ಬೆಲ್ಲದ ಜೊತೆ ಕಾಳು ಮೆಣಸಿನಪುಡಿ ಬೆರೆಸಿ ತಿನ್ನೋದ್ರಿಂದ ಏನಾಗತ್ತೆ ಗೊತ್ತಾ?

ಅಡುಗೆ ಮನೆಯಲ್ಲಿ ಬಳಸುವ ಕೆಲವು ಪದಾರ್ಥವು ಆರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯದು. ಕೆಲವೊಂದು ಪದಾರ್ಥವನ್ನು ಮನೆಮದ್ದಾಗಿ ಬಳಸಬಹುದು. ಇನ್ನೂ ಬೆಲ್ಲ ಮತ್ತು ಕಾಳು ಮೆಣಸನ್ನು ಸೇವನೆ ಮಾಡಿದರೆ ಯಾವ ರೀತಿ ಪ್ರಯೋಜನ ಆಗುತ್ತದೆ ಎಂದು ತಿಳಿಸಿಕೊಡುತ್ತೇವೆ.

ಬೆಲ್ಲದಲ್ಲಿ ಹಲವಾರು ರೀತಿಯ ಪೋಷಕಾಂಶ ಹಾಗು ಖನಿಜಂಶ ಕೂಡ ಸಿಗುತ್ತದೆ. ರಕ್ತ ಹೆಚ್ಚು ಮಾಡುವಂತಹ ಅಂಶ ಇರುತ್ತದೆ. ಇನ್ನೂ ಕಾಳು ಮೆಣಸು ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಇನ್ನೂ ಶೀತ ನೆಗಡಿ ಕೆಮ್ಮು ಜ್ವರ ಬಂದರೆ ಬೆಲ್ಲ ಮತ್ತು ಕಾಳು ಮೆಣಸು ಸೇವನೆ ಮಾಡಿದರೆ ಬೇಗನೆ ಕಡಿಮೆ ಆಗುತ್ತದೆ. ಸ್ವಲ್ಪ ಬೆಲ್ಲದ ಜೊತೆ ಒಂದು ಪಿಂಚ್ ಕಾಳು ಮೆಣಸನ್ನು ಹಾಕಿ ತಿಂದರು ಕೂಡ ನಾರ್ಮಲ್ ಆಗಿ ಕಾಡುವ ಶೀತ ಜ್ವರದ ಸಮಸ್ಸೆಯಿಂದ ದೂರ ಇರಬಹುದು.ದೇಹದಲ್ಲಿ ಇಂಮ್ಯೂನಿಟಿ ಜಾಸ್ತಿ ಮಾಡಿಕೊಳ್ಳುವುದಕ್ಕೆ ಕೂಡ ಇದು ಸಹಾಯ ಆಗುತ್ತದೆ.

ವಯಸ್ಸು ಜಾಸ್ತಿ ಆದಂತೆ ಕೀಲು ನೋವಿನ ಸಮಸ್ಸೆ ಹೆಚ್ಚು ಕಾಡುತ್ತಾದೇ.ಇಂತವರಿಗೆ ಬೆಲ್ಲ ಮತ್ತು ಕಾಳು ಮೆಣಸು ಬೆಸ್ಟ್ ಮೆಡಿಸಿನ್ ಎಂದು ಹೇಳಬಹುದು. ಇದನ್ನು ನೀರಿಗೆ ಹಾಕಿಕೊಂಡು ಸಹ ಕುಡಿಯಬಹುದು. ಬೆಲ್ಲದಲ್ಲಿ ಕಬ್ಬಿಣ ಅಂಶ ಜಾಸ್ತಿ ಇರುತ್ತದೇ.ಬೇರೆ ಬೇರೆ ಪೋಷಕಾಂಶ ಎಲ್ಲಾ ಸಿಗುವುದರಿಂದ ಕೀಲು ನೋವಿನ ಸಮಸ್ಸೆ ಕೂಡ ಕಡಿಮೆ ಆಗುತ್ತದೆ.

ಬೆಲ್ಲ ಮತ್ತು ಕಾಳು ಮೆಣಸು ಸೇವನೇ ಮಾಡುವುದರಿಂದ ಜೀರ್ಣ ಕ್ರಿಯೆ ಸಮಸ್ಸೆ ಕೂಡ ನಿವಾರಣೆ ಆಗುತ್ತದೆ. ಇದರ ಸೇವನೆಯಿಂದ ಪಿರಿಯಡ್ ಟೈಮ್ ನಲ್ಲಿ ಬರುವ ಕೈ ಕಾಲು ನೋವು ಸೊಂಟ ನೋವು ಹೊಟ್ಟೆ ನೋವು ಕೂಡ ಕಡಿಮೆ ಆಗುತ್ತದೆ. ಒಂದು ಲೋಟ ನೀರಿಗೆ ಬೆಲ್ಲ ಮತ್ತು ಕಾಳು ಮೇಣಸಿನ ಪುಡಿ ಹಾಕಿ ಚೆನ್ನಾಗಿ ಕುದಿಸಿ ಕುಡಿಯಬಹುದು.

Related Post

Leave a Comment