ಧನಸ್ಸು ರಾಶಿ 2024 ವರ್ಷ ಭವಿಷ್ಯ!

ಧನಸ್ಸು ರಾಶಿಗೆ 2024 ಹೊಸ ವರ್ಷದಲ್ಲಿ ಕೌಟುಂಬಿಕ ಜೀವನ, ವೈವಾಹಿಕ ಜೀವನ, ಪ್ರೇಮ, ಶಿಕ್ಷಣ, ಉದ್ಯೋಗ, ಆರೋಗ್ಯ, ವ್ಯಾಪಾರ, ವೃತ್ತಿ, ಆರ್ಥಿಕ ಸ್ಥಿತಿ, ಸಂಪತ್ತು ಮತ್ತು ಲಾಭಗಳು, ಮಕ್ಕಳ ಭವಿಷ್ಯ, ವಾಹನ ಮತ್ತು ಆಸ್ತಿ ಸಂಬಂಧಿತ ಮಾಹಿತಿಯನ್ನು ಜ್ಯೋತಿಷ್ಯದ ಮೂಲಕ ತಿಳಿಯಬಹುದು. ಈ ಬಗ್ಗೆ ಮಾಹಿತಿ ಇಲ್ಲಿದೆ.

ಆದಾಯ

ಈ ವರ್ಷ ಧನಸ್ಸು ರಾಶಿಯವರಿಗೆ ಆದಾಯ 11 ಖರ್ಚು 5 ಗೋಚರಿಸುತ್ತಿದೆ. ಈ ಬಾರಿ ಆದಾಯ ಚೆನ್ನಾಗಿ ಇರುವುದರಿಂದ ಆರ್ಥಿಕವಾಗಿ ಉತ್ತಮವಾಗಿ ಇರುತ್ತಿರಿ.ಆರ್ಥಿಕವಾಗಿ ನಿಮಗೆ ಯಾವುದೇ ರೀತಿ ಸಮಸ್ಸೆ ಬಂದರು ಸಹ ಅದನ್ನು ನೀವು ತುಂಬಾನೇ ಸರಳವಾಗಿ ನಿಭಾಯಿಸುತ್ತಿರಿ. ಸಮಾಜದಲ್ಲಿ ಕೀರ್ತಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಗುರು ಶನಿ ಭಗವಂತನ ಸಂಚಾರದಿಂದ ಈ ವರ್ಷದಲ್ಲಿ ಒಳ್ಳೆಯ ಫಲಿತಾಂಶವನ್ನು ನೋಡುತ್ತೀರಿ. ಒಳ್ಳೆಯ ಸೌಕರ್ಯ ಐಷಾರಾಮಿ ಜೀವನವನ್ನು ಸಹ ನೀವು ಅನುಭವಿಸುತ್ತಿರಿ. ಸಂತಾನ ಭಾಗ್ಯ ಸಾಧ್ಯತೆ ಹೆಚ್ಚಾಗಿ ಇರುತ್ತದೆ.

ಗುರು ಸಂಚಾರ ಮೇ ತಿಂಗಳಿನಲ್ಲಿ 6ನೇ ಮನೆಗೆ ಪ್ರವೇಶ ಮಾಡಿದಾಗ ನೀವು ಇನ್ನು ಒಳ್ಳೆಯ ಫಲಿತಾಂಶವನ್ನು ನೀವು ಕಾಣಬಹುದು. ಸಹಜವಾಗಿ ಗುರು ಒಳ್ಳೆಯ ಸ್ಥಾನದಲ್ಲಿ ಇದ್ದಾಗ ಒಳ್ಳೆಯ ಸ್ಥಾನ ಮಾನ ಹೆಚ್ಚಾಗುತ್ತದೆ. ಈ ವರ್ಷ ಅರೋಗ್ಯ ಉತ್ತಮವಾಗಿ ಇರುತ್ತದೆ.

ಕುಟುಂಬದಲ್ಲಿ ಯಾವುದೇ ರೀತಿಯ ಕಲಹಗಳು ಬರುವುದಿಲ್ಲ. ಸಂತೋಷದಿಂದ ಸಮಯವನ್ನು ನೀವು ಕಳೆಯುತ್ತಿರಿ. ಮನೆಯವರ ಪೂರ್ತಿ ಸಹಾಯ ಸಹಕಾರ ನಿಮಗೆ ಸಿಗುತ್ತದೆ. ಕುಟುಂಬದಲ್ಲಿ ಶುಭಕಾರ್ಯಗಳು ನಡೆಯುತ್ತವೆ. ಪುಣ್ಯ ಕ್ಷೇತ್ರದಲ್ಲಿ ದರ್ಶನವನ್ನು ನೀವು ಪಡೆಯುತ್ತಿರಿ.

ಈ ವರ್ಷ ಅದ್ಬುತ ಬದಲಾವಣೆಯನ್ನು ನೀವು ಕಾಣುತ್ತಿರಿ ಮತ್ತು ಕುಟುಂಬದವರ ಬೆಂಬಲ ನಿಮಗೆ ಸಿಗುತ್ತದೆ.ಏಪ್ರಿಲ್ ಮತ್ತು ಆಗಸ್ಟ್ ತಿಂಗಳಿನಲ್ಲಿ ಸ್ವಲ್ಪ ಹುಷಾರಾಗಿ ಇರುವುದು ಒಳ್ಳೆಯದು. ಹಳೆಯ ಸಾಲದಿಂದ ನೀವು ವಿಮುಕ್ತಿಯನ್ನು ಹೊಂದುತ್ತಿರಿ.ಮೂರನೇ ಮನೆಯಲ್ಲಿ ಶನಿ ಸಂಚಾರ ಮಾಡುವುದರಿಂದ ನಿಮಗೆ ಧೈರ್ಯ ಹೆಚ್ಚಾಗುತ್ತದೆ ಮತ್ತು ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ಈ ವರ್ಷ ಆಸೆಗಳು ಈಡೇರುತ್ತವೆ.

ಅನೇಕ ಮಾರ್ಗದಿಂದ ನಿಮಗೆ ಆದಾಯ ಹೆಚ್ಚಾಗುತ್ತದೆ. ಆದಷ್ಟು ಉಳಿತಾಯ ಮಾಡುವುದನ್ನು ಮರೆಯಬೇಡಿ. ಹೊಸ ಮನೆ ಖರೀದಿ ಮಾಡುವ ಯೋಗ ನಿಮಗೆ ಇದೆ.ಕೊಟ್ಟ ಹಣ ವಾಪಾಸ್ ನಿಮ್ಮ ಕೈ ಬಂದು ಸೇರುತ್ತದೆ. ಬೇರೆಯವರ ಹತ್ತಿರ ಮಾತನಾಡುವಗ ಸ್ವಲ್ಪ ಹುಷಾರಾಗಿ ಜಾಗ್ರತೆಯಿಂದ ಇರಬೇಕಾಗುತ್ತದೆ.

ಪರಿಹಾರ

ಪ್ರತಿ ಬುಧವಾರ ಗಣಪತಿಗೆ ಗರಿಕೆ ಹುಲ್ಲನ್ನು ಸಮರ್ಪಿಸಿ. ನೀವು ಗರಿಕೆ ಸಮರ್ಪಿಸುವುದರಿಂದ ವಿಘ್ನನಗಳು ದೂರವಾಗಿ ಎಲ್ಲಾದು ಒಳ್ಳೆಯದಾಗುತ್ತದೆ.

Related Post

Leave a Comment