ಚಿನ್ನ ಖರೀದಿಸುವ ಬದಲು ಅಕ್ಷಯ ತೃತೀಯ ದಿನ ಈ ಕೆಲಸಗಳನ್ನು ಮಾಡಿ!

ಅಕ್ಷಯ ತೃತೀಯ ದಿನ ಬರಿ ಚಿನ್ನವನ್ನೇ ಕೊಂಡುಕೊಳ್ಳುವುದು ಮಾತ್ರವಲ್ಲ. ಅಕ್ಷಯ ತೃತೀಯ ದಿನ ಬೆಳಗ್ಗೆ ಎದ್ದು ಗೋ ಪೂಜೆಯನ್ನು ಮಾಡಬೇಕು. ನಂತರ ಗೋವಿಗೆ ಅಕ್ಕಿ ಬೆಲ್ಲ ಹಾಗು ಗೋಧಿ ನುಚ್ಚು ಯಾವುದಾದರು ತಿನ್ನಿಸಬೇಕು. ಈ ರೀತಿ ಮಾಡಿದರೆ ತುಂಬಾನೇ ಒಳ್ಳೆಯ ಫಲ ನಿಮಗೆ ಸಿಗುತ್ತದೆ. ಗೋ ಪೂಜೆ ಮಾಡುವುದರಿಂದ ಸಂತಾನ ಪ್ರಾಪ್ತಿ ಕೂಡ ಆಗುತ್ತದೆ.ಅಕ್ಷಯ ತೃತೀಯ ದಿನ ಕುಚೇಲ ಕುಬೇರ ಅದ ದಿನ.

ಕುಬೇರ ಲಕ್ಷ್ಮಿಯನ್ನು ಪೂಜೆ ಮಾಡಿದರೆ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ.

ಇನ್ನು ಅಕ್ಷಯ ತೃತೀಯ ದಿನ ಮಾಡುವ ದಾನಕ್ಕೆ ತುಂಬಾನೇ ಮಹತ್ವವಿದೆ.ನಿಮ್ಮ ಶಕ್ತಿ ಅನುಸರವಾಗಿ ದಾನ ಮಾಡಿದರೆ ತುಂಬಾ ಒಳ್ಳೆಯದು. ಅವತ್ತಿನ ದಿನ ಮಜ್ಜಿಗೆ, ಭೂದಾನ, ಗೋದಾನ ಮಾಡುತ್ತಾರೆ.

ಇನ್ನು ನೀವು ಆ ದಿನ ವಸ್ತ್ರ ದಾನವನ್ನು ಸಹ ಮಾಡಬಹುದು. ಏನು ಇಲ್ಲದೆ ಇರುವ ನಿರ್ಗತಿಕರಿಗೆ ದಾನ ಮಾಡುವುದು ಒಳ್ಳೆಯದು. ಆ ದಿನ ನೀವು ಅನ್ನ ದಾನ ಮಾಡಿದರು ಸಹ ಒಳ್ಳೆಯದು. ಇನ್ನು ಧಾನ್ಯ ಗಳನ್ನು ಸಹ ದಾನವಾಗಿ ಕೊಡಬಹುದು.

ಹಾಸ್ಪಿಟಲ್ ಗೆ ಕಟ್ಟಿಸುವುದಕ್ಕೆ ಸಹಾಯ ಮಾಡುವುದು ಅಥವಾ ಅನ್ನ ದಾಸೋಹಕ್ಕೆ ಹೆಸರು ಕೊಡುವುದು ತುಂಬಾ ಒಳ್ಳೆಯದು. ಆದಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದರೆ ತುಂಬಾ ಒಳ್ಳೆಯದು.

Related Post

Leave a Comment