಗಳ ಪ್ರತಿ ಶುಕ್ರವಾರ ಮತ್ತು ಮಂಗಳವಾರ ಆಲೂಗಡ್ಡೆಗೆ ಉಪ್ಪು ಹಾಕಿ ಬೇಯಿಸಿ ಹಸುಗಳಿಗೆ ನೀಡುವುದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ.

ಮಕರ ರಾಶಿ:ಹಣದ ಸಮಸ್ಯೆ ಕಾರಣಗಳಿಂದ ಲೋನ್ ಅಥವಾ ಸಾಲವನ್ನು ಪಡೆಯುವ ಹಂಬಲದಲ್ಲಿ ಇರುವಿರಿ.ಅಂದುಕೊಂಡಂತೆ ಆಗದಿರುವ ಕಾರಣ ಸ್ವಲ್ಪ ಸಮಸ್ಯೆಗಳು ಎದುರಾಗುತ್ತವೆ. ಪರಿಹಾರವಾಗಿ 2 ಕೆಜಿ ಅಕ್ಕಿ ಮತ್ತು 1ಕೆಜಿ ಬೆಲ್ಲ ವನ್ನು ಶಿವನ ದೇವಾಲಯಕ್ಕೆ ಅಥವಾ ಬಡವರಿಗೆ ದಾನವಾಗಿ ನೀಡಿ.

ಕುಂಭ ರಾಶಿ:ಏನೇ ಮಾಡಿದರೂ ಮಾನಸಿಕವಾಗಿ ನೆಮ್ಮದಿ ಸಿಗುವುದಿಲ್ಲ,ಖಿನ್ನತೆಗೆ ಒಳಗಾಗುವಿರಿ.ಎಲ್ಲಾ ಸಮಸ್ಯೆ ನಿಮಗೆ ಬಂದಿದೆ ಎಂಬಂತಹ ಮನೋಭಾವ ಉಂಟಾಗುತ್ತದೆ. ಪರಿಹಾರವಾಗಿ ಗುರುವಾರ ಅನ್ನದಾಸೋಹಕ್ಕೆ ಸಹಾಯ ಮಾಡಿ.

ಮೀನರಾಶಿ:ಈ ರಾಶಿಯವರಿಗೆ ಆರೋಗ್ಯದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ,ಆಸ್ಪತ್ರೆ ಗಳಿಗೆ ಹಣದ ಖರ್ಚು ಹೆಚ್ಚಾಗುತ್ತದೆ.
ಹಾಗಾಗಿ ಪ್ರತಿದಿನ ಯೋಗಾದಿ ಧ್ಯಾನವನ್ನು ಮಾಡಿ.ಜುಲೈ ತಿಂಗಳ ಪ್ರತಿ ಸೋಮವಾರ ಅಥವಾ ಗುರುವಾರ 1 ಕಟ್ಟು ಮೂಲಂಗಿಯನ್ನು ಸೊಪ್ಪಿನ ಸಮೇತವಾಗಿ ಮೊಲಗಳಿಗೆ ತಿನಿಸಿ ಅಥವಾ ಬಡವರಿಗೆ ದಾನವಾಗಿ ನೀಡಿ. ಧನ್ಯವಾದಗಳು

Related Post

Leave a Comment